Select Your Language

Notifications

webdunia
webdunia
webdunia
webdunia

ಗ್ರಾಮ ಪಂಚಾಯತ್‌ನಿಂದ ಸಂಸತ್ತಿನವರೆಗೂ ಬಿಜೆಪಿ ಅಧಿಕಾರ ಗಳಿಸಬೇಕು: ಅಮಿತ್ ಶಾ

ಗ್ರಾಮ ಪಂಚಾಯತ್‌ನಿಂದ ಸಂಸತ್ತಿನವರೆಗೂ ಬಿಜೆಪಿ ಅಧಿಕಾರ ಗಳಿಸಬೇಕು: ಅಮಿತ್ ಶಾ
ಬೆಂಗಳೂರು , ಭಾನುವಾರ, 5 ಜುಲೈ 2015 (14:53 IST)
ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಮತ್ತಷ್ಟು ಬಲಗೊಳಿಸುವ ಮಹಾತ್ವಾಕಾಂಕ್ಷೆಯೊಂದಿಗೆ ನಗರದ ಅರಮನೆ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿರುವ ಬಿಜೆಪಿ ಮಹಾ ಸಂಪರ್ಕ ಅಭಿಯಾನಕ್ಕೆ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್‌‌ ಶಾ ಚಾಲನೆ ನೀಡಿದ್ದಾರೆ.

ಕಾರ್ಯಕ್ರಮವನ್ನು  ಉದ್ಘಾಟನೆ ಮಾಡಿದ ಬಳಿಕ ಅಮಿತ್ ಶಾ ಮಾಡಿದ ಭಾಷಣದ ಮುಖ್ಯಾಂಶಗಳು ಇಂತಿದ್ದವು. 
 
*ಪಕ್ಷ  ಸಂವರ್ಧನೆಯ ನಿಟ್ಟಿನಲ್ಲಿ ಒಂದನೇ ಹಂತದಲ್ಲಿ ಸದಸ್ಯತ್ವ ನೋಂದಣಿ ಕಾರ್ಯಕ್ರಮವನ್ನು ನಡೆಯಲಾಗಿದ್ದು ಅದು ಸಂಪೂರ್ಣವಾಗಿ ಯಶಸ್ವಿಯಾಗಿದೆ. ಕರ್ನಾಟದಲ್ಲಿ 88 ಲಕ್ಷ ಮಂದಿಗೆ ಸದಸ್ಯತ್ವ ನೀಡಲಾಗಿದ್ದು, ದೇಶದಲ್ಲಿ 11 ಕೋಟಿಗೂ ಹೆಚ್ಚು ಸದಸ್ಯತ್ವ ನೋಂದಣಿಯಾಗಿದೆ.
 
*2 ನೇ ಹಂತದಲ್ಲಿ ಮಹಾಸಂಪರ್ಕ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಹೊಸದಾಗಿ ಸದಸ್ಯತ್ವ ಪಡೆದವರ ಸಂಪೂರ್ಣ ನಿಖರ ಮಾಹಿತಿ, ಆರ್ಥಿಕ ಹಿನ್ನೆಲೆ ಇತ್ಯಾದಿಗಳನ್ನೊಳಗೊಂಡ ಇತರೇ ವಿವರಗಳನ್ನು ಗಣಕೀಕೃತ ಮಾಡಬೇಕಿದೆ. ಎಲ್ಲರ ಮಾಹಿತಿ ಒಂದೇ ಕಡೆ ಸಿಗುವಂತೆ ಆಧುನಿಕ ತಂತ್ರಜ್ಞಾನ ವ್ಯವಸ್ಥೆಯನ್ನು ಅಳವಡಿಸಲಿದ್ದೇವೆ.
 
* ಪಕ್ಷ ಬಲವರ್ಧನೆಯ 3 ನೇ ಹಂತದಲ್ಲಿ ಬಿಜೆಪಿ ಸಿದ್ಧಾಂತದ ಅನ್ವಯ ಪಕ್ಷದ ಕಾರ್ಯಕರ್ತರಿಗೆ ತರಬೇತಿ ನೀಡಲಾಗುವುದು.
ಕೇಂದ್ರ ಸಚಿವ ಪಿಯೂಶ್ ಗೋಯಲ್ ತರಬೇತಿ ನೇತೃತ್ವವನ್ನು ವಹಿಸಿಕೊಳ್ಳಲಿದ್ದಾರೆ. ಪ್ರಶಿಕ್ಷಣ ಅಭಿಯಾನ ಹೆಸರಲ್ಲಿ ಕಾರ್ಯಕ್ರಮ ನಡೆಸಲಾಗುತ್ತದೆ. ನಾಲ್ಕು ತಿಂಗಳ ಅವಧಿಯಲ್ಲಿ 15 ಲಕ್ಷ ಮಂದಿಗೆ ತರಬೇತಿ ನೀಡುವ ಉದ್ದೇಶ ಇದೆ. ಇಂತಹ ಕಾರ್ಯ ಕೇವಲ ದೇಶದಲ್ಲಿ ಮಾತ್ರವಲ್ಲ, ವಿದೇಶದಲ್ಲೂ ನಡೆದಿಲ್ಲ. ವ್ಯವಸ್ಥಿತವಾಗಿ ಇದನ್ನು ನಡೆಸಲಾಗುವುದು.
 
*12 ತಿಂಗಳಲ್ಲಿ ಕೇಂದ್ರ ಸರ್ಕಾರ 24 ಯೋಜನೆಗಳನ್ನು ಘೋಷಿಸಿದೆ. ಅದರಲ್ಲಿ 14 ಯೋಜನೆಗಳ ಯಶಸ್ಸಿಗೆ ಪಕ್ಷದ ಕಾರ್ಯಕರ್ತರು ದಣವರಿಯದೆ ದುಡಿದಿದ್ದಾರೆ. ಇನ್ನೂ ಶ್ರಮಿಸುತ್ತಲೇ ಇದ್ದಾರೆ. ಇದನ್ನು ಮುಂದುವರೆಸಿದ್ದಲ್ಲಿ ಮುಂದಿನ 25 ವರ್ಷಗಳ ಕಾಲ ಪಕ್ಷ ಬಲಗೊಳ್ಳಲಿದೆ.
 
*ಎರಡು ಸೀಟುಗಳನ್ನು ಗೆದ್ದಾಗಲೂ ಪಕ್ಷದಲ್ಲಿ ಒಡಕಿರಲಿಲ್ಲ. ಈಗಲೂ ಒಡಕಿಲ್ಲ. ಮುಂದೆಯೂ ಬಿಜೆಪಿ ಒಡೆಯುವುದಿಲ್ಲ.
 
* ಕೇರಳ ,ತಮಿಳುನಾಡು, ಆಂಧ್ರಪ್ರದೇಶ್, ತೆಲಂಗಾಣ , ಒಡಿಸ್ಸಾ, ಪಶ್ಚಿಮ ಬಂಗಾಳ, ಆಸ್ಸಾಂಗಳಲ್ಲಿ ಪಕ್ಷವನ್ನು ಬಲಗೊಳಿಸಬೇಕಿದೆ. 
 
*ಪಂಚಾಯತ್‌ನಿಂದ ಪಾರ್ಲಿಮಂಟ್‌ವರೆಗೆ ಭಾರತೀಯ ಜನತಾ ಪಕ್ಷ ಅಧಿಕಾರವನ್ನು ಗಳಿಸಬೇಕಿದೆ
 
ಎಂದವರು ಪದಾಧಿಕಾರಿಗಳನ್ನುದ್ದೇಶಿಸಿ ಹೇಳಿದ್ದಾರೆ. 
 
ಕಳೆದ ರಾತ್ರಿಯೇ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ್ದ ಶಾ, ಇಂದು 11 ಗಂಟೆಗೆ ಅಭಿಯಾನಕ್ಕೆ ಚಾಲನೆ ನೀಡಿದರು. ಇಂದಿನ ಮಹಾಸಂಪರ್ಕ ಅಭಿಯಾನದಲ್ಲಿ 8 ರಾಜ್ಯಗಳ ಪದಾಧಿಕಾರಿಗಳು, ಜಿಲ್ಲಾ ಪದಾಧಿಕಾರಿಗಳು ಸಂಸದರು, ಶಾಸಕರು ಪಾಲ್ಗೊಂಡಿದ್ದಾರೆ. 
 
ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಾದ ಅಂಡಮಾನ್ ನಿಕೋಬಾರ್, ಲಕ್ಷ ದ್ವೀಪಗಳಿಂದ 800ಕ್ಕೂ ಹೆಚ್ಚು ಬಿಜೆಪಿ ಪದಾಧಿಕಾರಿಗಳು, ರಾಜ್ಯ ಪದಾಧಿಕಾರಿಗಳು ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ. 
 
ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಸದೃಢಗೊಳಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ. ಇಂದು ಸಂಜೆ ಬಿಬಿಎಂಪಿ ಚುನಾವಣೆ ಕುರಿತು ಕೂಡ ನಾಯಕರೊಂದಿಗೆ ಅಮಿತ್ ಶಾ ಚರ್ಚಿಸುವ ಸಾಧ್ಯತೆ ಇದೆ.

Share this Story:

Follow Webdunia kannada