Select Your Language

Notifications

webdunia
webdunia
webdunia
webdunia

ನಾಲ್ಕು ವರ್ಷಗಳಿಂದ ಸೆಕ್ಸ್ ಸುಖ ಅನುಭವಿಸಿ ಮದುವೆಯಾಗಲ್ಲ ಎಂದವನಿಗೆ ಬಿತ್ತು ಯುವತಿಯಿಂದ ಗೂಸಾ

ನಾಲ್ಕು ವರ್ಷಗಳಿಂದ ಸೆಕ್ಸ್ ಸುಖ ಅನುಭವಿಸಿ ಮದುವೆಯಾಗಲ್ಲ ಎಂದವನಿಗೆ ಬಿತ್ತು ಯುವತಿಯಿಂದ ಗೂಸಾ
ಬಸ್ತಿ(ಉತ್ತರಪ್ರದೇಶ) , ಸೋಮವಾರ, 20 ಏಪ್ರಿಲ್ 2015 (17:31 IST)
ಕಳೆದ ನಾಲ್ಕು ವರ್ಷಗಳಿಂದ ವಿವಾಹವಾಗುವುದಾಗಿ ನಂಬಿಸಿ ಸೆಕ್ಸ್ ಸುಖ ಅನುಭವಿಸಿ ವಂಚಿಸಿದ್ದ ಯುವಕನನ್ನು ಯುವತಿಯೊಬ್ಬಳು ಕೋರ್ಟ್ ಆವರಣದಲ್ಲಿಯೇ ಥಳಿಸಿದ ಘಟನೆ ವರದಿಯಾಗಿದೆ.

ಮೂಲಗಳ ಪ್ರಕಾರ, ನಾಲ್ಕು ವರ್ಷಗಳಿಂದ ರೋಹಿತ್ ಮತ್ತು ಕುಸುಮ್ ಲವ್ವಿಡವ್ವಿ ನಡೆಸಿದ್ದರು. ಆದರೆ, ನಾಲ್ಕು ವರ್ಷಗಳ ನಂತರ ಕುಸುಮ್‌ಳನ್ನು ವಿವಾಹವಾಗಲು ರೋಹಿತ್ ನಿರಾಕರಿಸಿದ. ಇದರಿಂದಾಗಿ ಕುಸುಮ್, ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಆರೋಪ ಹಾಗೂ ಆರೋಪಿಯಿಂದ ಜೀವ ಬೆದರಿಕೆಯಿದೆ ಎಂದು ದೂರು ದಾಖಲಿಸಿದ್ದಾಳೆ.

ಆರೋಪಿ ರೋಹಿತ್ ಜಾಮೀನಿನ ಮೇಲೆ ಬಿಡುಗಡೆಯಾಗಿ ಪ್ರಕರಣದ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗಿದ್ದುದನ್ನು ನೋಡಿದ ಯುವತಿ ಕುಸುಮ್, ಸಾರ್ವಜನಿಕರ ಸಮ್ಮುಖದಲ್ಲಿಯೇ ಥಳಿಸಿ ತನ್ನ ಸೇಡನ್ನು ತೀರಿಸಿಕೊಂಡಿದ್ದಾಳೆ.   

Share this Story:

Follow Webdunia kannada