Webdunia - Bharat's app for daily news and videos

Install App

ಸ್ನೂಪ್‌ಗೇಟ್ ವಿವಾದದಲ್ಲಿ ಮೋದಿ ಮೇಲೆ ವಾಗ್ದಾಳಿ ನಡೆಸಲು ನನಗೆ ಒತ್ತಡ ಹೇರಲಾಯಿತು: ಜಯಂತಿ ನಟರಾಜನ್

Webdunia
ಶುಕ್ರವಾರ, 30 ಜನವರಿ 2015 (18:13 IST)
ಕಾಂಗ್ರೆಸ್‌ಗೆ  ಗುಡ್‌ಬೈ ಹೇಳಿರುವ ಮಾಜಿ ಸಚಿವೆ ಜಯಂತಿ ನಟರಾಜನ್ ತಮ್ಮ ಈ ನಡೆಗೆ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿಯ ಮೇಲೆ ಗಂಭೀರವಾದ ಆರೋಪ ಹೊರಿಸಿದ್ದಾರೆ.
 
ರಾಷ್ಟ್ರೀಯ ದಿನಪತ್ರಿಕೆಯೊಂದರಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ ನಟರಾಜನ್ ಸೋನಿಯಾ ಗಾಂಧಿ ಅವರಿಗೆ ಪತ್ರವೊಂದನ್ನು ಬರೆದಿದ್ದು ಅದರಲ್ಲವರು ಸ್ನೂಪ್‌ಗೇಟ್ ವಿವಾದವನ್ನು ಉಲ್ಲೇಖಿಸಿದ್ದಾರೆ.
 
"ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿ ನಾನು ಸಚಿವರಾಗಿದ್ದಾಗ ಸ್ನೂಪ್‌ಗೇಟ್ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ಮಾಡುವಂತೆ ಕಾಂಗ್ರೆಸ್ ತಮಗೆ ಒತ್ತಾಯಿಸಿತು". 
 
"ಪ್ರಾರಂಭದಲ್ಲಿ ನಾನಿದಕ್ಕೆ ಸಮ್ಮತಿಸಲಿಲ್ಲ. ಮೋದಿಯವರ ನೀತಿ ಮತ್ತು ಆಡಳಿತದ ಕುರಿತಂತೆ ನಮ್ಮ ಪಕ್ಷ ವಾಗ್ದಾಳಿ ನಡೆಸಬೇಕು. ಆದರೆ ಅಪರಿಚಿತ ಮಹಿಳೆಯನ್ನು ಈ ವಿವಾದದಲ್ಲಿ ಎಳೆದು ತರುವುದು ನನಗೆ ಇಷ್ಟವಿರಲಿಲ್ಲ ಎಂಬುದು ನನ್ನ ಅಭಿಪ್ರಾಯವಾಗಿತ್ತು. ಆದರೆ ನನ್ನ ಮುಂದೆ ಆಯ್ಕೆಗಳಿರಲಿಲ್ಲ. ಒತ್ತಡದ ಪರಿಣಾಮವಾಗಿ ನಾನು ಮೋದಿ ವಿರುದ್ಧ ಮಾಧ್ಯಮಗಳ ಮುಂದೆ ಮಾತನಾಡಬೇಕಾಯಿತು" ಎಂದು ಪತ್ರದಲ್ಲಿ ಅವರು ಗಂಭೀರ ಆರೋಪವನ್ನು ದಾಖಲಿಸಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments