Webdunia - Bharat's app for daily news and videos

Install App

ಯಾರನ್ನೂ ಸ್ನೇಹಿತರನ್ನಾಗಿಸಿಕೊಳ್ಳಲು ಭಯವಾಗತ್ತೆ: ಉದ್ದವ್ ಠಾಕ್ರೆ

Webdunia
ಗುರುವಾರ, 16 ಜೂನ್ 2016 (16:58 IST)
2014ರಲ್ಲಿ ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಜತೆಗಿನ 25 ವರ್ಷಗಳ ದೀರ್ಘ ಸ್ನೇಹವನ್ನು ಮುರಿದುಕೊಂಡಿದ್ದ ಶಿವಸೇನೆ ಅಷ್ಟೇ ಬೇಗ ಮತ್ತೆ ಒಂದಾಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಬಿರುಕು ಬಿಟ್ಟಿದ್ದ ಮಿತ್ರತ್ವವೆನೋ ಒಗ್ಗೂಡಿತು. ಆದರೆ ಬಿಜೆಪಿ ವಿರುದ್ಧ ಆಗಾಗ ಶಿವಸೇನೆ ಗುಡುಗುತ್ತಿರುವುದನ್ನು ಗಮನಿಸಿದರೆ ಅದರ ಗಾಯ ಇನ್ನು ಮಾಗಿಲ್ಲವೆಂಬುದಂತೂ ಸತ್ಯವೆನಿಸುತ್ತದೆ. 

ಇದಕ್ಕೆ ಪೂರಕವೆಂಬಂತಿದೆ ಶಿವಸೇನಾ ನಾಯಕ ಉದ್ಧವ್ ಠಾಕ್ರೆ ರಾಷ್ಟ್ರೀಯ ಪತ್ರಿಕೆಯೊಂದರ ಜತೆ ಆಡಿದ್ದ ಮಾತುಗಳು. ತಮ್ಮ ಪಕ್ಷ ಸ್ನೇಹಿತರಿಂದ ಮತ್ತು ವೈರಿಗಳಿಂದ ಪಾಠ ಕಲಿತಿದೆ. ಈಗ ಯಾರನ್ನೂ ಸ್ನೇಹಿತರೆಂದು ಕರೆಯಬೇಕಾದರೆ ನಮಗೆ ಭಯವಾಗುವಂತೆ ಮಾಡಿದೆ ಎಂದು ಅವರು ಹೇಳಿದ್ದಾರೆ. 
 
ಇದು ಶುಭಶಕುನವೆನ್ನಿ ಅಥವಾ ಅಶುಭವೆನ್ನಿ. ಯಾರು ನಮ್ಮವರು, ಯಾರು ಪರರು, ಯಾರು ಸ್ನೇಹಿತರು ಮತ್ಯಾರು ಶತ್ರುಗಳು? ಎಂಬ ಸಂಪೂರ್ಣ ಚಿತ್ರಣ ಈಗ ಸ್ಪಷ್ಟವಾಗಿದೆ. ಯಾರನ್ನಾದರೂ ಗೆಳೆಯರೆನ್ನಬೇಕಾದರೆ ಆತಂಕವಾಗುತ್ತದೆ. ನಿಜವಾದ ಸ್ನೇಹಿತರೆನ್ನಲು ಯಾರಾದರು ಉಳಿದುಕೊಂಡಿದ್ದಾರೆಯೇ? ಎಂದು ಠಾಕ್ರೆ ಪ್ರಶ್ನಿಸಿದ್ದಾರೆ. 
 
ಈ ಸಂದರ್ಭದಲ್ಲಿ ಅವರು ಯಾವುದೇ ಪಕ್ಷದ ಹೆಸರನ್ನು ಉಲ್ಲೇಖಿಸಲಿಲ್ಲವಾದರೂ ಇದು ಬಿಜೆಪಿಯನ್ನುದ್ದೇಶಿಸಿ ಹೇಳಿದ್ದು ಎಂಬುದಂತೂ ಸ್ಪಷ್ಟವಾಗಿತ್ತು. ಬಿಜೆಪಿ ತಮಗೆ ವಂಚಿಸಿದೆ ಎಂದು ಸೇನಾ ನಾಯಕರೆಲ್ಲರೂ ಒಪ್ಪಿಕೊಳ್ಳುತ್ತಿದ್ದಾರೆ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬೈರತಿ ಬಸವರಾಜು ವಿರುದ್ಧ ಪೊಲೀಸರೇ ಹೆಸರು ಸೇರಿಸಿಕೊಂಡಿದ್ದಾರೆ: ಆರ್ ಅಶೋಕ್

Arecanut price: ಅಡಿಕೆ ಬೆಲೆ ಯಥಾಸ್ಥಿತಿ, ಕೊಬ್ಬರಿ ಬೆಲೆ ಇಳಿಮುಖದತ್ತ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಕೆಮ್ಮಿದಾಗ ಎದೆನೋವಾಗುತ್ತಿದ್ದರೆ ಏನರ್ಥ

ರಾಬರ್ಟ್ ವಾದ್ರಾ ವಿರುದ್ಧ ಇಡಿ ಚಾರ್ಜ್ ಶೀಟ್: ಮುಗಿಬಿದ್ದ ಕಾಂಗ್ರೆಸ್ ನಾಯಕರು

ಮುಂದಿನ ಸುದ್ದಿ
Show comments