Webdunia - Bharat's app for daily news and videos

Install App

ಅದ್ದೂರಿ ಮದುವೆಗಳಿಗೆ ಬೀಳಲಿದೆ ಬ್ರೇಕ್?

Webdunia
ಗುರುವಾರ, 16 ಫೆಬ್ರವರಿ 2017 (10:12 IST)
ಸಂಪತ್ತಿನ ಪ್ರದರ್ಶನಕ್ಕೆ ಅದ್ದೂರಿ ವಿವಾಹ ಮಾಡುವ ಶ್ರೀಮಂತರ ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮುಂದಾಗಿದ್ದು, ಈ ಸಂಬಂಧ ಲೋಕಸಭೆಯಲ್ಲಿ ಮಸೂದೆ ಮಂಡನೆಯಾಗಿದೆ.
ಮಂಡನೆಯಾಗಿರುವ ಮಸೂದೆಯ ಕಡ್ಡಾಯ ನೋಂದಣಿ ಮತ್ತು ವ್ಯರ್ಥ ವೆಚ್ಚದ ತಡೆಗಟ್ಟುವಿಕೆ ಮಸೂದೆ-2016  ಪ್ರಕಾರ ಮದುವೆಗೆ 5 ಲಕ್ಷಕ್ಕಿಂತ ಹೆಚ್ಚು ಹಣ ಖರ್ಚು ಮಾಡುತ್ತಿದ್ದರೆ ಮೊದಲೇ ಈ ಕುರಿತು ವಿವರಣೆ ನೀಡಬೇಕು ಮತ್ತು ಅದರಲ್ಲಿ 10 ಪ್ರತಿಶತದಷ್ಟು ಹಣವನ್ನು ಬಡ ಹೆಣ್ಣು ಮಕ್ಕಳ ಕಲ್ಯಾಣಾಭಿವೃದ್ಧಿಗೆ ನೀಡಬೇಕು. 
 
ಮದುವೆ ಸಮಾರಂಭಕ್ಕೆ ಅತಿ ಹೆಚ್ಚು ಅತಿಥಿಗಳನ್ನು ಆಹ್ವಾನಿಸುವುದಕ್ಕೆ ಕಡಿವಾಣ ಹಾಕಲಿರುವ ಮಸೂದೆಯ ಪ್ರಕಾರ, 5 ಲಕ್ಷಕ್ಕಿಂತ ಹೆಚ್ಚು ಖರ್ಚು ಮಾಡಿದರೆ ಖರ್ಚು ಮಾಡಿದ ಹಣದಲ್ಲಿ ಶೇ. 10 ರಷ್ಟು ಹಣವನ್ನು ಬಡ ಹೆಣ್ಣುಮಕ್ಕಳ ಮದುವೆ ಕಾರ್ಯಕ್ರಮಗಳಿಗೆ ನೀಡುವುದು ಕಡ್ಡಾಯವಾಗಿದೆ. 
 
ಕಾಂಗ್ರೆಸ್ ಸಂಸದೆ ರಂಜಿತ್ ರಂಜನ್ (ಸಂಸದ ಪಪ್ಪು ಯಾದವ್ ಪತ್ನಿ)  ಈ ಮಸೂದೆಯನ್ನು ಮಂಡಿಸಿದ್ದು, ಮುಂದಿನ ಲೋಕಸಭೆಯ ಕಲಾಪದಲ್ಲಿ ಇದನ್ನು ಖಾಸಗಿ ಮಸೂದೆಯನ್ನಾಗಿ ಪರಿಗಣಿಸುವ ಸಾಧ್ಯತೆ ಇದೆ.
 
ಮದುವೆ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯ ಅತಿಥಿಗಳನ್ನು ಆಹ್ವಾನಿಸುವುದಕ್ಕೂ ಈ ಮಸೂದೆಯಲ್ಲಿ ಕಡಿವಾಣ ಹಾಕಲಾಗುತ್ತಿದ್ದು, ವಿವಾಹ ಸಮಾರಂಭದಲ್ಲಿ ದುಂದುವೆಚ್ಚವನ್ನು ತಡೆಯುವುದು, ಸರಳ ವಿವಾಹಕ್ಕೆ ಉತ್ತೇಜನ ಈ ಮಸೂದೆಯ ಪ್ರಮುಖ ಉದ್ದೇಶವಾಗಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ