Select Your Language

Notifications

webdunia
webdunia
webdunia
webdunia

ವ್ಯಾಪಂ ಹಗರಣದಲ್ಲಿ ಮಧ್ಯಪ್ರದೇಶ ಸಿಎಂ ಚೌಹಾನ್ ಪ್ರಭಾವ ಬೀರಲು ಯತ್ನಿಸಿದ್ದರು: ಆನಂದ್ ರೈ

ವ್ಯಾಪಂ ಹಗರಣದಲ್ಲಿ ಮಧ್ಯಪ್ರದೇಶ ಸಿಎಂ ಚೌಹಾನ್ ಪ್ರಭಾವ ಬೀರಲು ಯತ್ನಿಸಿದ್ದರು: ಆನಂದ್ ರೈ
ಭೋಪಾಲ್ , ಬುಧವಾರ, 2 ಸೆಪ್ಟಂಬರ್ 2015 (21:30 IST)
ಹೈ ಪ್ರೋಫೈಲ್ ವ್ಯಾಪಂ ಹಗರಣದಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಪ್ರಭಾವ ಬೀರಲು ಯತ್ನಿಸಿದ್ದರು ಎಂದು ಹಗರಣ ಹೊರಗ ಬರಲು ಕಾರಣಕರ್ತರಾದ ಡಾ. ಆನಂದ್ ರೈ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.
   
ವ್ಯಾಪಂ ಹಗರಣದ ಪ್ರಚಾರವನ್ನು ಕೈ ಬಿಟ್ಟಲ್ಲಿ ಅದರ ಬದಲಿಗೆ ಇಂದೋರ್‌ಗೆ ಮರುವರ್ಗಾವಣೆ ಮಾಡುವುದಾಗಿ ಆಮಿಷವೊಡ್ಡಿದ್ದರು ಎಂದು ತಿಳಿಸಿದ್ದಾರೆ. 
 
ಮಧ್ಯಪ್ರದೇಶ ಹೈಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಸಿದ ರೈ, ಸಿಎಂ ಚೌಹಾನ್ ಆಗಸ್ಟ್ 11 ರಂದು ರಾತ್ರಿ 9.45 ಕ್ಕೆ ತಮ್ಮ ಅಧಿಕೃತ ನಿವಾಸದಲ್ಲಿ ಭೇಟಿ ಮಾಡಿ, ವ್ಯಾಪಂ ಹಗರಣದ ಪ್ರಚಾರ ತೊರೆದಲ್ಲಿ ಮತ್ತೆ ಇಂದೋರ್‌ಗೆ ವರ್ಗಾಯಿಸುವುದಾಗಿ ಭರವಸೆ ನೀಡಿದ್ದರು ಎಂದು ಹೇಳಿದ್ದಾರೆ. 
 
ಡಾ. ಆನಂದ್ ರೈ ಸಲ್ಲಿಸಿದ ಅಫಿಡವಿಟ್‌ಗೆ ಏಳು ದಿನಗಳೊಳಗಾಗಿ ಉತ್ತರಿಸುವಂತೆ ರಾಜ್ಯ ಸರಕಾರಕ್ಕೆ ಕೋರ್ಟ್ ಆದೇಶಿಸಿದೆ.
 
ಡಾ. ಆನಂದ್ ರೈ ಮತ್ತು ಅವರ ಪತ್ನಿ ಇಬ್ಬರು ಸರಕಾರಿ ವೈದ್ಯರಾಗಿದ್ದಾರೆ, ರೈ ಪತ್ನಿಯವರನ್ನು ಒಂದು ತಿಂಗಳಲ್ಲಿ ಎರಡು ಬಾರಿ ವರ್ಗಾವಣೆ ಮಾಡಲಾಗಿದ್ದು, ಇದೀಗ ಧಾರ್ ಜಿಲ್ಲೆಗೆ ವರ್ಗಾಯಿಸಲಾಗಿದೆ.
 
ಕಳೆದ ಜುಲೈ 13 ರಂದು ಸಿಬಿಐ ವ್ಯಾಪಂ ಹಗರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದು ಶೀಘ್ರದಲ್ಲಿ ಪ್ರಮುಖ ಆರೋಪಿಗಳನ್ನು ಬಂಧಿಸುವ ವಿಶ್ವಾಸವಿದೆ ಎಂದು ಹೇಳಿಕೆ ನೀಡಿದೆ.
 

Share this Story:

Follow Webdunia kannada