Select Your Language

Notifications

webdunia
webdunia
webdunia
webdunia

ವ್ಯಾಪಂ ಹಗರಣ: ಕೋರ್ಟ್‌ಗಳು ಮಾತ್ರ ಸಿಬಿಐಗೆ ನೀಡುವ ಅಧಿಕಾರ ಹೊಂದಿವೆ ಎಂದ ರಾಜನಾಥ್ ಸಿಂಗ್

ವ್ಯಾಪಂ ಹಗರಣ: ಕೋರ್ಟ್‌ಗಳು ಮಾತ್ರ ಸಿಬಿಐಗೆ ನೀಡುವ ಅಧಿಕಾರ ಹೊಂದಿವೆ ಎಂದ ರಾಜನಾಥ್ ಸಿಂಗ್
ನವದೆಹಲಿ , ಸೋಮವಾರ, 6 ಜುಲೈ 2015 (19:03 IST)
ವ್ಯಾಪಂ ಹಗರಣದ ಬಗ್ಗೆ ನ್ಯಾಯಾಲಯಗಳು ಮಾತ್ರ ಸಿಬಿಐ ತನಿಖೆ ನಡೆಸಲು ಆದೇಶಿಸಬಹುದು ಎನ್ನುವ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾನ್ ಹೇಳಿಕೆಯನ್ನು ಬೆಂಬಲಿಸಿದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಮಧ್ಯಪ್ರದೇಶದ ಹೈಕೋರ್ಟ್ ಅಥವಾ ಸುಪ್ರೀಂಕೋರ್ಟ್ ಈ ವಿಷಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಹೇಳಿದ್ದಾರೆ.  
 
ವ್ಯಾಪಂ ಹಗರಣದ ತನಿಖೆಯ ಮೇಲ್ವಿಚಾರಣೆಯನ್ನು ಮಧ್ಯಪ್ರದೇಶ ಸರಕಾರ ಮಾಡುತ್ತಿಲ್ಲ. ಬದಲಾಗಿ ಹೈಕೋರ್ಟ್ ಮಾಡುತ್ತಿದೆ. ಪ್ರಕರಣವನ್ನು ಸಿಬಿಐಗೆ ನೀಡಬೇಕು ಎನ್ನುವ ನಿರ್ಧಾರ ಹೈಕೋರ್ಟ್ ಮಾತ್ರ ತೆಗೆದುಕೊಳ್ಳಬಹುದಾಗಿದೆ. ವಿಪಕ್ಷಗಳು ವಿಷಯವನ್ನು ದೊಡ್ಡದಾಗಿ ಬಿಂಬಿಸಲು ಪ್ರಯತ್ನಿಸುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
 
ವ್ಯಾಪಂ ಹಗರಣದಲ್ಲಿ ಮಧ್ಯಪ್ರದೇಶದ ರಾಜ್ಯಪಾಲ ರಾಮ್ ನರೇಶ್ ಯಾದವ್ ಭಾಗಿಯಾಗಿದ್ದರಿಂದ ಅವರನ್ನು ರಾಜ್ಯಪಾಲ ಹುದ್ದೆಯಿಂದ ವಜಾಗೊಳಿಸಬೇಕು ಎಂದು ಆರೋಪಿಸಿ ಕೆಲ ವಕೀಲರು ಸಲ್ಲಿಸಿದ ದೂರಿನ ವಿಚಾರಣೆ ನಡೆಸುವುದಾಗಿ ಸುಪ್ರೀಂಕೋರ್ಟ್‌ ಹೇಳಿಕೆಯಿಂದಾಗಿ ಚೌಹಾನ್ ಸಿಬಿಐಗೆ ವಹಿಸುವ ಬಗ್ಗೆ ಒತ್ತಡದಲ್ಲಿರುವಾಗ ಕೇಂದ್ರ ಸರಕಾರ ಅವರಿಗೆ ಬೆಂಬಲ ಸೂಚಿಸಿದೆ.  
 
ಮಧ್ಯಪ್ರದೇಶದ ವೃತ್ತಿ ತೆರಿಗೆ ಪರೀಕ್ಷೆ ಹಗರಣ ಬಹಿರಂಗವಾದ ನಂತರ ಹಗರಣದಲ್ಲಿ ಭಾಗಿಯಾದ 45 ಜನರು ಅಸಹಜ ಸಾವಿಗೀಡಾಗಿದ್ದರಿಂದ ಚೌಹಾನ್ ಸರಕಾರ ವಿಪಕ್ಷಗಳಿಂದ ಭಾರಿ ತರಾಟೆಗೆ ಒಳಗಾಗಿದೆ.  
 

Share this Story:

Follow Webdunia kannada