Select Your Language

Notifications

webdunia
webdunia
webdunia
webdunia

ಲಲಿತ್ ಮೋದಿ ವಿವಾದ: ಬಿಜೆಪಿಯಲ್ಲಿಯೇ ಭಿನ್ನಮತ ಸ್ಫೋಟ

ಲಲಿತ್ ಮೋದಿ ವಿವಾದ: ಬಿಜೆಪಿಯಲ್ಲಿಯೇ ಭಿನ್ನಮತ ಸ್ಫೋಟ
ನವದೆಹಲಿ , ಮಂಗಳವಾರ, 23 ಜೂನ್ 2015 (15:42 IST)
ಇದೀಗ ಲಲಿತ್ ಮೋದಿ ವಿವಾದಕ್ಕೆ ಸಂಬಂಧಿಸಿದಂತೆ ಭಿಜೆಪಿ ಪಕ್ಷದಲ್ಲಿಯೇ ಭಿನ್ನಮತ ಆರಂಭವಾಗಿದೆ. ತಲೆಮರೆಸಿಕೊಂಡ ಲಲಿತ್ ಮೋದಿಯಂತಹ ವ್ಯಕ್ತಿಗಳಿಗೆ ಯಾರು ಸಹ ಸಹಾಯಹಸ್ತ ಚಾಚಬಾರದು ಎಂದು ಅವರಿಗೆ ಸುಷ್ಮಾ ಮತ್ತು ರಾಜೇ ವಿರುದ್ಧ ಬಿಜೆಪಿ ಸಂಸದ ಆರ್‌.ಕೆ.ಸಿಂಗ್ ವಾಗ್ದಾಳಿ ನಡೆಸಿದ್ದಾರೆ. 
 
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಲಲಿತ್ ಮೋದಿ ತಲೆಮರೆಸಿಕೊಂಡಂತಹ ವ್ಯಕ್ತಿಯಾಗಿದ್ದರಿಂದ ಅಂತಹ ವ್ಯಕ್ತಿಗಳಿಗೆ ನೆರವು ನೀಡುವುದು ಸರಿಯಲ್ಲ. ಕೇಂದ್ರ ಸರಕಾರ ಅವರ ಪಾಸ್‌ಪೋರ್ಟ್‌ನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಲಲಿತ್ ಮೋದಿಯನ್ನು ಕೂಡಲೇ ವಾಪಸ್ ಭಾರತಕ್ಕೆ ಕರೆಸಿಕೊಂಡು ಪ್ರಕರಣ ಎದುರಿಸುವಂತಾಗಬೇಕು ಎಂದರು.   
 
ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತು ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೇ ಲಲಿತ್ ಮೋದಿಗೆ ನೆರವು ನೀಡಿದ ಆರೋಪ ಎದುರಿಸುತ್ತಿದ್ದಾರೆ. ಲಲಿತ್ ಮೋದಿ ಇಂಗ್ಲೆಂಡ್‌ಗೆ ಪ್ರ.ಯಾಣಿಸಲು ಅನುಕೂಲವಾಗಲು ಸಚಿವೆ ಸುಷ್ಮಾ ಸ್ವರಾಜ್ ಬ್ರಿಟನ್ ಸಂಸದ ಕೈಥ್ ವಾಜ್ ಮತ್ತು ಬ್ರಿಟನ್ ರಾಯಭಾರಿಯೊಂದಿಗೆ ಚರ್ಚಿಸಿರುವುದು ವಿವಾದಕ್ಕೀಡು ಮಾಡಿದೆ. 
 
ಕಳೆದ 2011ರಲ್ಲಿ ವಿಧಾನಸಭೆಯಲ್ಲಿ ವಿಪಕ್ಷ ನಾಯಕರಾಗಿದ್ದ ವಸುಂಧರಾ ರಾಜೇ, ಲಲಿತ್ ಮೋದಿ ವೀಸಾ ಅರ್ಜಿಗೆ ಸಾಕ್ಷಿಯಾಗಿ ಸಹಿಹಾಕಿದ್ದರಿಂದ ವಿಪಕ್ಷಗಳ ಕೆಂಗೆಣ್ಣಿಗೆ ಗುರಿಯಾಗಿದ್ದಾರೆ. 
 

Share this Story:

Follow Webdunia kannada