ಮೋದಿಗೆ ವಿವೇಕ್ ಒಬೆರಾಯ್ ಸಮರ್ಥನೆ

Webdunia
ಸೋಮವಾರ, 21 ಏಪ್ರಿಲ್ 2014 (10:16 IST)
ಜಾತ್ಯಾತೀತ ಅಭ್ಯರ್ಥಿಗಳಿಗೆ ಮತ ನೀಡಿ ಎಂದು ಬಾಲಿವುಡ್‌ನ ಕೆಲವು ಕಲಾವಿದರು ಇತ್ತೀಚಿಗೆ ಕರೆ ನೀಡಿದ್ದರು, ಈಗ ವಿವೇಕ ಒಬೆರಾಯ್, ಮಧುರ್ ಭಂಡಾರಕರ್ ಸಮೇತ ಕೆಲವು ಕಲಾವಿದರು ನರೇಂದ್ರ ಮೋದಿಗೆ ಸಮರ್ಥನೆ ನೀಡುತ್ತಿದ್ದಾರೆ ಎಂದು ವರದಿಯಾಗಿದೆ. 
 
'ಜಾತ್ಯತೀತ ಅಭ್ಯರ್ಥಿಗೆ ಮತ ನೀಡಿ ಎಂದು ಕೆಲವರು ಮನವಿ ಮಾಡಿರುವುದು, ನಾವು ಬಹಿರಂಗವಾಗಿ  ಮೋದಿ ಸಮರ್ಥನೆ ಮಾಡುವುದನ್ನು ಅನಿವಾರ್ಯವಾಗಿಸಿತು' ಎಂದು ಭಂಡಾರ್ಕರ್ ಹೇಳಿದ್ದಾರೆ.  
'ಜಾತ್ಯಾತೀತ ವ್ಯಕ್ತಿಗೆ, ಮತ  ನೀಡಿ' ಎಂದು ಬಾಲಿವುಡ್ ನಟರಾದ ಅಂಜುಂ ರಾಜ್‌ಬಾಲಿ ಮನವಿ ಮಾಡಿದ್ದರು. ಅದನ್ನು  ಮಹೇಶ್ ಭಟ್, ನಂದಿತಾ ದಾಸ್, ಜೋಯಾ ಅಖ್ತರ್, ಕಬೀರ್ ಖಾನ್, ಇಮ್ತಿಯಾಜ್ ಆಲಿ, ವಿಜಯ್ ಕೃಷ್ಣ ಆಚಾರ್ಯ, ಗಾಯಕ ಶುಭಾ ಮುದ್ಗಲ್ ಮತ್ತು ಇತರರು ಬೆಂಬಲಿಸಿದ್ದರು. 
 
'ಭ್ರಷ್ಟಾಚಾರ ಮತ್ತು ಉತ್ತಮ ಆಡಳಿತ ಸಹ ಪ್ರಮುಖ ಸಮಸ್ಯೆಗಳಾಗಿರಬಹುದು, ಆದರೆ ದೇಶದ ಜಾತ್ಯತೀತ ಚರಿತ್ರೆಯ ವಿರುದ್ಧ ನಡೆಯಲು ಸಾಧ್ಯವಿಲ್ಲ' ಎಂದು ಅವರು ಹೇಳಿದ್ದರು. 
 
ಪ್ರತಿಯಾಗಿ ವಿವೇಕ್ ಒಬೆರಾಯ್, ಮಧುರ್ ಭಂಡಾರ್ಕರ್, ಚಿತ್ರನಿರ್ಮಾಪಕ ವಿವೇಕ್ ಅಗ್ನಿಹೋತ್ರಿ, ಅಶೋಕ್ ಪಂಡಿತ್, ಡಿಸೈನರ್ ವಿಕ್ರಮ್ ಫಡನೀಸ್ , ಬಾಲಿವುಡ್ ತಾರೆಯರ ವಕೀಲ ಸತೀಶ್ ಮಾನೆ - ಶಿಂಧೆ ಮತ್ತು  ಇತರರು ಮೋದಿ ಪರವಾಗಿ ತಮ್ಮ ಬೆಂಬಲವನ್ನು ಘೋಷಿಸಿದರು.
 
"ರಾಜ್‌ಬಾಲಿ ಮತ್ತು ಇತರರು ಹೇಳಿದ್ದು ತಪ್ಪು. ಯಾರಿಗೆ ಮತ  ನೀಡಬೇಕು ಎಂದು ಜನರು ನಿರ್ಧರಿಸುವುದಕ್ಕೆ ಅವಕಾಶ ಕೊಡಿ. ಜನರಿಗೆ ಇಂತಹ ಮಾತುಗಳನ್ನು ಹೇಳಲು ನಿಮಗೆ ಯಾವ ಅಧಿಕಾರವಿದೆ?" ಎಂದು ಭಂಡಾರ್ಕರ್ ಅವರು ಪ್ರಶ್ನಿಸಿದ್ದಾರೆ 
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೇಂದ್ರದ ಶಿಕ್ಷಣ ಖಾತೆ ಹೊಣೆ ಹೊತ್ತ ಎರಡನೇ ಕನ್ನಡಿಗ ಪ್ರಲ್ಹಾದ್‌ ಜೋಶಿ: ಮುಂದಿದೆ ಸಾಲುಸಾಲು ಸವಾಲು

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ: ಪೆನ್‌ಡ್ರೈವ್‌ ಹಂಚಿದವರ ಬುಡಕ್ಕೆ ಬಿತ್ತು ಬೆಂಕಿ

ರಾಜ್ಯದಲ್ಲಿ ಮತ್ತೆ ಸಚಿವ ಸಂಪುಟ ವಿಸ್ತರಣೆ ಕಸರತ್ತು ಶುರು: ದೆಹಲಿಯತ್ತ ದೌಡಾಯಿಸಿದ ಸಚಿವಾಕಾಂಕ್ಷಿಗಳು

ಧರ್ಮೇಂದ್ರ ಪ್ರಧಾನ್ ರಾಜೀನಾಮೆಯನ್ನು ಕಾಂಗ್ರೆಸ್ ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ: ಬಿವೈ ವಿಜಯೇಂದ್ರ

ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಟ್ಟ ಮೇಲೆ ಪ್ರಲ್ಹಾದ್ ಜೋಶಿಗೆ ಬಯಸದೇ ಬಂದ ಭಾಗ್ಯ

Show comments