Select Your Language

Notifications

webdunia
webdunia
webdunia
webdunia

ದುಬಾರಿಯಾದ ತರಕಾರಿ ಬೆಲೆ: ತರಕಾರಿಯನ್ನು ಬಿಡುತ್ತಿಲ್ಲ ಕಳ್ಳರು

ದುಬಾರಿಯಾದ ತರಕಾರಿ ಬೆಲೆ:  ತರಕಾರಿಯನ್ನು ಬಿಡುತ್ತಿಲ್ಲ ಕಳ್ಳರು
ದೌಸಾ , ಶುಕ್ರವಾರ, 1 ಆಗಸ್ಟ್ 2014 (19:07 IST)
ದುಬಾರಿಯಾದ ತರಕಾರಿಗಳು ಈಗ ಕಳ್ಳರ ಗಮನ ಸೆಳೆದಿವೆ. ಮನೆ, ದೇವಾಲಯ, ಅಂಗಡಿ ಬಿಡಿ, ಈಗ ಕಳ್ಳರು ತರಕಾರಿ ಮಳಿಗೆಗಳಲ್ಲಿ ತರಕಾರಿ ಕಳ್ಳತನದ ಕೈ ಚಳಕ ತೋರುತ್ತಿದ್ದಾರೆ.
 
ಕಳ್ಳತನದ ಘಟನೆ ದೌಸಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಠಾಣೆಯಿಂದ ಸುಮಾರು 100-150 ಮೀಟರ್‌ ದೂರದಲ್ಲಿನ ತರಕಾರಿ ಮಾರುಕಟ್ಟೆಯಲ್ಲಿ ಕಳ್ಳರು ಒಂದು-ಎರಡಲ್ಲ ಒಟ್ಟು 21 ಅಂಗಡಿಗಳನ್ನು ಕಳ್ಳತನ ಮಾಡಿದ್ದಾರೆ. ಮಳಿಗೆಯಲ್ಲಿ ಕಾವಲುಗಾರನಿದ್ದರೂ ಕೂಡ ಕಳ್ಳರು ರಾತ್ರಿ ಸಮಯದಲ್ಲಿ ಸುಲಭವಾಗಿ ಕಳ್ಳತನ ಮಾಡಿದ್ದಾರೆ. ಬೆಳಿಗ್ಗೆ ಅಂಗಡಿ ಮಾಲೀಕರು ಬಂದಾಗ ಅವರ ಅಂಗಡಿಗಳು ಕಳ್ಳತನವಾಗಿರುವುದು ಗೊತ್ತಾಗಿದೆ. 
 
ದೌಸಾ ನಗರದಲ್ಲಿ ಇದು ಪ್ರಮುಖ ತರಕಾರಿ ಮಾರುಕಟ್ಟೆಯಾಗಿದೆ. ತರಕಾರಿ ಮಾರಾಟಗಾರರಾದ ಪಪ್ಪು, ರಾಧೇಶಾಮ್‌ , ಶಕುನ್, ರಾಮವಿಲಾಸ್‌, ಕೈಲಾಸ್ ಸೇರಿದಂತೆ 21 ಜನರ ಅಂಗಡಿಗಳು ಕಳ್ಳತನವಾಗಿವೆ. ಕಳ್ಳರು ಗಲ್ಲವನ್ನು ಒಡೆದು ಚಿಲ್ಲರೆಯನ್ನು ಕೂಡ ದೋಚಿಕೊಂಡು ಪರಾರಿಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 
 
ಮಾರುಕಟ್ಟೆಯಲ್ಲಿ ಆಗ ತಾನೆ ಟೋಮ್ಯಾಟೋ, ಈರುಳ್ಳಿ, ಸವತೆಕಾಯಿ ಸಹಿತ ಇತರ ತರಕಾರಿಗಳ ಚೀಲಗಳು ಬಂದಿದ್ದವು. ಕಳ್ಳರು ಹೆಚ್ಚಿನ ಸಂಖ್ಯೆಯ ತರಕಾರಿಗಳನ್ನು ಕದ್ದಿದ್ದಾರೆ. ಇದರಲ್ಲಿ ಟೋಮ್ಯಾಟೋ ಮತ್ತು ಈರುಳ್ಳಿ ಹೆಚ್ಚಿಗೆ ಕದ್ದಿದ್ದಾರೆ ಎಂದು ತರಕಾರಿ ಮಾರಾಟಗಾರರು ತಿಳಿಸಿದ್ದಾರೆ.. 
 
ಇಷ್ಟೆ ಅಲ್ಲ ತರಕಾರಿಗಳನ್ನು ತೂಕ ಮಾಡುವ ಕಂಪ್ಯೂಟರೈಸ್ಡ್‌ ಮಶೀನ್‌‌‌ಗಳನ್ನು ಕೂಡ ಕದ್ದಿದ್ದಾರೆ. ಪೋಲಿಸರು ಕಾವಲುಗಾರನಿಂದ ವಿಚಾರಣೆ ನಡೆಸುತ್ತಿದ್ದಾರೆ. 

Share this Story:

Follow Webdunia kannada