Select Your Language

Notifications

webdunia
webdunia
webdunia
webdunia

ಎರಡುವರೆ ದಿನ ದೇವಸ್ಥಾನದಿಂದ ಹೊರಗೆ ಬರಲಿಲ್ಲ ಸಿಎಂ ವಸುಂಧರಾ ರಾಜೆ

ಎರಡುವರೆ ದಿನ ದೇವಸ್ಥಾನದಿಂದ ಹೊರಗೆ ಬರಲಿಲ್ಲ ಸಿಎಂ ವಸುಂಧರಾ ರಾಜೆ
ಭೋಪಾಲ್ , ಶನಿವಾರ, 1 ಆಗಸ್ಟ್ 2015 (17:02 IST)
ಲಲಿತ್‌ಗೇಟ್‌ ವಿವಾದದಿಂದಾಗಿ ಜರ್ಜರಿತವಾಗಿರುವ ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೇ ತಮ್ಮನ್ನು ಈ ವಿಪ್ಪತ್ತಿನಿಂದ ಪಾರು ಮಾಡುವಂತೆ ದೈವದ ಮೊರೆ ಹೋಗಿದ್ದಾರೆ. ಜುಲೈ 29 ರಂದು ಮಧ್ಯಪ್ರದೇಶದ ಡಾಟಿಯಾ ಜಿಲ್ಲೆಯ ಮಾ ಪಿತಾಂಬರ ದೇಗುಲದ ಒಳಗೆ ಹೋಗಿದ್ದ ಅವರು ಅಲ್ಲಿಂದ ಹೊರಗೆ ಬಂದಿದ್ದು ಜುಲೈ 31 ರಂದು. ಅಂದರೆ ಬರೊಬ್ಬರಿ ಎರಡುವರೆ ದಿನಗಳ ಕಾಲ ಅವರು ದೇವಸ್ಥಾನದಿಂದ ಹೊರಗೆ ಬರಲೇ ಇಲ್ಲ.
 
ಜುಲೈ 12 ರಂದೇ ಅವರು ಈ ದೇವಸ್ಥಾನಕ್ಕೆ ಆಗಮಿಸುವುದಿತ್ತು. ಆದರೆ ಕಾರಣಾಂತರಗಳಿಂದ ಅದು ಮುಂದೂಡಲ್ಪಟ್ಟಿತ್ತು. 
 
ಒಂದು ತಿಂಗಳಲ್ಲಿ ಈ ಪ್ರಸಿದ್ಧ ದೇವಸ್ಥಾನಕ್ಕೆ ಅವರು ಬರುತ್ತಿರುವುದು ಇದು ಎರಡನೆಯ ಬಾರಿ. ಹೆಚ್ಚಿನ ರಾಜಕಾರಣಿಗಳು ತಮ್ಮ  ವೃತ್ತಿಜೀವನದ ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ ಈ ದೇವಸ್ಥಾನಕ್ಕೆ ಬರುವುದು ಇಲ್ಲಿನ ಒಂದು ವಿಶೇಷವಾಗಿದೆ. 
 
ಗುರುವಾರ ಎರಡು ಗಂಟೆಗೂ ಅಧಿಕ ಕಾಲ ರಾಜೇ ದೇಗುಲದಲ್ಲಿ ಹೋಮ- ಹವನ, ವಿಶೇಷ ಪೂಜೆ, ಭಜನೆ, ಕಾರ್ಯಕ್ರಮಗಳನ್ನು ನೆರವೇರಿಸಿದ್ದಾರೆ. ಜುಲೈ 31 ರಂದು ಅವರು ಗುರು ಪೂರ್ಣಿಮೆ ನಿಮಿತ್ತ ವಿಶೇಷ ಪೂಜೆಯನ್ನು ನೆರವೇರಿಸಿದ್ದಾರೆ. ದೇವಸ್ಥಾನದ ಟ್ರಸ್ಟ್‌ನಲ್ಲಿ ರಾಜೇ ಅಧ್ಯಕ್ಷರಾಗಿದ್ದಾರೆ.
 
ಈ ಎರಡು ದಿನಗಳಲ್ಲಿ ಅವರು  ದೇವಸ್ಥಾನದ ಅರ್ಚಕ ಶ್ರೀ ರಾಮ್ ಪಂಡಾರವರನ್ನು ಹೊರತು ಪಡಿಸಿ ಯಾರನ್ನೂ ಭೇಟಿಯಾಗಿಲ್ಲ ಎಂದು ಹೇಳಲಾಗುತ್ತದೆ. ಆ ಎರಡುವರೆ ದಿನಗಳ ಕಾಲ ಅವರು ಬಾಗಿಲನ್ನು ಭದ್ರ ಪಡಿಸಿಕೊಂಡು ದೇವಸ್ಥಾನದ ಒಳಗೆ ಕಳೆದಿದ್ದಾರೆ.  
 
ಈ ದೇವಸ್ಥಾನಕ್ಕೆ ಆಗಮಿಸಿದಾಗಲೆಲ್ಲ ಅವರು  ಮಂದಿರದ ಒಳಗಿರುವ ವಿಶಾಲ ಕೋಣೆಯಲ್ಲಿ ವಾಸವಾಗುತ್ತಾರೆ ಎಂದು  ದೇವಸ್ಥಾನದ ಆಡಳಿತ ಮಂಡಳಿ ಮೂಲಗಳು ಹೇಳಿವೆ. 

Share this Story:

Follow Webdunia kannada