Webdunia - Bharat's app for daily news and videos

Install App

ಅಕ್ರಮ ಸಂಬಂಧ ಮುಚ್ಚಿ ಹಾಕಲು ಮಗಳನ್ನೇ ಕೊಂದ ತಾಯಿ

Webdunia
ಗುರುವಾರ, 15 ಡಿಸೆಂಬರ್ 2016 (16:47 IST)
ಜಗತ್ತಿನಲ್ಲಿ ಕೆಟ್ಟ ಮಕ್ಕಳು ಹುಟ್ಟುತ್ತಾರೆ. ಆದರೆ ಕೆಟ್ಟ ತಾಯಿ ಇರಲಾರಳು ಎನ್ನುತ್ತಾರೆ. ಆದರೆ ಇತ್ತೀಚಿಗೆ ವರದಿಯಾಗುತ್ತಿರುವ ಘಟನೆಗಳು ಇದನ್ನು ಸುಳ್ಳು ಮಾಡುತ್ತಿವೆ. ಇದಕ್ಕೊಂದು ಸಾಕ್ಷಿ ಈ ಘಟನೆ. ತನ್ನ ಅಕ್ರಮ ಸಂಬಂಧವನ್ನು ಮುಚ್ಚಿ ಹಾಕಲು ಪಾಪಿ ತಾಯಿಯೋರ್ವಳು ತನ್ನ ಮಗಳನ್ನೇ ಹತ್ಯೆಗೈದ ಹೇಯ ಘಟನೆ ವಾರಣಾಸಿಯಲ್ಲಿ ನಡೆದಿದೆ. ಕಳೆದ 9 ವರ್ಷದ ಹಿಂದೆ ತಾನು ಸಹೋದರನ ಮಗಳನ್ನು ಸಹ ಕೊಂದಿದ್ದೆ ಎಂಬುದನ್ನು ಸಹ ಆಕೆ ಒಪ್ಪಿಕೊಂಡಿದ್ದಾಳೆ. 

ಆಗಸ್ಟ್ ತಿಂಗಳ ಮಿರ್ಜಾಪುರ ಜಿಲ್ಲೆಯ ರಾಕೇಶ್ ಕುಮಾರ್ ಎಂಬುವವರು ತಮ್ಮ 10 ವರ್ಷದ ಮಗಳು ಅಂಜುವನ್ನು ಅಪಹರಿಸಿ ಕೊಲೆಗೈಯ್ಯಲಾಗಿದೆ ಎಂದು ದೂರು ನೀಡಿದ್ದರು. ಆಕೆಯ ಶವ ರೋಹಾನಿಯಾದ ಬಾವಿಯೊಂದರಲ್ಲಿ ಪತ್ತೆಯಾಗಿತ್ತು. 
 
ಕಳೆದ ಮೂರು ತಿಂಗಳಿಂದ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ರಾಕೇಶನ 32 ವರ್ಷದ ಪತ್ನಿ ಮಂಜುಳಾಳನ್ನು ಬಂಧಿಸಿದ್ದಾರೆ. ತನಿಖೆಯ ಸಂದರ್ಭದಲ್ಲಿ ಆಕೆಗೆ ತನ್ನದೇ ಗ್ರಾಮದ ನಿವಾಸಿ ವೀರೆಂದರ್ ಪಟೇಲ್ ಎಂಬಾತನ ಜತೆ ವೈವಾಹೇತರ ಸಂಬಂಧ ಇದ್ದುದು ತಿಳಿದು ಬಂತು. 
 
ಮಗಳು ಅಂಜು ತಾನು ವೀರೆಂದರ್ ಜತೆ ಆಕ್ಷೇಪಾರ್ಹ ಸ್ಥಿತಿಯಲ್ಲಿದ್ದುದನ್ನು ನೋಡಿದ್ದರಿಂದ ಮಂಜುಳಾ ಆತಂಕಗೊಂಡಿದ್ದಳು. ತನ್ನ ಈ ಕುಕೃತ್ಯವನ್ನು ಮಗಳು ಬಹಿರಂಗಪಡಿಸುತ್ತಾಳೆನೋ ಎಂಬ ಭಯದಲ್ಲಿ ಆಕೆ ಅವಳನ್ನು ಬಾವಿಗೆ ಎಸೆದಿದ್ದಳು.
 
ಪೊಲೀಸರ ಪ್ರಕಾರ 2007ರಲ್ಲಿ ಮಂಜುಳಾ ತನ್ನ ಸಹೋದರನ ಮಗಳನ್ನು ಕೂಡ ಬಾವಿಗೆ ದೂಡಿ ಕೊಂದಿದ್ದಳು. ಆಗೆ ಆಕೆಗೆ ಬೇರೊಬ್ಬನ ಜತೆ ಅಕ್ರಮ ಸಂಬಂಧವಿತ್ತು. ಅದನ್ನು ಬಾಲಕಿ ನೋಡಿದ್ದಳು. ಮತ್ತೀಗ ಅದೇ ಕ್ರೌರ್ಯತೆಯನ್ನು ಆಕೆ ಮರುಕಳಿಸಿದ್ದಾಳೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಡೈರಿ ರಾಜಕಾರಣಕ್ಕೆ ಕಾಲಿಟ್ಟ ಡಿಕೆ ಸುರೇಶ್‌: ನಾಮಪತ್ರ ಸಲ್ಲಿಕೆ

Jammu Kashmir: 11 ಸ್ಥಳಗಳ ಮೇಲೆ SIA ದಾಳಿ

ಆರತಕ್ಷತೆ ವೇಳೆ ಮಧುಮಗ ಕುಸಿದುಬಿದ್ದು ಸಾವು: ಮದುವೆ ಮನೆಯಲ್ಲಿ ಸೂತಕದ ಛಾಯೆ

ISRO: 101ನೇ ಉಪಗ್ರಹ ಉಡಾವಣೆಗೆ ಸಜ್ಜಾದ ಇಸ್ರೋ, ಇದರ ವಿಶೇಷ ಹೀಗಿದೆ

Bengaluru International Airport: ಆರಂಭದ ಬಳಿಕ ಮೊದಲ ಬಾರಿ ದಾಖಲೆಯ ಲಾಭ

ಮುಂದಿನ ಸುದ್ದಿ
Show comments