Select Your Language

Notifications

webdunia
webdunia
webdunia
webdunia

ನಿವಾಸದಲ್ಲೇ ಭಾರತ ರತ್ನ ಸ್ವೀಕರಿಸಲಿದ್ದಾರೆ ಅಜಾತಶತ್ರು ಅಟಲ್

ನಿವಾಸದಲ್ಲೇ ಭಾರತ ರತ್ನ ಸ್ವೀಕರಿಸಲಿದ್ದಾರೆ ಅಜಾತಶತ್ರು ಅಟಲ್
ನವದೆಹಲಿ , ಗುರುವಾರ, 26 ಮಾರ್ಚ್ 2015 (10:59 IST)
ಭಾರತದ ಹೆಮ್ಮೆಯ ಮಾಜಿ ಪ್ರಧಾನಿ, ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿಯವರಿಗೆ ಮಾರ್ಚ್ 27 ರಂದು ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪ್ರಧಾನ ಮಾಡಲಾಗುವುದು. ಅಟಲ್ ಅನಾರೋಗ್ಯ ಪೀಡಿತರಾಗಿರುವುದರಿಂದ ಅವರನಿವಾಸಕ್ಕೆ ತೆರಳಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಪ್ರಶಸ್ತಿ ನೀಡಲಿದ್ದಾರೆ. 

ಈ ಬಾರಿ ಮಾಜಿ ಪ್ರಧಾನಿ ವಾಜಪೇಯಿ ಮತ್ತು ಸ್ವಾತಂತ್ರ್ಯ ಹೋರಾಟಗಾರ ಮದನ್ ಮೋಹನ್ ಮಾಳವೀಯ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ಘೋಷಿಸಲಾಗಿತ್ತು. 
 
ನಾಳೆ ಸಂಜೆ 5 ಗಂಟೆಗೆ ಅಟಲ್ ನಿವಾಸದಲ್ಲಿ ಪ್ರಶಸ್ತಿ ವಿತರಣಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದ್ದು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಗೃಹ ಸಚಿವರಾದ ರಾಜನಾಥ್ ಸಿಂಗ್  ಸೇರಿದಂತೆ ಕೇಂದ್ರ ಸರಕಾರದ ಎಲ್ಲ ಸಚಿವರು, ಇತರ ಬಿಜೆಪಿ ನಾಯಕರು, ಗಣ್ಯ ವ್ಯಕ್ತಿಗಳು ಈ ಶುಭ ಸಂದರ್ಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಮಾರ್ಚ್ 30 ರಂದು ಮದನ್ ಮೋಹನ್ ಮಾಳವೀಯ ಕುಟುಂಬದ ಸದಸ್ಯರು ರಾಷ್ಟ್ರಪತಿ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

Share this Story:

Follow Webdunia kannada