Select Your Language

Notifications

webdunia
webdunia
webdunia
webdunia

ಮಾಧ್ಯಮದವರನ್ನು ಪ್ರೆಸ್ಟಿಟ್ಯೂಟ್ ಎಂದಿದ್ದಕ್ಕೆ ಕ್ಷಮೆಯಾಚಿಸಿದ ಸಿಂಗ್

ಮಾಧ್ಯಮದವರನ್ನು ಪ್ರೆಸ್ಟಿಟ್ಯೂಟ್ ಎಂದಿದ್ದಕ್ಕೆ ಕ್ಷಮೆಯಾಚಿಸಿದ ಸಿಂಗ್
ನವದೆಹಲಿ , ಭಾನುವಾರ, 12 ಏಪ್ರಿಲ್ 2015 (17:43 IST)
ಮಾಧ್ಯಮದವರನ್ನು ಪ್ರೆಸ್ಟಿಟ್ಯೂಟ್ ಎಂದು ಸಂಭೋಧಿಸಿ ಟ್ವಿಟ್ ಮಾಡಿ ವಿವಾದ ಸೃಷ್ಟಿಸಿದ್ದ ಕೇಂದ್ರ ವಿದೇಶಾಂಗ ಖಾತೆ ರಾಜ್ಯ ಸಚಿವ ವಿ ಕೆ ಸಿಂಗ್ ತಮ್ಮ ಹೇಳಿಕೆಗೆ ಕ್ಷಮೆ ಕೋರಿದ್ದಾರೆ. 

''ನಾನು ಇಡೀ ಪತ್ರಿಕಾರಂಗದವರನ್ನು ಉದ್ದೇಶಿಸಿ ಈ ಮಾತುಗಳನ್ನು ಆಡಿಲ್ಲ. 90%ರಷ್ಟು ಮಾಧ್ಯಮಗಳು ತಮ್ಮ ಕೆಲಸವನ್ನು ಸಮರ್ಥವಾಗಿ ನಿರ್ವಹಿಸುತ್ತಿವೆ. ಕೇವಲ 10%  ಮಾಧ್ಯಮಗಳು ಮಾತ್ರ ಉದ್ದೇಶಪೂರ್ವಕವಾಗಿ ನನ್ನ ವಿರುದ್ಧ ಪ್ರಚಾರ ನಡೆಸುವ ಕಾಯಕದಲ್ಲಿ ತೊಡಗಿವೆ. ಅವರಿಗೆ ಮಾತ್ರ ನನ್ನ  ಮಾತುಗಳು ಅನ್ವಯವಾಗುತ್ತವೆ. ನನ್ನ ಹೇಳಿಕೆಯಿಂದ ಬೇಸರವಾಗಿದ್ದರೆ ದಯವಿಟ್ಟು ಕ್ಷಮಿಸಿ,'' ಎಂದು ಸಿಂಗ್ ಮನವಿ ಮಾಡಿಕೊಂಡಿದ್ದಾರೆ.
 
ಯೆಮನ್‌ನಲ್ಲಿ ಸಿಲುಕಿಕೊಂಡಿದ್ದ ಭಾರತೀಯರ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಸಿಂಗ್ ಬಳಿ ಈ ಕುರಿತು ಪ್ರತಿಕ್ರಿಯೆ ಕೇಳಿದಾಗ, "ಇದು ಬಹಳ ಕಷ್ಟದ ಕಾರ್ಯಾಚರಣೆ. ಆದರೆ, ಪಾಕಿಸ್ತಾನದ ರಾಯಭಾರ ಕಚೇರಿಗೆ ಭೇಟಿ ಕೊಟ್ಟಾಗ ಆದಷ್ಟು ಉದ್ವೇಗ ಈ ಸಂದರ್ಭದಲ್ಲಿ ನನಗಾಗುತ್ತಿಲ್ಲ", ಎಂದು ಹೇಳಿದ್ದರು. ಈ ವಿವಾದಿತ ಹೇಳಿಕೆಯನ್ನು ಪ್ರಸಾರ ಮಾಡಿದ್ದ ಮಾಧ್ಯಮಗಳು ಅವರ ಮೇಲೆ ಟೀಕಾ ಪ್ರಹಾರ ಮಾಡಿದ್ದವು. ಇದರಿಂದ ಕೆರಳಿದ್ದ ವಿ.ಕೆ.ಸಿಂಗ್, ಮಾಧ್ಯಮದವರು `ಪ್ರೆಸ್ಟಿಟ್ಯೂಟ್'ಗಳು ಎಂದು ಜರಿದಿದ್ದರು.

Share this Story:

Follow Webdunia kannada