Select Your Language

Notifications

webdunia
webdunia
webdunia
webdunia

ಇಂದು ಉತ್ತರಾಖಂಡ ಮತ್ತು ಯುಪಿಯಲ್ಲಿ ಚುನಾವಣೆ

ಇಂದು ಉತ್ತರಾಖಂಡ ಮತ್ತು ಯುಪಿಯಲ್ಲಿ ಚುನಾವಣೆ
ಲಖನೌ , ಬುಧವಾರ, 15 ಫೆಬ್ರವರಿ 2017 (06:52 IST)
ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯ ಭಾಗವಾಗಿ ಉತ್ತರ ಪ್ರದೇಶದಲ್ಲಿಂದು ಎರಡನೆಯ ಹಂತದ ಮತ್ತು ಉತ್ತರಾಖಂಡ ವಿಧಾನಸಭಾ ಚುನಾವಣೆಯ ಮತದಾನ ಬುಧವಾರ (ಫೆ.15) ನಡೆಯಲಿದೆ.

ಪಶ್ಚಿಮ ಉತ್ತರ ಪ್ರದೇಶದಲ್ಲಿ 67 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು 720 ಅಭ್ಯರ್ಥಿಗಳು ಸ್ಪರ್ಧೆಗಿಳಿದಿದ್ದಾರೆ.2.28ಕೋಟಿ ಜನರು ಮತದಾನದ ಹಕ್ಕನ್ನು ಹೊಂದಿದ್ದು, ಒಟ್ಟು ಮತದಾರರಲ್ಲಿ ಶೇ 80 ರಷ್ಟು ಮಂದಿ ಒಬಿಸಿ ಮತ್ತು ಮುಸ್ಲಿಮ್‌ ಸಮುದಾಯಕ್ಕೆ ಸೇರಿದವರಾಗಿದ್ದಾರೆ.ವಿವಾದಾತ್ಮಕ ಹೇಳಿಕೆಗಳಿಂದ ಸದಾ ಸುದ್ದಿಯಾಗುವ ಯುಪಿ ಸಚಿವ ಅಜಂ ಖಾನ್ ಇಂದಿನ ಚುನಾವಣೆಯ ಪ್ರಮುಖ ಸ್ಪರ್ಧಿಯಾಗಿದ್ದಾರೆ.
 
ಉತ್ತರಾಖಂಡದ 70 ವಿಧಾನಸಭಾ ಕ್ಷೇತ್ರಗಳಲ್ಲಿ 69 ಸ್ಥಾನಗಳಿಗೆ ಬುಧವಾರ ಮತದಾನ ನಡೆಯುತ್ತಿದ್ದು, ಕರ್ಣ ಪ್ರಯಾಗ್ ಕ್ಷೇತ್ರದಲ್ಲಿ ಬಿಎಸ್‌ಪಿ ಅಭ್ಯರ್ಥಿ ಕುಲದೀಪ್ ಸಿಂಗ್ ನಿಧನರಾದ ಹಿನ್ನೆಲೆಯಲ್ಲಿ ಅಲ್ಲಿನ ಮತದಾನವನ್ನು ಮಾರ್ಚ್ 9 ಕ್ಕೆ ಮುಂದೂಡಲಾಗಿದೆ.
 
69 ಕ್ಷೇತ್ರಗಳಲ್ಲಿ 628 ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದು, 75,13,547 ಮಂದಿ ಮತದಾರರು ಮತದಾನ ಮಾಡಲಿದ್ದಾರೆ. ಇಲ್ಲಿ ಆಡಳಿತಾರೂಢ ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ನೇರ ಹಣಾಹಣೆ ನಡೆಯಲಿದೆ. 
 
ಉತ್ತರಪ್ರದೇಶದಲ್ಲಿ ರಾಜ್ಯದಲ್ಲಿ 7 ಹಂತಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಫೆಬ್ರವರಿ 11 ರಂದು ಮೊದಲನೇ ಹಂತದ ಚುನಾವಣೆ ನಡೆದಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಭ್ರಷ್ಟಾಚಾರ ಮಾಡಿರುವುದು ಸಾಬೀತಾದ್ರೆ ರಾಜಕೀಯದಿಂದ ನಿವೃತ್ತಿ: ಸಿಎಂ ಸಿದ್ದರಾಮಯ್ಯ