Daily Horoscope
✕

Video: ಉತ್ತರಾಖಂಡ ಸುರಂಗ ದುರಂತ: ಪ್ರವಾಹಕ್ಕೆ 7 ಕಾರ್ಮಿಕರ ದಾರುಣ ಸಾವು

ಕೃಷ್ಣವೇಣಿ ಕೆ
ಶುಕ್ರವಾರ, 14 ಆಗಸ್ಟ್ 2026 (08:51 IST)
Photo Credit: X
ಡೆಹ್ರಾಡೂನ್ (ಉತ್ತರಾಖಂಡ): ಉತ್ತರಾಖಂಡದ ಚಮೋಲಿ ಜಿಲ್ಲೆಯ ಪಿಪಲ್ಕೋಟಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಜಲವಿದ್ಯುತ್ ಯೋಜನೆಯ ಸುರಂಗಕ್ಕೆ ಏಕಾಏಕಿ ಭಾರಿ ಪ್ರಮಾಣದ ನೀರು ಮತ್ತು ಕೆಸರು ನುಗ್ಗಿದ ಪರಿಣಾಮ, ಸುರಂಗದೊಳಗೆ ಸಿಲುಕಿ 7 ಮಂದಿ ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿದ್ದಾರೆ.
 
ಟಿಹೆಚ್‌ಡಿಸಿ (ತೆಹ್ರಿ ಹೈಡ್ರೊ ಡೆವಲಪ್‌ಮೆಂಟ್ ಕಾರ್ಪೊರೇಷನ್) ವತಿಯಿಂದ ನಡೆಯುತ್ತಿದ್ದ ಈ ಸುರಂಗ ನಿರ್ಮಾಣ ಕಾಮಗಾರಿಯ ವೇಳೆ ಹಠಾತ್ತನೆ ನೀರಿನ ಪ್ರವಾಹ ಹಾಗೂ ಮಣ್ಣಿನ ಕುಸಿತ ಉಂಟಾಗಿದೆ. ಸಂಜೆ ವೇಳೆ ನಡೆದ ಈ ಅವಘಡದ ಸಮಯದಲ್ಲಿ ಸುರಂಗದೊಳಗೆ ಸುಮಾರು 22 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ನೀರು ಮತ್ತು ಕೆಸರಿನ ರಭಸಕ್ಕೆ ಸಿಲುಕಿ 7 ಕಾರ್ಮಿಕರು ಪ್ರಾಣ ಕಳೆದುಕೊಂಡರೆ, 14 ಜನರನ್ನು ರಕ್ಷಿಸಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಇಬ್ಬರು ಕಾರ್ಮಿಕರು ನಾಪತ್ತೆಯಾಗಿದ್ದಾರೆ.
 
ಘಟನೆ ನಡೆದ ತಕ್ಷಣವೇ ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ, ರಾಜ್ಯ ವಿಪತ್ತು ಸ್ಪಂದನಾ ಪಡೆ ಮತ್ತು ಭಾರತೀಯ ಸೇನೆಯ ಪಡೆಗಳು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ. ಸುರಂಗದಲ್ಲಿದ್ದ ಮಣ್ಣು ಹಾಗೂ ನೀರನ್ನು ಹೊರತೆಗೆಯುವ ಕಾರ್ಯ ಭರದಿಂದ ಸಾಗುತ್ತಿದೆ.
 
ಸುರಂಗದೊಳಗೆ ಅವಶೇಷಗಳು ಮತ್ತು ನೀರು ನುಗ್ಗಿರುವ ಸುದ್ದಿ ತಿಳಿದ ತಕ್ಷಣವೇ ಪರಿಹಾರ ತಂಡಗಳನ್ನು ನಿಯೋಜಿಸಲಾಗಿದೆ. ಸಿಲುಕಿರುವ ಪ್ರತಿಯೊಬ್ಬರ ಪ್ರಾಣ ರಕ್ಷಣೆ ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹೇಳಿದ್ದಾರೆ.
https://t.co/d8jp61yd2p) pic.twitter.com/3oaLCCHuyq

 

— Press Trust of India (@PTI_News) August 13, 2026

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮೋದಿ ಮಾತ್ರವಲ್ಲ, ಅವರಪ್ಪನೂ ಹೋಗ್ತಾರೆ: ಮೋದಿ ಎಂದು ಕೂಗಿದ ವ್ಯಕ್ತಿಯ ಮುಂದೆ ಅಬ್ಬರಿಸಿದ ಮಲ್ಲಿಕಾರ್ಜುನ ಖರ್ಗೆ Video

ಕುಟುಂಬದಲ್ಲಿ ಗೃಹಹಿಂಸೆ ಸಹಿಸಬೇಡಿ: ಮಹಿಳೆಯರ ರಕ್ಷಣೆಗಾಗಿ ಇರುವ ಹಕ್ಕುಗಳು ಮತ್ತು ತುರ್ತು ಸಹಾಯವಾಣಿ ಮಾಹಿತಿ

ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗದಿದ್ದರೆ ಈ ಘಟನೆಯನ್ನು ಯಾರೂ ನಂಬುತ್ತಿರಲಿಲ್ಲ video

Karnataka Weather: ನಿಮ್ಮ ಜಿಲ್ಲೆಯಲ್ಲಿ ಮಳೆಯಾಗಲಿದೆಯೇ, ಹವಾಮಾನ ಇಲಾಖೆಯ ಹೊಸ ಮುನ್ಸೂಚನೆ

ಸ್ಟಿಂಗ್ ಅಂತ ಮಂಗ ಮಾಡುವವರು: ಆರ್.ಅಶೋಕ್ ಟೀಕೆ

ಮುಂದಿನ ಸುದ್ದಿ
Show comments