Select Your Language

Notifications

webdunia
webdunia
webdunia
webdunia

ಉತ್ತರಖಂಡ ಉಪಚುನಾವಣೆ: ಕಾಂಗ್ರೆಸ್‌ಗೆ ಭರ್ಜರಿ ಗೆಲುವು

ಉತ್ತರಖಂಡ ಉಪಚುನಾವಣೆ: ಕಾಂಗ್ರೆಸ್‌ಗೆ ಭರ್ಜರಿ ಗೆಲುವು
ಡೆಹರಾಡೂನ್‌ , ಶನಿವಾರ, 26 ಜುಲೈ 2014 (18:04 IST)
ಉತ್ತರಾಖಂಡದ ವಿಧಾನಸಭೆ ಉಪಚುನಾವಣೆಯಲ್ಲಿ ಮುಖ್ಯಮಂತ್ರಿ ಹರೀಶ್‌ ರಾವತ್, ಧಾರಚೂಲಾ ವಿಧಾನ ಸಭೆ ಕ್ಷೇತ್ರದಿಂದ ಗೆಲುವನ್ನು ಸಾಧಿಸಿದ್ದಾರೆ. 
 
ಇವರು ತಮ್ಮ ಹತ್ತಿರದ ಪ್ರತಿಸ್ಪರ್ದಿ ಭಾರತೀಯ ಜನತಾ ಪಾರ್ಟಿಯ ಬಿ.ಡಿ.ಜೋಶಿಯವರನ್ನು 19,605 ಮತಗಳ ಅಂತರದಿಂದ ಸೋಲಿಸಿದ್ದಾರೆ ಎಂದು ಮುಖ್ಯ ಚುನಾವಣಾ ಅಧಿಕಾರಿ ರಾಧಾ ರತೂಡಿ ತಿಳಿಸಿದ್ದಾರೆ. 
 
ಉತ್ತರಾಖಂಡ  ರಾಜ್ಯದಲ್ಲಿ ಮೂರು ವಿಧಾನ ಸಭಾ ಕ್ಷೇತ್ರದಲ್ಲಿ ಚುನಾವಣೆ ನಡೆದಿತ್ತು ಮತ್ತು ಕಾಂಗ್ರೆಸ್‌ ಮೂರು ಕ್ಷೇತ್ರಗಳಲ್ಲಿ ಭರ್ಜರಿ ಗೆಲುವನ್ನು ಸಾಧಿಸಿದೆ. ಎರಡು ತಿಂಗಳಿನ ಹಿಂದೆ ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಗೆಲುವನ್ನು ಸಾಧಿಸಿತ್ತು. 
 
ಮತದಾನದಲ್ಲಿ ಗೊಂದಲವಾದ ಕಾರಣ ಧಾರಚೂಲಾದಲ್ಲಿ ಜುಲೈ 21 ರಂದು ಮರು ಮತದಾನ ನಡೆಸಲಾಗಿತ್ತು. ಇದರ ಹೊರತು, ಬಿಜೆಪಿಯ ರಮೇಶ್ ಪೆಖರಿಯಾಲ್ ನಿಶಂಕರ ಹರಿದ್ವಾರ ಮತ್ತು ಅಜಯ್‌ ಟಮಟಾರ ಅಲಮೊಡಾದಿಂದ ಸಂಸದರಾಗಿ ಆಯ್ಕೆಯಾದ ನಂತರ ದೊಯಿವಾಲ್ ಮತ್ತು ಸೋಮೆಶ್ವರದಲ್ಲಿ ಖಾಲಿಯಾದ ವಿಧಾನಸಭೆ ಸೀಟುಗಳಿಗಾಗಿ ಉಪಚುನಾವಣೆ ನಡೆದಿತ್ತು. ಮೂರು ಕಡೆ ಕಾಂಗ್ರೆಸ್‌ ಉಮೇದುವಾರರು ಗೆಲುವನ್ನು ಸಾಧಿಸಿದ್ದಾರೆ. 
 
ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಎಲ್ಲಾ ಐದು ಸೀಟುಗಳಾದ ಅಲಮೊಡಾ, ಗಟವಾಲ್, ಹರಿದ್ವಾರ್, ನೈನಿತಾಲ-ಉಧಮ್‌ಸಿಂಗ್‌ ನಗರ್ ಮತ್ತು ಟಿಹರಿ ಗಟವಾಲ್‌‌ನಲ್ಲಿ ಗೆಲುವನ್ನು ಸಾಧಿಸಿದ್ದ ಬಿಜೆಪಿಗೆ ವಿಧಾನಸಭೆ ಚುನಾವಣೆ ಫಲಿತಾಂಶ ದೊಡ್ಡ ಹೊಡೆತ ಬಿದ್ದಿದೆ. 
 
ಕಳೆದ ಫೆಬ್ರವರಿ 1 ರಂದು ರಾಜ್ಯದ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿದ ರಾವತ್‌‌‌ ಅವರಿಗೆ ಆರು ತಿಂಗಳಲ್ಲಿ ಅಂದರೆ ಜುಲೈ 31 ರವರೆಗೆ ವಿಧಾನ ಸಭೆ ಸದಸ್ಯರಾಗಿ ಆಯ್ಕೆಯಾಗುವುದು ಅನಿವಾರ್ಯವಾಗಿತ್ತು. ಈ ಗೆಲುವಿನ ಮೂಲಕ ರಾವತ್‌‌ ಮುಖ್ಯಮಂತ್ರಿ ಸ್ಥಾನ ಭದ್ರವಾಗಿದೆ. ಉತ್ತರಾಖಂಡದ ಮುಖ್ಯಮಂತ್ರಿಯಾಗುವ ಮೊದಲು ಹರೀಶ್‌ ರಾವತ್‌ ಉತ್ತರಾಖಂಢದ ಸಂಸದರಾಗಿದ್ದರು. 

Share this Story:

Follow Webdunia kannada