Webdunia - Bharat's app for daily news and videos

Install App

ಉತ್ತರ ಪ್ರದೇಶ: ಇಂದು 5ನೇ ಹಂತದ ಮತದಾನ

Webdunia
ಸೋಮವಾರ, 27 ಫೆಬ್ರವರಿ 2017 (09:31 IST)
ಉತ್ತರ ಪ್ರದೇಶದಲ್ಲಿಂದು 5 ನೇ ಹಂತದ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು  18,822 ಮತಗಟ್ಟೆಗಳನ್ನು ತೆರೆಯಲಾಗಿದೆ.ಇದರಲ್ಲಿ 2,351 ಮತಗಟ್ಟೆಗಳಿಗೆ ವಿಶೇಷ ಭದ್ರತೆಯನ್ನೊದಗಿಸಲಾಗಿದೆ. 
11 ಜಿಲ್ಲೆಗಳ 51 ಕ್ಷೇತ್ರಗಳಲ್ಲಿ 607 ಅಭ್ಯರ್ಥಿಗಳು ಕಣದಲ್ಲಿದ್ದು 96 ಲಕ್ಷ ಮಹಿಳೆಯರು ಸೇರಿದಂತೆ 1.84ಕೋಟಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ. 
 
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರತಿನಿಧಿಸುವ ಅಮೇಥಿಯಲ್ಲಿ ಗರಿಷ್ಠ 24 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕಪಿಲವಸ್ತು ಮತ್ತು ಇಟಾವಾದಲ್ಲಿ ಕನಿಷ್ಠ ಅಂದರೆ ತಲಾ 6 ಅಭ್ಯರ್ಥಿಗಳಿಂದು ಚುನಾವಣೆಯನ್ನೆದುರಿಸುತ್ತಿದ್ದಾರೆ. 
 
ಮತಗಟ್ಟೆಗಳಿಗೆ ವ್ಯಾಪಕ ಭದ್ರತೆ ಏರ್ಪಡಿಸಲಾಗಿದ್ದು, ಅಕ್ರಮಗಳನ್ನು ತಡೆಯಲು 905 ಡಿಜಿಟಲ್‌ ಕ್ಯಾಮರಾ, 978 ವೀಡಿಯೋ ಕ್ಯಾಮರಾ ಅಳವಡಿಸಲಾಗಿದೆ. 1792 ಕೇಂದ್ರಗಳಲ್ಲಿ ವೆಬ್‌ ವೋಟಿಂಗ್‌ ಜಾರಿಯಲ್ಲಿರಲಿದೆ. 
 
ಅಮೆಥಿ, ಸುಲ್ತಾನ್‌ಪುರ, ಬಲರಾಮ್‌ಪುರ, ಗೊಂಡಾ, ಫೈಜಾಬಾದ್‌, ಅಂಬೇಡ್ಕರ್‌ ನಗರ, ಬಹೈರಿಚ್‌, ಶ್ರವಸ್ತಿ, ಸಿದ್ದಾರ್ಥನಗರ, ಬಸ್ತಿ, ಸಂತ ಕಬೀರನಗರ್‌ ಜಿಲ್ಲೆಗಳಲ್ಲಿ ಮತದಾನ ನಡೆಯುತ್ತಿದ್ದು ಸಚಿವ ವಿನೋದ್ ಕುಮಾರ್ ಅಲಿಯಾಸ್ ಪಂಡಿತ್ ಸಿಂಗ್ (ಗೊಂಡಾ), ತೇಜ್ ನರೈನ್ ಸಿಂಗ್ ಪಾಂಡೆ ಅಲಿಯಾಸ್ ಪವನ್ ಪಾಂಡೆ (ಅಯೋಧ್ಯಾ) ಮತ್ತು ಬಿಎಸ್‌ಪಿ ರಾಜ್ಯಾಧ್ಯಕ್ಷ ರಾಮ್ ಅಚಲ್ ರಾಜ್‌ಭರ್ (ಅಕ್ರಬರ್ಪುರ್) ಪ್ರಮುಖ ಸ್ಪರ್ಧಿಗಳಾಗಿದ್ದಾರೆ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಹುಲ್ ಗಾಂಧಿಯನ್ನು ಭೇಟಿಯಾದ ಕರ್ನಾಟಕದ ಟ್ಯಾಕ್ಸಿ ಚಾಲಕರಿಗೆ ಹೊಸ ಭರವಸೆ

ವಿದೇಶಿ ಶಕ್ತಿಗಳ ಕೈವಾಡವೂ ಅಡಗಿರುವ ಸಾಧ್ಯತೆ: ವಿಜಯೇಂದ್ರ

ಧರ್ಮಸ್ಥಳ ಬುರುಡೆ ರಹಸ್ಯ: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಣ್ಣಾಮಲೈ ಕಿಡಿ

ಸಿಎಂ ಸಿದ್ದರಾಮಯ್ಯ ಅಂದು ಕಾಮನ್‌ಸೆನ್ಸ್‌ ಯೂಸ್ ಮಾಡ್ತಿದ್ರೆ, ಈ ಪರಿಸ್ಥಿತಿಯಲ್ಲ: ಆರ್‌ ಅಶೋಕ್‌

ಹೊಸ ದಿಕ್ಕಿನತ್ತ ತನಿಖೆ, ಶಿವತಾಂಡವದ ಫೋಟೋ ಹಂಚಿಕೊಂಡ ಧರ್ಮಸ್ಥಳ

ಮುಂದಿನ ಸುದ್ದಿ
Show comments