ವಿವಾಹವನ್ನು ತಿರಸ್ಕರಿಸಿದ್ದರಿಂದ ಬಾಯ್‌ಫ್ರೆಂಡ್‌ ಜನನಾಂಗ ಕತ್ತರಿಸಿದ ಪ್ರಿಯತಮೆ

Webdunia
ಶುಕ್ರವಾರ, 23 ಜೂನ್ 2017 (20:07 IST)
ಮದುವೆಯಾಗಲು ನಿರಾಕರಿಸಿದ ಗೆಳೆಯನ ಜನನಾಂಗಗಳನ್ನು ಕತ್ತರಿಸಿದ 23 ವರ್ಷ ವಯಸ್ಸಿನ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಆಕೆಯ ಗೆಳೆಯನನ್ನು ಸಂಜಯ್ ಗಾಂಧಿ ಮೆಮೋರಿಯಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
 
35 ವರ್ಷ ವಯಸ್ಸಿನ ರವಿ ಎಂಬಾತನಿಗೆ ಸಂಬಂಧಿಯೊಬ್ಬರು 11.30 ಗಂಟೆಗೆ ಕರೆ ಮಾಡಿ, ದೆಹಲಿಯ ಮಂಗೋಲ್‌ಪುರಿ ಪ್ರದೇಶದಲ್ಲಿರುವ ನಿನ್ನ ಗೆಳತಿಯ ಮನೆಗೆ ತೆರಳುವಂತೆ ಮಾಹಿತಿ ನೀಡಿದ್ದಾರೆ. ಗೆಳತಿಯ ಮನೆಯಲ್ಲಿ ಇಂತಹ ಹೇಯ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. 
 
ರವಿ. ಗೆಳೆತಿಯ ಮನೆಗೆ ಬಂದಾಗ ಆಕೆ ವಿವಾಹದ ಪ್ರಸ್ತಾವನೆ ಮುಂದಿಟ್ಟಿದ್ದಾಳೆ. ಆದರೆ, ನನ್ನ ಕುಟುಂಬ ವಿರುದ್ಧವಾಗಿದ್ದರಿಂದ ವಿವಾಹ ಸಾಧ್ಯವಿಲ್ಲ ಎಂದು ರವಿ ಆಕೆಯ ಕೋರಿಕೆಯನ್ನು ತಿರಸ್ಕರಿಸಿದ್ದಾನೆ. 
 
ಓಲೈಸುವ ನೆಪದಲ್ಲಿ ಆಕೆ ಪ್ರಿಯತಮ ರವಿಯನ್ನು ಬಾತ್‌ರೂಮ್‌ಗೆ ಕರೆದುಕೊಂಡು ಹೋಗಿ ಆತನನ್ನು ವಿವಸ್ತ್ರಗೊಳಿಸಿ ಸೆಕ್ಸ್ ಮಾಡುವಂತೆ ಒತ್ತಾಯಿಸಿದ್ದಾಳೆ. ಒಂದು ವೇಳೆ , ಸೆಕ್ಸ್ ಮಾಡದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾಳೆ.
 
ಆತನ ನಿರಾಕರಣೆಯಿಂದಾಗಿ ಕೋಪಗೊಂಡ ಯುವತಿ, ಕಿಚನ್ ಚಾಕುವಿನೊಂದಿಗೆ ಗೆಳೆಯ ರವಿಯ ಜನನಾಂಗಗಳನ್ನು ಕತ್ತರಿಸಿ ಹಾಕಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
 
ಈ ಘಟನೆ ನಡೆದ ಸಂದರ್ಭದಲ್ಲಿ ಮನೆಯಲ್ಲಿ ಆಕೆಯ ಸಹೋದರ ಮತ್ತು ಅತ್ತಿಗೆ ಮನೆಯಲ್ಲಿದ್ದರು. ಆದಾಗ್ಯೂ ಮಹಿಳೆ ಆಕ್ರಮಣ ಮಾಡುವುದನ್ನು ತಡೆಯಲು ಅವರು ಏನೂ ಮಾಡಲಿಲ್ಲ ಎಂದು ರವಿ ಆರೋಪಿಸಿದ್ದಾನ.
 
ಜನನಾಂಗ ಕತ್ತರಿಸಿದ ನಂತರ, ರವಿ ಸಹಾಯಕ್ಕಾಗಿ ಕೂಗುತ್ತಾ ಮನೆಯಿಂದ ಹೊರಗೆ ಓಡಿ ಬಂದಿದ್ದಾನೆ. ಕೂಡಲೇ ನೆರೆಯವರು ಪೊಲೀಸರಿಗೆ ಮಾಹಿತಿ ನೀಡಿ ರವಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಶಸ್ತ್ರಚಿಕಿತ್ಸೆಯ ನಂತರ, ಅವರನ್ನು ಜೈಪುರ್ ಗೋಲ್ಡನ್ ಆಸ್ಪತ್ರೆಗೆ ವರ್ಗಾಯಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
 
ರವಿ ವಾಸಿಸುತ್ತಿರುವ ಮನೆಯಿಂದ ಕೂಗಳತೆಯ ದೂರಿನಲ್ಲಿಯೇ ಮಹಿಳೆ ಮನೆಯಿದೆ. ಘಟನೆಯ ನಂತರ ಮಹಿಳೆ ಮತ್ತು ಆಕೆಯ ಕುಟುಂಬದವರು ಪರಾರಿಯಾಗಿದ್ದಾರೆ. ಅವರ ಬಂಧನಕ್ಕೆ ಜಾಲ ಬೀಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ.
 
http://kannada.fantasycricket.webdunia.com/

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಟ ವಿಜಯ್ ಟಿವಿಕೆ ಪಕ್ಷಕ್ಕೆ ಎಐಎಡಿಎಂಕೆ ನಾಯಕ ಸಂಪತ್ ಸೇರ್ಪಡೆ, ಪಕ್ಷದೊಳಗೆ ಭಾರೀ ಬೆಳವಣಿಗೆ

ಹಿಂದೂ ಹೆಣ್ಣುಮಕ್ಕಳಿಗೆ ಜಾಗೃತಿ ಮೂಡಿಸುವುದು ದ್ವೇಷ ಆಗುತ್ತಾ: ಪ್ರಮೋದ್ ಮುತಾಲಿಕ್

ರೋಡ್‌ನಲ್ಲಿ ಬಿಟ್ಟು ಹೋದ ರಾಟ್ ವೀಲರ್ ನಾಯಿಗಳ ದಾಳಿಗೆ ಮಹಿಳೆ ಬಲಿ, ಆಗಿದ್ದೇನು ಗೊತ್ತಾ

ಶಬರಿಮಲೆ ಚಿನ್ನ ಕಳವು ವಿಚಾರ, ಈಗ ಮಾತನಾಡುವುದು ಸರಿಯಲ್ಲ: ಪಿಣರಾಯಿ ವಿಜಯನ್

ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ವಿಚಾರ ವದಂತಿ ಬೇಡ: ಮಧು ಬಂಗಾರಪ್ಪ

ಮುಂದಿನ ಸುದ್ದಿ
Show comments