Select Your Language

Notifications

webdunia
webdunia
webdunia
webdunia

ಗೆಳತಿಯ ಅಪ್ಪನ ಬೈಗುಳಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಂಡ ಬಾಲಕ

ಗೆಳತಿಯ ಅಪ್ಪನ ಬೈಗುಳಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಂಡ ಬಾಲಕ
ಬುಂಡಿ , ಬುಧವಾರ, 26 ನವೆಂಬರ್ 2014 (15:42 IST)
14 ವರ್ಷದ ಬಾಲಕನೊಬ್ಬ ಕ್ಷುಲ್ಲಕ ಕಾರಣಕ್ಕೆನೇಣಿಗೆ ಶರಣಾದ ಹೃದಯವಿದ್ರಾವಕ ಘಟನೆ ರಾಜಸ್ಥಾನದಲ್ಲಿ ನಡೆದಿದೆ. 

ಬುಂಡಿ ಎಂಬಲ್ಲಿ ಸೋಮವಾರ ಈ ಘಟನೆ ನಡೆದಿದೆ. ಪೊಲೀಸರು ನೀಡಿದ ಮಾಹಿತಿಯ ಪ್ರಕಾರ 9 ನೇ ತರಗತಿಯಲ್ಲಿ ಓದುತ್ತಿದ್ದ  ಅನಿಲ್ ಭೈರ್ವಾ ಎಂಬ ಬಾಲಕ ತಮ್ಮದೇ ಶಾಲೆಯಲ್ಲಿ ಓದುತ್ತಿರುವ ಬಾಲಕಿಯೊಬ್ಬಳಿಗೆ ಮೊಬೈಲ್ ಒಂದನ್ನು ಉಡುಗೊರೆಯಾಗಿ ನೀಡಿದ್ದ.  ಮಗಳ ಬಳಿ ಮೊಬೈಲ್ ಇರುವುದನ್ನು ನೋಡಿದ ಆಕೆಯ ತಂದೆ, ಆ ಕುರಿತು ಅವಳಲ್ಲಿ ವಿಚಾರಿಸಿದಾಗ, ಆಕೆ ಬಾಲಕ ತನಗೆ ಅದನ್ನು ನೀಡಿರುವ ಕುರಿತು ಹೇಳಿದ್ದಾನೆ.
 
ಇದರಿಂದ ಕ್ರೋಧಿತನಾದ ಆಕೆಯ ತಂದೆ ಮಗಳು ಓದುತ್ತಿದ್ದ ಶಾಲೆಯ ಶಿಕ್ಷಕರೊಡಗೂಡಿ ಬಾಲಕನ ಮನೆಗೆ ಹೋಗಿದ್ದಾನೆ. ಆತನ ತಂದೆ- ತಾಯಿಗಳ ಬಳಿ  ತನ್ನ ಮಗಳಿಗೆ ನಿಮ್ಮ ಮಗ ಹಿಂಸೆ ನೀಡುತ್ತಿದ್ದಾನೆ ಎಂದು ಆರೋಪಿಸಿದ್ದಾರೆ. ಅಲ್ಲದೇ ತಂದೆ- ತಾಯಿಗಳ ಮುಂದೆಯೇ ಬಾಲಕನಿಗೆ ಮತ್ತೆ ತಮ್ಮ ಮಗಳ ಸುದ್ದಿಗೆ ಬರದಂತೆ ಎಚ್ಚರಿಕೆ ನೀಡಿದ್ದಾರೆ.
 
ತಂದೆ ತಾಯಿಗಳ ಮುಂದೆ ತನಗಾದ ಅವಮಾನದಿಂದ ತೀವೃ ನೊಂದ ಬಾಲಕ ಜೀವ ತೆಗೆದುಕೊಳ್ಳುವ ನಿರ್ಧಾರವನ್ನು ತಳೆದಿದ್ದಾನೆ. ಅವರು ಬಂದು ಹೋದ ಕೆಲವು ಗಂಟೆಗಳಲ್ಲಿ ಆತ ನೇಣಿಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ. 
 
ಮೃತ ಬಾಲಕನ ತಂದೆ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪ ಹೊರಿಸಿ  ಬಾಲಕಿ, ಆಕೆಯ ತಂದೆ ಮತ್ತು ಶಿಕ್ಷಕರ ಮೇಲೆ ಕೇಸ್ ದಾಖಲಿಸಿದ್ದಾರೆ. 
 
ಬಾಲಕನ ಡೆತ್ ನೋಟ್‌ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅದರಲ್ಲಿ ಬಾಲಕ ತಾನು ತೆಗೆದುಕೊಂಡ ಗಂಭೀರ ನಿರ್ಧಾರದ ಬಗ್ಗೆ ಕ್ಷಮೆ ಕೇಳಿದ್ದಾನೆ.

Share this Story:

Follow Webdunia kannada