Select Your Language

Notifications

webdunia
webdunia
webdunia
webdunia

ಪನ್ನೀರ್‌ಸೆಲ್ವಂ ಸೇರಿದಂತೆ ಇತರರನ್ನು ಭೇಟಿಯಾಗಲು ನಿರಾಕರಿಸಿದ ಜಯಲಲಿತಾ

ಪನ್ನೀರ್‌ಸೆಲ್ವಂ ಸೇರಿದಂತೆ ಇತರರನ್ನು ಭೇಟಿಯಾಗಲು ನಿರಾಕರಿಸಿದ ಜಯಲಲಿತಾ
ಬೆಂಗಳೂರು , ಬುಧವಾರ, 1 ಅಕ್ಟೋಬರ್ 2014 (17:22 IST)
ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಅಪರಾಧಿಯೆಂದು ಸಾಬೀತಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧಿಯಾಗಿರುವ ಎಐಡಿಎಂಕೆ ನಾಯಕಿ ಮತ್ತು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ತಮ್ಮ ನಿಷ್ಠ, ತಮಿಳುನಾಡಿನ ನೂತನ ಮುಖ್ಯಮಂತ್ರಿ ಒ.ಪನ್ನೀರ್‌ಸೆಲ್ವಂ ಸೇರಿದಂತೆ ಯಾರನ್ನು ಕೂಡ ಭೇಟಿಯಾಗಲು ನಿರಾಕರಿಸಿದ್ದಾರೆ. 

ಸೋಮವಾರ ಚೆನ್ನೈನ ರಾಜಭವನದಲ್ಲಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಕೆಲ ಗಂಟೆಗಳ ನಂತರ ತಮ್ಮ ಸಚಿವ ಸಂಪುಟದ ಕೆಲ ಮಂತ್ರಿಗಳೊಡನೆ ಪನ್ನೀರ್‌ಸೆಲ್ವಂ  ಜಯಲಲಿತಾರವರನ್ನು ಭೇಟಿಯಾಗಲು ಬೆಂಗಳೂರಿಗೆ ಬಂದಿದ್ದರು. ಆ ದಿನ ಜಯಲಲಿತಾರವರನ್ನು ಭೇಟಿಯಾಗಲು ವಿಫಲವಾಗಿದ್ದ ಅವರು ಮರುದಿನವಾದರೂ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆಯುವ ಉದ್ದೇಶದೊಂದಿಗೆ ಖಾಸಗಿ ಹೊಟೆಲ್ ಒಂದರಲ್ಲಿ ತಂಗಿದ್ದರು. ಆದರೆ ಜಯಲಲಿತಾ ಯಾರನ್ನು ಕೂಡ ಭೇಟಿಯಾಗಲು ನಿರಾಕರಿಸಿದ ಕಾರಣಕ್ಕೆ ಮಂಗಳವಾರ ಸಂಜೆ ಸೆಲ್ವಂ ಚೆನ್ನೈಗೆ ಹಿಂತಿರುಗಿದ್ದರು. 
 
ರಾಜಕೀಯ ಪಕ್ಷದ ಮುಖಂಡ, ನಟ ಶರತ್ ಕುಮಾರ್, ಮತ್ತು ಎಐಎಡಿಎಂಕೆ ಸದಸ್ಯ, ನಟ ಆನಂದ ರಾಜ್, ಅವರು ಜಯಲಲಿತಾರನ್ನು ಭೇಟಿಯಾಗಲು ಮಾಡಿದ ಪ್ರಯತ್ನಗಳು ಕೂಡ ನಿಷ್ಫಲವಾದವು ಎಂದು ಮೂಲಗಳು ತಿಳಿಸಿವೆ. 
 
ಜಯಲಲಿತಾ ಭೇಟಿಯಾಗಲು ನೂರಾರು ಸಂಖ್ಯೆಯಲ್ಲಿ ಬಂದವರನ್ನು ಪೋಲಿಸರು ತಡೆದರು. ಇದರಿಂದ ಕೆರಳಿದ ಎಐಡಿಎಂಕೆ ಕಾರ್ಯಕರ್ತರು ತಮ್ಮನ್ನು ಕೂಡ ಒಳಬಿಡುವಂತೆ ಧರಣಿ ನಡೆಸಿದರು. ಆದರೆ ಅವರ ಧರಣಿ ಹತ್ತಿಕ್ಕಲ್ಪಟ್ಟಿತು. ಬೆಂಬಲಿಗರು ಹರಿವು ಅವ್ಯಾಹತವಾಗಿ ಮುಂದುವರಿದಾಗ ಜೈಲಿನ ಬಳಿ ಭದ್ರತಾ ವ್ಯವಸ್ಥೆಗಳನ್ನು ಬಿಗಿಯಾಗಿಸಲಾಯಿತು.  ಈ ವ್ಯವಸ್ಥೆಯನ್ನು ಮುಂದಿನ ಕೆಲ ದಿನಗಳವರೆಗೆ ಮುಂದುವರೆಸುವುದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 

Share this Story:

Follow Webdunia kannada