Select Your Language

Notifications

webdunia
webdunia
webdunia
webdunia

ಅಂತರ್ಜಾತಿ ಮದುವೆಯಾದರೆ 50,000 ಪ್ರೋತ್ಸಾಹಧನ

ಅಂತರ್ಜಾತಿ ಮದುವೆಯಾದರೆ 50,000 ಪ್ರೋತ್ಸಾಹಧನ
ಮೀರತ್ , ಗುರುವಾರ, 29 ಜನವರಿ 2015 (13:23 IST)
ಅಸಮಾನತೆ, ಜಾತಿಪದ್ಧತಿಯನ್ನು ಬುಡಸಮೇತ ಕಿತ್ತು ಹಾಕುವ ನಿಟ್ಚಿನಲ್ಲಿ ಅಖಿಲೇಶ್ ಯಾದವ್ ನೇತೃತ್ವದ ಉತ್ತರ ಪ್ರದೇಶ ಸರಕಾರ ಹೊಸ ಹೆಜ್ಜೆಯನ್ನಿಟ್ಟಿದ್ದು ಅಂತರ್ಜಾತಿ ವಿವಾಹವಾದರೆ 50,000 ರೂಪಾಯಿ, ಪ್ರಶಸ್ತಿ ಫಲಕ ಮತ್ತು ಪ್ರಮಾಣಪತ್ರವನ್ನು ನೀಡುವುದಾಗಿ ಘೋಷಿಸಿದೆ. 
 
ಇದರನ್ವಯ ಪ್ರೇಮಿಗಳ ದಿನಾಚರಣೆಗೂ ಒಂದು ವಾರ ಮೊದಲು ಫೆಬ್ರವರಿ 8 ರಂದು ಅಂತರ್ಜಾತಿ ವಿವಾಹವಾಗಿರುವ 8 ಜನ ದಂಪತಿಗಳಿಗೆ ಸಹಾಯಧನ ಮತ್ತು ಪ್ರಶಸ್ತಿ, ಪ್ರಮಾಣಪತ್ರ ನೀಡಿ ಸನ್ಮಾನಿಸಲಾಗುವುದು ಎಂದು ವರದಿಯಾಗಿದೆ. 
 
ಮೀರತ್ ವಲಯದ ಆಯುಕ್ತ, ಭೂಪೇಂದ್ರ ಸಿಂಗ್ ಈ ಯೋಜನೆಯ ಬಗ್ಗೆ ಖಚಿತ ಪಡಿಸಿದ್ದಾರೆ. " ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಅಂತರ್ಜಾತಿ ವಿವಾಹವಾಗಿರುವ ನೂತನ ಜೋಡಿಗಳು ಪ್ರಶಸ್ತಿ ಪ್ರಮಾಣಪತ್ರ ಮತ್ತು ಪದಕದ ಜೊತೆಗೆ, ರೂ 50,000 ಬಹುಮಾನವನ್ನು ಪಡೆದುಕೊಳ್ಳಲಿದ್ದಾರೆ," ಎಂದು ಅವರು ತಿಳಿಸಿದ್ದಾರೆ. 
 
"ರಾಜ್ಯದಾದ್ಯಂತ  ಈ ಯೋಜನೆ ಅನ್ವಯವಾಗಲಿದ್ದು, ಒಂದು ನಿರ್ಬಂಧನೆ ಇರುತ್ತದೆ. ವಧು ಅಥವಾ ವರ ಯಾರಾದರೊಬ್ಬರು ಪರಿಶಿಷ್ಠ ಜಾತಿಗೆ ಸೇರಿದ್ದರೆ ಮಾತ್ರ ಅವರು ಈ ಯೋಜನೆಯ ಲಾಭ ಪಡೆದುಕೊಳ್ಳಲಿದ್ದಾರೆ. ಆದಾಯವನ್ನು ಇಲ್ಲಿ ಪರಿಗಣಿಸಲಾಗುವುದಿಲ್ಲ"  ಎಂದು ಸಿಂಗ್ ಹೇಳಿದ್ದಾರೆ. 
 
ಸಾಮಾಜಿಕ ಕಾರ್ಯಕರ್ತರು ಈ ಯೋಜನೆ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

Share this Story:

Follow Webdunia kannada