Webdunia - Bharat's app for daily news and videos

Install App

ರೇಪ್ ಯತ್ನ: ಆರೋಪಿಗಳ ಪರ ವಹಿಸಿದ ಬಿಜೆಪಿ ಸಂಸದ

Webdunia
ಶುಕ್ರವಾರ, 6 ಜನವರಿ 2017 (12:17 IST)
ಯುವತಿಯೋರ್ವಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲು ಯತ್ನಿಸಿದ ನಾಲ್ವರು ದುರುಳರು ಪ್ರತಿರೋಧ ವ್ಯಕ್ತ ಪಡಿಸಿದ್ದಕ್ಕೆ ಆಕೆಯ ಕಿವಿಯನ್ನೇ ಕತ್ತರಿಸಿದ ಅಮಾನವೀಯ ಘಟನೆ ಉತ್ತರ ಪ್ರದೇಶದ ಬಾಗ್ಪತ್‌ನಲ್ಲಿ ನಡೆದಿದೆ.  

ಜನವರಿ ನಾಲ್ಕರಂದು ಈ ಹೇಯ ಘಟನೆ ನಡೆದಿದ್ದು, ಬಲವಂತವಾಗಿ ಯುವತಿಯ ಮನೆಗೆ ನುಗ್ಗಿದ ನಾಲ್ವರು ಯುವಕರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲು ಪ್ರಯತ್ನ ಪಟ್ಟಿದ್ದರು. ಆದರೆ ಆಕೆ ಅವರ ದುಷ್ಕೃತ್ಯಕ್ಕೆ ತೀವ್ರ ಪ್ರತಿರೋಧ ಒಡ್ಡಿದ್ದಾಳೆ. ಇದರಿಂದ ಸಿಟ್ಟಿಗೆದ್ದ ದುರುಳರು ಆಕೆಯ ಕಿವಿಗೆ ಕತ್ತರಿ ಹಾಕಿದ್ದಾರೆ. ಈ ಕುರಿತು ಯುವತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. 
 
ಮತ್ತೂ ಆಘಾತಕಾರಿ ಸಂಗತಿ ಎಂದರೆ, ಈ ಕುರಿತು ಪ್ರತಿಕ್ರಿಯಿಸಿರುವ ಬಾಗ್ಪತ್ ಪ್ರತಿನಿಧಿಸುವ ಬಿಜೆಪಿ ಸಂಸದ ಸತ್ಯಪಾಲ್ ಸಿಂಗ್, ಅತ್ಯಾಚಾರ ಯತ್ನ ನಡೆದಿಲ್ಲ. ಪೀಡಿತೆ ನೀಡಿರುವ ದೂರಿನಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದಿದ್ದಾರೆ. 
 
ಈ ಕುರಿತು ನಾನು ಜಿಲ್ಲಾ ಪೊಲೀಸ್ ಅಧೀಕ್ಷಕರ ಬಳಿ ಮಾತನಾಡಿದ್ದೇನೆ. ಡಿಸೆಂಬರ್ 31 ರಂದು ನೆರೆಹೊರೆಯವರ ಮಧ್ಯೆ ಈ ಘಟನೆ ನಡೆದಿತ್ತು ಎಂದು ಅವರು ಮಾಹಿತಿ ನೀಡಿದ್ದಾರೆ. ಘಟನೆ ನಡೆದ ಹಲವು ದಿನಗಳ ಬಳಿಕ ದೂರು ದಾಖಲಾಗಿದೆ ಎಂದರೆ ಇದು ಪಿತೂರಿ ಎನ್ನಿಸುತ್ತಿದೆ ಎಂದಿದ್ದಾರೆ. 
 
 
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಧರ್ಮಸ್ಥಳ ಪ್ರಕರಣ: ರಾಜ್ಯ ಸರ್ಕಾರದಿಂದ ಎಸ್‌ಐಟಿಗೆ 20 ಪೊಲೀಸ್ ಅಧಿಕಾರಿಗಳ ನಿಯೋಜನೆ

ಬಾ ನಲ್ಲ ಮಧುಚಂದ್ರಕೆ ಪ್ರಕರಣ: ಪತಿ ಕೊಂದು ಜೈಲು ಸೇರಿದ್ದ ಸೋನಂ ನಡವಳಿಕೆಗೆ ಶಾಕ್

ಸುಳ್ಳು, ವಂಚನೆ ಮಾಡೋದೇ ಕಾಂಗ್ರೆಸ್ ಸರ್ಕಾರದ ಕೆಲಸ: ಛಲವಾದಿ ನಾರಾಯಣಸ್ವಾಮಿ

ಆರ್ಕಿಟೆಕ್ಚರ್ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ: ಮೂವರು ಕ್ಲಾಸ್‌ಮೇಟ್‌ಗಳ ವಿರುದ್ಧ ಎಫ್‌ಐಆರ್‌

ಕರ್ನಾಟಕದ ಲೋಕಸಭಾ ಕ್ಷೇತ್ರದಲ್ಲೂ ಕಳ್ಳಾಟ ನಡೆದಿದೆ: ರಾಹುಲ್ ಗಾಂಧಿ ಗಂಭೀರ ಆರೋಪ

ಮುಂದಿನ ಸುದ್ದಿ
Show comments