Select Your Language

Notifications

webdunia
webdunia
webdunia
webdunia

ಮೊಬೈಲ್ ಫೋನ್, ಅಸಭ್ಯ ಡ್ರೆಸಿಂಗ್, ಅಶ್ಲೀಲ ಜಾಹೀರಾತುಗಳು ರೇಪ್ ಹೆಚ್ಚಲು ಕಾರಣ ಎಂದ ಯುಪಿ ಪೊಲೀಸ್

ಮೊಬೈಲ್ ಫೋನ್, ಅಸಭ್ಯ ಡ್ರೆಸಿಂಗ್, ಅಶ್ಲೀಲ ಜಾಹೀರಾತುಗಳು ರೇಪ್ ಹೆಚ್ಚಲು ಕಾರಣ ಎಂದ ಯುಪಿ ಪೊಲೀಸ್
ನವದೆಹಲಿ , ಗುರುವಾರ, 30 ಅಕ್ಟೋಬರ್ 2014 (18:41 IST)
ರಾಜ್ಯದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳ ಹೆಚ್ಚಳದ ಬಗ್ಗೆ ಅಸಂಬದ್ಧ ಹೇಳಿಕೆ ನೀಡಿರುವ ಉತ್ತರ ಪ್ರದೇಶದ ಪೊಲೀಸರು,  ಮೊಬೈಲ್ ಫೋನ್ ಸಂಸ್ಕೃತಿ, ಪಾಶ್ಚಿಮಾತ್ಯ ಸಂಸ್ಕೃತಿಯ ಕೆಟ್ಟ ಪ್ರಭಾವ ಮತ್ತು ಅಸಭ್ಯ ಡ್ರೆಸಿಂಗ್ ಶೈಲಿಯೇ ಮಹಿಳೆಯರ ಮೇಲಿನ ಅತ್ಯಾಚಾರಕ್ಕೆ ಮುಖ್ಯ ಕಾರಣಗಳು ಎಂದು ಆರೋಪಿಸಿದ್ದಾರೆ.

ಮಾಹಿತಿ ಹಕ್ಕಿನಡಿ ಕೇಳಲಾದ ಪ್ರಶ್ನೆಗೆ ಪೊಲೀಸರಿಂದ ಈ ಉತ್ತರ ಬಂದಿದೆ. ಮಹಿಳೆಯರ ಸಿಂಗಾರ ಅತಿರೇಕಕ್ಕೇರಿರುವುದು ಪುರುಷರನ್ನು ತಪ್ಪು ಅರ್ಥದಲ್ಲಿ ಸೆಳೆಯುತ್ತಿದೆ ಎಂದು ಫಿರೋಜಾಬಾದ್ ಪೊಲೀಸ್ ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ. 
 
ಕೆಲವು ಪೊಲೀಸ್ ಠಾಣೆಗಳಿಂದ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳು ಇದಕ್ಕೆ ಕಾರಣವೆಂಬ ಉತ್ತರ ಬಂದರೆ,  ಮತ್ತೆ ಕೆಲವರು ಮೊಬೈಲ್ ಫೋನ್ ಇದಕ್ಕೆ ಕಾರಣ ಎಂದಿದ್ದಾರೆ. ಮತ್ತೆ ಕೆಲವರು ಮನರಂಜನೆಯ ಕೊರತೆಯಿಂದ ಅತ್ಯಾಚಾರ ನಡೆಯುತ್ತಿವೆ ಎಂದು ಪ್ರತ್ಯುತ್ತರ ನೀಡಿದ್ದಾರೆ. ಅವರು ನೀಡಿರುವ ಉತ್ತರಗಳು ಬೇಜವಾಬ್ದಾರಿಯಿಂದ ಕೂಡಿದ್ದವು  ಎಂದು ಮಾಹಿತಿ ಹಕ್ಕು ಅರ್ಜಿದಾರ ಲೋಕೇಶ್ ಖುರಾನಾ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. 
 
ಕಾಂಗ್ರೆಸ್ ಸಹ ಪೊಲೀಸರ ಈ ಪ್ರತ್ಯುತ್ತರಕ್ಕೆ ಗರಂ ಆಗಿದೆ.  ಈ ಕುರಿತು ಪ್ರತಿಕ್ರಿಯಿಸಿರುವ ಪಕ್ಷದ ನಾಯಕಿ ಶೋಭನಾ ಓಜಾ "ಇದು ಸೂಕ್ಷ್ಮವಲ್ಲದ ಮತ್ತು ತಪ್ಪು ಹೇಳಿಕೆಯಾಗಿದೆ. ಪೊಲೀಸರು ಮತ್ತು ಸರ್ಕಾರ ಅವರವರ ಕೆಲಸವನ್ನು ಸಮರ್ಥವಾಗಿ ಮಾಡಬೇಕು. ಆ ಮೂಲಕವಷ್ಟೇ ಅಪರಾಧಗಳನ್ನು ಕಡಿಮೆ ಮಾಡಲು ಸಾಧ್ಯ " ಎಂದು ಹೇಳಿದ್ದಾರೆ.
 
"ಯಾರು, ಈ ಹೇಳಿಕೆಗಳನ್ನು ನೀಡಿದ್ದಾರೋ, ಅವರು ತಮ್ಮ ವೈಫಲ್ಯಗಳನ್ನು ಮರೆಮಾಡಲು ಪ್ರಯತ್ನಿಸುತ್ತಿದ್ದಾರೆ. ಸಮಯ ಬದಲಾದಂತೆ ಎಲ್ಲದರಲ್ಲಿ ಬದಲಾವಣೆಯಾಗುತ್ತದೆ. ಆದರೆ, ಇದರರ್ಥ ಮಹಿಳೆಯರ ವಿರುದ್ಧ ಇಂತಹ ದುಷ್ಕೃತ್ಯಗಳನ್ನು ಎಸಗಲು ಹಕ್ಕು ಹೊಂದುವುದು ಅಂತಲ್ಲ " ಎಂದಿದ್ದಾರೆ ಐಪಿಎಸ್ ಅಮಿತಾಭ್ ಠಾಕೂರ್ .

Share this Story:

Follow Webdunia kannada