Webdunia - Bharat's app for daily news and videos

Install App

ಐದು ವರ್ಷಗಳಿಂದ 14 ವರ್ಷದ ಪುತ್ರಿಯ ಮೇಲೆ ಅತ್ಯಾಚಾರವೆಸಗಿದ ಕಾಮುಕ ತಂದೆಯ ಬಂಧನ

Webdunia
ಭಾನುವಾರ, 28 ಫೆಬ್ರವರಿ 2016 (16:42 IST)
ಕಳೆದ ಐದು ವರ್ಷಗಳಿಂದ 14 ವರ್ಷದ ಪುತ್ರಿಯ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿ 40 ವರ್ಷ ವಯಸ್ಸಿನ ಕಾಮುಕ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.
 
ಉತ್ತರಪ್ರದೇಶ ಮೂಲದ ಆರೋಪಿ ಅನಿಲ್ ಸಿಂಗ್, ಖಾಸಗಿ ಕಂಪೆನಿಯ ಕಾರ್ಯನಿರ್ವಹಿಸುತ್ತಿದ್ದು ದೆಹಲಿಯಲ್ಲಿ ವಾಸವಾಗಿದ್ದನು ಎಂದು ಮೂಲಗಳು ತಿಳಿಸಿವೆ. 
 
ತಾನು ಪುತ್ರಿಯ ಮೇಲೆ ಅತ್ಯಾಚಾರವೆಸಗಿಲ್ಲ. ನೆರೆಮನೆಯಾತ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಪಾಪಿ ತಂದೆ ಪೊಲೀಸರಿಗೆ ದೂರು ನೀಡಿದ್ದಾನೆ. ಆದರೆ, ವಿಚಾರಣೆ ವೇಳೆಯಲ್ಲಿ ತನ್ನ ತಂದೆಯೇ ಐದು ವರ್ಷಗಳಿಂದ ಅತ್ಯಾಚಾರವೆಸಗುತ್ತಿದ್ದಾನೆ ಎಂದು ಬಾಲಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. 
 
8ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿ, ತಂದೆ ಅತ್ಯಾಚಾರವೆಸಗುವುದನ್ನು ತಡೆಯಲು ಪ್ರಯತ್ನ ಪಟ್ಟಿದ್ದಳು. ಪೊಲೀಸರಿಗೆ ದೂರು ನೀಡುವುದಾಗಿ ಬೆದರಿಕೆಯೊಡ್ಡಿದ್ದಳು. ಆದರೆ ಆರೋಪಿ ತಂದೆ ತನ್ನ ಕ್ಯಾರೆ ಎನ್ನದೆ ತನ್ನ ಕಾಯಕವನ್ನು ಮುಂದುವರಿಸಿಕೊಂಡು ಹೋಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
 
ಆರೋಪಿ ಅನಿಲ್ ಸಿಂಗ್, ಎರಡು ಬಾರಿ ವಿವಾಹವಾಗಿದ್ದ. ಮೊದಲನೇ ಪತ್ನಿ ತನ್ ಲವರ್‌ನೊಂದಿಗೆ ಓಡಿಹೋಗಿದ್ದರೆ, ಎರಡನೇ ಪತ್ನಿ ಸಂಶಯಾಸ್ಪದವಾಗಿ ಸಾವಿಗೀಡಾಗಿದ್ದಳು. 
 
ಅನಿಲ್ ಸಿಂಗ್, 14 ವರ್ಷದ ಅತ್ಯಾಚಾರಕ್ಕೊಳಗಾದ ಪುತ್ರಿ ಮತ್ತು 10 ವರ್ಷದ ಪುತ್ರಿಯೊಂದಿಗೆ ವಾಸವಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments