Select Your Language

Notifications

webdunia
webdunia
webdunia
webdunia

ಬಿಜೆಪಿ ಜನರನ್ನು ಮೂರ್ಖರನ್ನಾಗಿಸುತ್ತಿದೆ: ಬಿಹಾರ್ ಉಪ ಮುಖ್ಯಮಂತ್ರಿ

ಬಿಜೆಪಿ ಜನರನ್ನು ಮೂರ್ಖರನ್ನಾಗಿಸುತ್ತಿದೆ: ಬಿಹಾರ್ ಉಪ ಮುಖ್ಯಮಂತ್ರಿ
ಪಾಟ್ಣಾ , ಶನಿವಾರ, 2 ಜುಲೈ 2016 (18:45 IST)
ದೇಶಾದ್ಯಂತ ಸಮಾನ ನಾಗರಿಕ ಸಂಹಿತೆ ಅನುಷ್ಠಾನದ ಪರಿಣಾಮಗಳನ್ನು ಪರೀಕ್ಷಿಸುವಂತೆ ಕಾನೂನು ಆಯೋಗಕ್ಕೆ ಕೇಳಿರುವ ಕೇಂದ್ರ ಸರ್ಕಾರದ ನಡೆಯನ್ನು ಟೀಕಿಸಿರುವ ಬಿಹಾರ್ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಇದು ಜನರನ್ನು ಮರಳುಗೊಳಿಸುವ ತಂತ್ರ ಎಂದಿದ್ದಾರೆ. 
 
ಮಾಧ್ಯಮಗಳೊಂದಿಗೆ ಮಾತನ್ನಾಡುತ್ತಿದ್ದ ಅವರು ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಕೇಸರಿ ಪಕ್ಷ ಜನರನ್ನು ಮರಳು ಮಾಡುವ ತನ್ನ ಹಳೆಯ ತಂತ್ರವನ್ನು ಮತ್ತೆ ಪ್ರಯೋಗಿಸುತ್ತಿದೆ ಎಂದು ಆರೋಪಿಸಿದ್ದಾರೆ. 
 
ಪ್ರತಿ ಸಂದರ್ಭದಲ್ಲಿ ಚುನಾವಣೆ ಹತ್ತಿರ ಬರುತ್ತಿದ್ದಂತೆ ಬಿಜೆಪಿ ಇಂತಹ ವಾಗ್ದಾನಗಳನ್ನು ಮಾಡಲು ಪ್ರಾರಂಭಿಸುತ್ತದೆ ಎಂದು ಯಾದವ್ ಆರೋಪಿಸಿದ್ದಾರೆ. 
 
ಅವರು ಸಮಾನ ನಾಗರಿಕ ಸಂಹಿತೆಯನ್ನು ಅನುಷ್ಠಾನಗೊಳಿಸಬೇಕೆಂದಿದ್ದರೆ ಮೊದಲು ಜಮ್ಮು ಮತ್ತು ಕಾಶ್ಮೀರದಲ್ಲಿ ಅದನ್ನು ಜಾರಿಗೆ ತರಲಿ. ಅಲ್ಲವರು ಅಧಿಕಾರದಲ್ಲಿ ಸಹ ಇದ್ದಾರೆ ಎಂದು ಯಾದವ್ ಸವಾಲು ಹಾಕಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಉಗ್ರರು ಯಾವ ತರಹದಲ್ಲಿ ಮುಸಲ್ಮಾನರು: ಬಾಂಗ್ಲಾ ಪ್ರಧಾನಿ