Webdunia - Bharat's app for daily news and videos

Install App

ವಿವಾಹಿತ ಪುತ್ರಿಯ ಮೇಲೆ ರೇಪ್ ಎಸಗಿದ ಕಾಮುಕ

Webdunia
ಸೋಮವಾರ, 25 ಮೇ 2015 (19:55 IST)
28 ವರ್ಷ ಪ್ರಾಯದ ವಿವಾಹಿತೆಯನ್ನು 38 ವರ್ಷ ಪ್ರಾಯದ ಆಕೆಯ ಚಿಕ್ಕಪ್ಪನೇ ರೇಪ್‌ ಮಾಡಿದ ಘಟನೆ ಇಲ್ಲಿಗೆ ಸಮೀಪದ ಕಾಜುಪಾಡಾ- ವಡಾಚಾ ಪಾಡಾ ಎಂಬ ಗ್ರಾಮದಲ್ಲಿ ನಡೆದಿದೆ.
 
ಮಹಿಳೆಯು ತನ್ನ ಪತಿ ಹಾಗೂ ಚಿಕ್ಕಪ್ಪನೊಂದಿಗೆ ಸಂಬಂಧಿಯೋರ್ವರ ಮದುವೆಯ ಹಿಂದಿನ ದಿನದ ಸಮಾರಂಭಕ್ಕೆ ತೆರಳಿದ್ದಳು. ಸಮಾರಂಭ ಮುಗಿಯುತ್ತಿದ್ದಂತೆಯೆ ಮಹಿಳೆಗೆ ಆಕೆಯ ಚಿಕ್ಕಪ್ಪನು, ಆಕೆಯ ಪತಿ ಗಣೇಶಪುರಿ ಗ್ರಾಮದಲ್ಲಿನ ತನ್ನ ಮನೆಗೆ ಹೋದನೆಂದು ಸುಳ್ಳು ಹೇಳಿದ.
 
ಈ ಸುಳ್ಳನ್ನು ನಂಬಿದ ಮಹಿಳೆಯು ಒಂಟಿಯಾಗಿ ತನ್ನ ಮನೆಗೆ ಹೋಗಲು ಮುಂದಾದಳು. ಆದರೆ ಆಕೆಗೆ ಗೊತ್ತಿಲ್ಲದಂತೆ ಆಕೆಯನ್ನು ಹಿಂಬಾಲಿಸಿಕೊಂಡು ಬಂದ ಆಕೆಯ ಚಿಕ್ಕಪ್ಪನು ಆಕೆಯ ಕೈಹಿಡಿದು ಎಳೆದುಕೊಂಡು ಸಮೀಪದ ಅರಣ್ಯಕ್ಕೆ ಒಯ್ದು ಅಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದನು. ಈ ವಿಷಯವನ್ನು ಯಾರಲ್ಲಾದರೂ ಹೇಳಿದರೆ ಪರಿಣಾಮ ಗಂಭೀರವಾಗುವುದೆಂಬ ಎಚ್ಚರಿಕೆಯನ್ನೂ ಆತ ಆಕೆಗೆ ನೀಡಿದ್ದ.
 
ಆದರೆ ಅತ್ಯಾಚಾರ ಸಂತ್ರಸ್ತ ವಿವಾಹಿತೆಯು ಪೊಲೀಸರಿಗೆ ಪ್ರಕರಣದ ಬಗ್ಗೆ ದೂರು ನೀಡಿ ಎಫ್ಐಆರ್‌ ದಾಖಲಿಸಿದಳು. ಇದರ ಆಧಾರದಲ್ಲಿ ಪೊಲೀಸರು ಅತ್ಯಾಚಾರಿ ಚಿಕ್ಕಪ್ಪನನ್ನು ಬಂಧಿಸಿ ಆತನ ಮೇಲೆ ಐಪಿಸಿ ಸೆ.376 (ರೇಪ್‌) ಮತ್ತು ಸೆ.506 (ಕ್ರಿಮಿನಲ್‌ ಬೆದರಿಕೆ) ಕೇಸು ಹಾಕಿದರು. ತನಿಖೆ ನಡೆಯುತ್ತಿದೆ.
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments