Webdunia - Bharat's app for daily news and videos

Install App

5,000 ಸಾಲ ತೀರಿಸಲಾಗದೇ ಪತ್ನಿಯನ್ನೇ ಬಳಸಿಕೋ ಎಂದ!

Webdunia
ಗುರುವಾರ, 6 ಅಕ್ಟೋಬರ್ 2016 (16:32 IST)
ತನ್ನ ಸ್ನೇಹಿತ ನೀಡಿದ 5,000 ರೂಪಾಯಿಯನ್ನು ಹಿಂತಿರುಗಿಸಲು ವಿಫಲನಾದ ಹೇಡಿ ಪತಿಯೊಬ್ಬ ತನ್ನ ಪತ್ನಿಯನ್ನು ಅತ್ಯಾಚಾರವೆಸಗಲು ಅವಕಾಶ ನೀಡಿದ ಹೇಯ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. 
 
ಸೆಪ್ಟೆಂಬರ್ 29 ರಂದು ಗಾಜಿಯಾಬಾದ್‌ನಲ್ಲಿ ಈ ಘಟನೆ ನಡೆದಿದ್ದು 26 ವರ್ಷದ ಮಹಿಳೆ, ಆಕೆಯ ನಿವಾಸದಲ್ಲಿಯೇ ಪತಿಯ ಗೆಳೆಯನಿಂದ ಅತ್ಯಾಚಾರಕ್ಕೆ ಒಳಗಾಗಿದ್ದಾಳೆ. 
 
ಬುಲಂದಶಹರ್ ಮೂಲದ ಪೀಡಿತೆ ಮತ್ತು ಆಕೆಯ ಪತಿ ನರೇಶ್ (30) ತಮ್ಮಿಬ್ಬರು ಪುಟ್ಟ ಮಕ್ಕಳೊಂದಿಗೆ ಲೋನಿಯಲ್ಲಿ ವಾಸವಾಗಿದ್ದಾರೆ. ಆರೋಪಿ ಟಿಂಕು ದೆಹಲಿಯಲ್ಲಿನ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಾನೆ.
 
ಸೆಪ್ಟೆಂಬರ್ 29 ರಂದು ಪೀಡಿತೆಯ ಪತಿ ನರೇಶ್ ತನ್ನ ಗೆಳೆಯ ಟಿಂಕು ವರ್ಮಾ ಜತೆ ಮನೆಗೆ ಬಂದ. ಅವರಿಬ್ಬರು ಕಂಠಪೂರ್ತಿ ಮದ್ಯ ಸೇವಿಸಿದರು. ಬಳಿಕ ತನ್ನ ಗೆಳೆಯನ ಅನುಮತಿಯ ಮೇರೆಗೆ ಟಿಂಕು ನರೇಶ್ ಪತ್ನಿಯ ಮೇಲೆ ಅತ್ಯಾಚಾರವೆಸಗಿದ.
 
ಪತಿಯ ಈ ದ್ರೋಹದಿಂದ ನೊಂದ ಪತ್ನಿ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. 
 
ಸಾಲವನ್ನು ತೀರಿಸಲಾಗದೇ ನನ್ನ ಪತಿ ಗೆಳೆಯನಿಗೆ ನನ್ನ ಮೇಲೆ ಅತ್ಯಾಚಾರವೆಸಗಲು ಅವಕಾಶ ಮಾಡಿಕೊಟ್ಟ. ಆತ ಅಲ್ಲಿಂದ ತೆರಳಿದ ಮೇಲೆ ಪತಿಯೂ ನನ್ನ ಮೇಲರಗಿದ. ಗೆಳೆಯನಿಂದ ಅತ್ಯಾಚಾರವಾಗಿದ್ದನ್ನು ಯಾರಿಗಾದರೂ ಹೇಳಿದರೆ ನಿನ್ನ ಸಹೋದರರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ ಎಂದು ಪೀಡಿತೆ ಅಕ್ಟೋಬರ್ 1 ರಂದು ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.
 
ಪೀಡಿತಳ ಪತಿ ಆರೋಪವನ್ನು ಅಲ್ಲಗಳೆದಿದ್ದಾನೆ. ಆದರೆ ಟಿಂಕು ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದನ್ನು ಒಪ್ಪಿಕೊಂಡಿದ್ದಾನೆ. ಆ ಸಮಯದಲ್ಲಿ ಪೀಡಿತೆಯ ಪತಿ ಮನೆಯ ಮುಖ್ಯ ಗೇಟ್ ಬಳಿ ನಿಂತುಕೊಂಡು ಎಲ್ಲವನ್ನು ನೋಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.  
 
ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Video: ಜಮ್ಮು ಮೇಲೆ ದಾಳಿಗೆ ಯತ್ನಿಸಿದ ಪಾಕಿಸ್ತಾನ, ಲಾಹೋರ್ ನತ್ತ ನುಗ್ಗಿದ ಭಾರತ

Operation Sindoor ಬಗ್ಗೆ ಅಚ್ಚರಿ ಹೇಳಿಕೆ ನೀಡಿದ ಭಾರತದಲ್ಲಿರುವ ಪಾಕ್‌ ಮಹಿಳೆ

Sofiya Qureshi, ಪಾಕ್‌ ಸೇನೆಯ ಪ್ರಯತ್ನವೆಲ್ಲ ವಿಫಲ: ಕರ್ನಲ್ ಸೋಫಿಯಾ ಖುರೇಷಿ

Operation Sindoor, ಇದು ನಮಗೆ ಹೆಮ್ಮೆಯ ಸಂಗತಿ: ರಾಜನಾಥ್ ಸಿಂಗ್‌

Operation Sindoor: ರಾಜ್ಯ ಸರ್ಕಾರದಿಂದ ನಾಳೆ ತಿರಂಗಾ ಯಾತ್ರೆ

ಮುಂದಿನ ಸುದ್ದಿ