ನವದೆಹಲಿ : ಉಕ್ರೇನ್ನ ಮೇಲೆ ರಷ್ಯಾ ದಾಳಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಟ್ವೀಟ್ ಮಾಡಿ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಸಹಾಯವನ್ನು ಕೋರಿದ್ದಾರೆ.
ವಿಶ್ವಸಂಸ್ಥೆಯಲ್ಲಿ ಉಕ್ರೇನ್ ವಿರುದ್ಧ ರಷ್ಯಾದ ಆಕ್ರಮಣವನ್ನು ಖಂಡಿಸುವ ನಿರ್ಣಯದಿಂದ ದೂರವುಳಿದ ನಿರ್ಧಾರವನ್ನು ರಷ್ಯಾ ಶ್ಲಾಘಿಸಿತ್ತು. ಇದಾದ ಬಳಿಕ ಉಕ್ರೇನ್ ಅಧ್ಯಕ್ಷ ಅವರು ಪ್ರಧಾನಿ ಅವರೊಂದಿಗೆ ಮಾತನಾಡಿ ರಾಜಕೀಯ ಬೆಂಬಲ ಕೋರಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ.
1 ಲಕ್ಷಕ್ಕೂ ಹೆಚ್ಚು ಸೈನಿಕರಿಂದ ರಷ್ಯಾ ದಾಳಿ ಮಾಡುತ್ತಿದೆ. ಈ ಬಗ್ಗೆ ಪ್ರಧಾನಿ ಮೋದಿ ಅವರಿಗೆ ವಿವರಿಸಿದ್ದೇನೆ. ಜೊತೆಗೆ ಶಾಂತಿಯುತ ಪ್ರಯತ್ನಗಳಿಗೆ ಭಾರತ ಸರ್ಕಾರ ಸಹಕರಿಸಲು ಸಿದ್ಧ ಎಂದು ತಿಳಿಸಿದೆ ಎಂದು ಉಕ್ರೇನ್ ಅಧ್ಯಕ್ಷ ಟ್ವೀಟ್ ಮಾಡಿದ್ದಾರೆ.
ಈ ಬಗ್ಗೆ ಪ್ರಧಾನಿ ಕಚೇರಿ ಪ್ರಕಟನೆ ಹೊರಡಿಸಿದ್ದು, ಉಕ್ರೇನ್ ರಷ್ಯಾ ನಡುವಿನ ಯುದ್ಧದಲ್ಲಿ ಉಂಟಾದ ಸಾವು, ನೋವು ಆಸ್ತಿ-ಪಾಸ್ತಿ ಹಾನಿಗೆ ತೀವ್ರ ದುಃಖ ವ್ಯಕ್ತಪಡಿಸಿದರು.
ಉಕ್ರೇನ್ನಲ್ಲಿರುವ ವಿದ್ಯಾರ್ಥಿಗಳು ಸೇರಿದಂತೆ ಭಾರತೀಯ ನಾಗರಿಕರ ಸುರಕ್ಷತೆ ಮತ್ತು ಭದ್ರತೆಯ ಬಗ್ಗೆ ಕಾಳಜಿ ವ್ಯಕ್ತಪಡಿಸಿ, ಅವರನ್ನು ತವರಿಗೆ ಕರೆತರಲು ಉಕ್ರೇನ್ ಅಧಿಕಾರಿಗಳ ಸಹಾಯವನ್ನು ಕೋರಿದರು ಎಂದು ತಿಳಿಸಿದೆ.