Select Your Language

Notifications

webdunia
webdunia
webdunia
webdunia

ಪೈಶಾಚಿಕತೆಯ ಪರಮಾವಧಿ: ಎರಡು ವರ್ಷದ ಹಸುಳೆಯ ಮೇಲೆ ಅತ್ಯಾಚಾರ

ಪೈಶಾಚಿಕತೆಯ ಪರಮಾವಧಿ: ಎರಡು ವರ್ಷದ ಹಸುಳೆಯ ಮೇಲೆ ಅತ್ಯಾಚಾರ
ಗುರಗಾಂವ್ , ಶನಿವಾರ, 2 ಆಗಸ್ಟ್ 2014 (12:23 IST)
ದೇಶದಲ್ಲಿ ಹೆಣ್ಣಿನ ಮೇಲೆ ನಡೆಯುತ್ತಿರುವ ದೌರ್ಜನ್ಯ ನಿಲ್ಲುವ ಸೂಚನೆ ಕಾಣುತ್ತಿಲ್ಲ. ಹೆಚ್ಚಿನ ಶೋಷಣೆ ಬಾಲಕಿಯರ ಮೇಲೆ ಮತ್ತು ಪುಟ್ಟ ಪುಟ್ಟ ಹಸುಳೆಗಳ ಮೇಲೆ ನಡೆಯುತ್ತಿದ್ದು, ಶಿಸುಕಾಮದಂತ ಪೈಶಾಚಿಕತೆ ದೇಶವಾಸಿಗಳನ್ನು ಬೆಚ್ಚಿಬೀಳಿಸುತ್ತಿದೆ. ಇದಕ್ಕೆ ಉದಾಹರಣೆ ಎಂಬಂತೆ  ಎರಡು ವರ್ಷದ ಪುಟ್ಟ ಹಸುಳೆಯ ಮೇಲೆ ಅತ್ಯಾಚಾರದಂತ ಕ್ಷಮೆ ಇಲ್ಲದ ತಪ್ಪನ್ನು ಕೀಚಕನೊಬ್ಬ ನಡೆಸಿದ್ದಾನೆ. 

ಪೋಲಿಸರ ಪ್ರಕಾರ  ಸಿಕಂದರ್ ಪುರದ ತನ್ನ ನಿವಾಸದ ಮುಂದೆ ಆಡುತ್ತಿದ್ದ ಮಗು ಇದ್ದಕ್ಕಿದ್ದಂತೆ ನಾಪತ್ತೆಯಾಯಿತು. ಮಗು ಕಾಣದಾದುದನ್ನು ಗಮನಿಸಿದ ತಾಯಿ ಆಕೆ ನೆರೆಮನೆಯಲ್ಲಿ ಆಟವಾಡುತ್ತಿದ್ದಾಳೆ ಎಂದುಕೊಂಡು ಸುಮ್ಮನಾದಳು. ಕೆಲ ಹೊತ್ತಿನ ನಂತರ ಅಳುತ್ತ ಬಂದ ಮಗುವಿನ ಗುಪ್ತಾಂಗದಿಂದ  ರಕ್ತ ಸುರಿಯುತ್ತಿತ್ತು. 
 
ತಕ್ಷಣ ತಾಯಿ ಆಕೆಯನ್ನು ಆಸ್ಪತ್ರೆಗೆ ಕೊಂಡೊಯ್ದಳು. ಮಗುವನ್ನು ವೈದ್ಯಕೀಯ ಪರೀಕ್ಷೆಗೆ ಒಳಡಿಸಲಾಗಿದ್ದು ಅಸ್ವಸ್ಥಳಾಗಿರುವ ಆಕೆಗೆ ಚಿಕಿತ್ಸೆ ನೀಡಲಾಗುತ್ತಿದೆ.
 
ಈ ದುಷ್ಕೃತ್ಯದ ಆರೋಪಿ ಯಾರೆಂದು ತಿಳಿದು ಬಂದಿಲ್ಲ. ಸ್ಥಳೀಯ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Share this Story:

Follow Webdunia kannada