Webdunia - Bharat's app for daily news and videos

Install App

ಎಮ್ಮೆ ಈಜಿ ದಡ ಸೇರಿತು, ಕದ್ದವರು ನೀರು ಪಾಲು

Webdunia
ಬುಧವಾರ, 28 ಸೆಪ್ಟಂಬರ್ 2016 (12:44 IST)
ಎಮ್ಮೆಯನ್ನು ಕದಿಯಲು ಹೋದ ಕಳ್ಳರಿಬ್ಬರು ನೀರುಪಾಲಾದ ಘಟನೆ ರಾಜಸ್ಥಾನ ಮತ್ತು ಮಧ್ಯಪ್ರದೇಶ ಗಡಿಯ ಚಂಬಲ್ ನದಿಯ ದಿಹಾಲಿ ಪ್ರದೇಶದಲ್ಲಿ ನಡೆದಿದೆ.  

 
ಎಮ್ಮೆಯನ್ನು ಕದ್ದ ಕಳ್ಳರಿಬ್ಬರು ಬಳಿಕ ಚಂಬಲ್ ನದಿಯನ್ನು ದಾಟುವಾಗ ನಾಪತ್ತೆಯಾಗಿದ್ದಾರೆ. ಆದರೆ ಎಮ್ಮೆ ಮಾತ್ರ ಈಜಿ ದಡ ಸೇರುವಲ್ಲಿ ಯಶಸ್ವಿಯಾಗಿದೆ. 
 
ಆದರೆ ಅವರು ಕದ್ದ ಎಮ್ಮೆ ಸೋಮವಾರ ಮಧ್ಯಪ್ರದೇಶದ ಕೊಥಾಲಾ ಗ್ರಾಮದಲ್ಲಿ ಪತ್ತೆಯಾಗಿದೆ. ಅದರ ಕೊಂಬಿಗೆ ಕಳ್ಳರು ಕಟ್ಟಿದ್ದಾರೆ ಎನ್ನಲಾದ ಪ್ಲಾಸ್ಟಿಕ್ ಕವರ್‌ಲ್ಲಿ ಎರಡು ಮೊಬೈಲ್, ಎರಡು ಜೋಡಿ ಬಟ್ಟೆ, ಮತ್ತು ಶೂ ಪತ್ತೆಯಾಗಿದೆ. 
 
ಎರಡು ದಿನಗಳಾದರೂ ಕಳ್ಳರು ಪತ್ತೆಯಾಗಿಲ್ಲದಿರುವುದು ಅವರು ನೀರಲ್ಲಿ ಮುಳುಗಿ ಸತ್ತಿರಬಹುದು ಎಂಬ ಶಂಕೆಯನ್ನು ಬಲಗೊಳಿಸಿದೆ.
 
ಎಮ್ಮೆ ಕಳ್ಳತನವಾಗಿದೆ ಎಂದು ಅದರ ಮಾಲೀಕ ಸೆಪ್ಟೆಂಬರ್ 23 ರಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ. ಸೋಮವಾರ ಅದನ್ನು ಆತನಿಗೆ ಒಪ್ಪಿಸಲಾಗಿದೆ.
 
ನಾಪತ್ತೆಯಾಗಿರುವ ಇಬ್ಬರು ಕಳ್ಳರ ಪತ್ತೆಗಾಗಿ ಶೋಧಕಾರ್ಯ ಮುಂದುವರೆದಿದೆ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಈಗೀನ ಮಕ್ಕಳಿಗೆ ಬುದ್ದಿ ಹೇಳುವುದು ಕಷ್ಟ, ಮೊಬೈಲ್ ಗೀಳು ಬಿಡು ಎಂದಿದ್ದಕ್ಕೆ ಯುವತಿ ಹೀಗೇ ಮಾಡೋದಾ

ಪಾಕ್‌ಗೆ ನುಗ್ಗಿ ಹೊಡೆಯಿರಿ: ಅಮಿತ್ ಶಾ ಬಳಿ ಇದನ್ನೇ ಹೇಳಿದ್ದೇನೆ ಎಂದ ಸಚಿವ ಸಂತೋಷ್‌ ಲಾಡ್‌

ಇಂದಿರಾಗೆ ಕಪ್ಪು ಬಾವುಟ ಪ್ರದರ್ಶಿಸಿದ್ದ ಸಿದ್ದರಾಮಯ್ಯರನ್ನು ಉಚ್ಛಾಟಿಸುವ ಧಮ್‌ ಇದ್ಯಾ: ಡಿಕೆಶಿಗೆ ಅಶೋಕ್‌ ಸವಾಲು

ಗಡಿಯಲ್ಲಿ ಮತ್ತೆ ಪಾಕ್‌ ಕಿರಿಕ್‌: ಅಪ್ರಚೋದಿತ ಗುಂಡಿನ ದಾಳಿಗೆ ತಕ್ಕ ಉತ್ತರ ನೀಡಿದ ಭಾರತೀಯ ಸೇನೆ

ಕೋಲ್ಕತ್ತಾದಲ್ಲಿ ಹೊತ್ತಿ ಉರಿದ ಹೋಟೆಲ್‌ ಕಟ್ಟಡ: 15 ಮಂದಿ ಸಜೀವ ದಹನ, ಹಲವರಿಗೆ ಗಾಯ

ಮುಂದಿನ ಸುದ್ದಿ
Show comments