Select Your Language

Notifications

webdunia
webdunia
webdunia
webdunia

28 ದಿನದಲ್ಲಿ ಚಾಲಕರಹಿತ ಕಾರು ಸಿದ್ದಪಡಿಸಿದ ಗುಜರಾತ್‌ನ ಇಬ್ಬರು ವಿಜ್ಞಾನಿಗಳು

28 ದಿನದಲ್ಲಿ ಚಾಲಕರಹಿತ ಕಾರು ಸಿದ್ದಪಡಿಸಿದ ಗುಜರಾತ್‌ನ ಇಬ್ಬರು ವಿಜ್ಞಾನಿಗಳು
ಅಹ್ಮದಾಬಾದ್ , ಶನಿವಾರ, 11 ಏಪ್ರಿಲ್ 2015 (15:10 IST)
ಗೂಗಲ್‌ನ ಚಾಲಕರಹಿತ ಕಾರು ಪ್ರೊಜೆಕ್ಟ್‌ನಿಂದ ಪ್ರೇರಿತಗೊಂಡ ಗುಜರಾತ್‌ ಮೂಲದ ಇಬ್ಬರು ವಿಜ್ಞಾನಿಗಳು 20 ದಿನಗಳಲ್ಲಿ ಸ್ವಂತ ವಿನ್ಯಾಸದ ಚಾಲಕರಹಿತ ಕಾರು ಸಿದ್ದಪಡಿಸಿ ಅಚ್ಚರಿ ಮೂಡಿಸಿದ್ದಾರೆ.

ಇಬ್ಬರು ವಿಜ್ಞಾನಿಗಳು ಸನಂದ್ ಮೂಲದ ಇಂಜಿನಿಯರಿಂಗ್ ಕಾಲೇಜಿನ ಪ್ರೊಫೆಸರ್‌ಗಳಾಗಿದ್ದು, 28 ದಿನಗಳಲ್ಲಿ ಚಾಲಕರಹಿತ ಕಾರಿನ ಮಾದರಿ ಸಿದ್ದಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾರು ತನ್ನಿಂದ ತಾನೇ ಚಾಲನೆಗೊಳ್ಳುವುದಲ್ಲದೇ ಗೇರ್ ಬದಲಾವಣೆ ಕೂಡಾ ಮಾಡಿಕೊಳ್ಳುತ್ತದೆ. ಕಾರು ಚಾಲನೆಯನ್ನು ರಿಮೋಟ್ ಮೂಲಕ ನಿಯಂತ್ರಿಸಬಹುದಾಗಿದೆ.

ಅಮಿರಾಜ್ ಕಾಲೇಜಿನ ಸಹಾಯಕ ಪ್ರೊಫೆಸರ್ ಕೌಶಲ್ ಜನಿ ಮಾತನಾಡಿ, ಚಾಲಕರಹಿತ ಕಾರಿನಲ್ಲಿ ಹೈ ರೇಂಜ್ ಕ್ಯಾಮರಾ ಮತ್ತು ವಿಡಿಯೋಗಳನ್ನು ಅಳಡಿಸಲಾಗಿದ್ದು, ಸಂಪರ್ಕ ಸಾಧನೆಗಾಗಿ 3ಜಿ ವೈರ್‌ಲೆಸ್ ಸಿಸ್ಟಮ್ ಬಳಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.  

ಮತ್ತೊಬ್ಬ ಸಹಾಯಕ ಪ್ರೊಫೆಸರ್ ನೀರವ್ ದೇಸಾಯಿ ಪ್ರಕಾರ, ರಸ್ತೆಯಲ್ಲಿ ಎದುರಿಗೆ ಬರುವ ವಾಹನಗಳನ್ನು ಗುರುತಿಸಲು ಸೆನ್ಸಾರ್‌ಗಳನ್ನು ಅಳವಡಿಸಲಾಗಿದೆ. ಇದರಿಂದಾಗಿ ಕಾರಿನ ಹಿಂದೆ ಅಥವಾ ಮುಂದೆ ಬರುವ ವಾಹನಗಳಿಗೆ ಡಿಕ್ಕಿ ಹೊಡೆಯುವುದನ್ನು ತಡೆಯಬಹುದಾಗಿದೆ ಎಂದು ವಿವರಣೆ ನೀಡಿದ್ದಾರೆ.

Share this Story:

Follow Webdunia kannada