Select Your Language

Notifications

webdunia
webdunia
webdunia
webdunia

ನಿತೀಶ್ ಡಿಎನ್‌‍ಎ ವಿವಾದ: ಪ್ರಧಾನಿ ಮೋದಿ ವಿರುದ್ಧ ಎರಡು ಪ್ರಕರಣಗಳು ದಾಖಲು

ನಿತೀಶ್ ಡಿಎನ್‌‍ಎ ವಿವಾದ: ಪ್ರಧಾನಿ ಮೋದಿ ವಿರುದ್ಧ ಎರಡು ಪ್ರಕರಣಗಳು ದಾಖಲು
ಪಾಟ್ನಾ , ಮಂಗಳವಾರ, 28 ಜುಲೈ 2015 (19:23 IST)
ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಡಿಎನ್‌ಎ ಪ್ರಶ್ನಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಎರಡು ದೂರುಗಳು ದಾಖಲಾಗಿವೆ ಎಂದು ಮೂಲಗಳು ತಿಳಿಸಿವೆ.
 
ಇಬ್ಬರು ಜೆಡಿಯು ನಾಯಕರು ಮುಜಾಫರ್‌ಪುರ್ ಮತ್ತು ಹಾಜಿಪುರ್ ಜಿಲ್ಲೆಗಳಲ್ಲಿರುವ ಕೋರ್ಟ್‌ಗಳಲ್ಲಿ ಪ್ರಧಾನಿ ಮೋದಿ ವಿರುದ್ಧ ಪ್ರಕರಣ ದಾಖಲಿಸಿದ್ದು, ಆಗಸ್ಟ್ 1 ರಂದು ವಿಚಾರಣೆಗೆ ಬರಲಿದೆ. 
 
ಪ್ರಧಾನಮಂತ್ರಿ ನರೇಂದ್ರ ಮೋದಿ ಡಿಎನ್‌ಎ ಪ್ರಶ್ನೆ ಎತ್ತುವ ಮೂಲಕ ಕೇವಲ ಮುಖ್ಯಮಂತ್ರಿ ನಿತೀಶ್ ಕುಮಾರ್‌ಗೆ ಅಪಮಾನ ಮಾಡಿಲ್ಲ. ಬಿಹಾರ್‌ನ 11 ಕೋಟಿ ಜನರಿಗೆ ಅಪಮಾನ ಮಾಡಿದ್ದಾರೆ ಎಂದು ಜೆಡಿಯು ನಾಯಕರು ಆರೋಪಿಸಿದ್ದಾರೆ.
 
ಪಾಟ್ನಾದಿಂದ 70 ಕಿ.ಮೀ ದೂರದಲ್ಲಿರುವ ಮುಜಾಫರ್‌ಪುರ್ ಜಿಲ್ಲೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದ ಮೋದಿ,  ಮುಖ್ಯಮಂತ್ರಿ ನಿತೀಶ್ ಕುಮಾರ್ ಡಿಎನ್‌ಎಯಲ್ಲಿ ಏನೋ ಸಮಸ್ಯೆಯಿರಬಹುದು. ಆದರೆ ಪ್ರಜಾಪ್ರಭುತ್ವದ ಡಿಎನ್‌ಎ‌ನಲ್ಲಿ ನಿಮ್ಮ ರಾಜಕೀಯ ವೈರಿಗಳಿಗೂ ಕೂಡಾ ಗೌರವ ನೀಡಬೇಕಾಗುತ್ತದೆ ಎಂದು ಮೋದಿ ಗುಡುಗಿದ್ದರು. 
 

Share this Story:

Follow Webdunia kannada