Select Your Language

Notifications

webdunia
webdunia
webdunia
webdunia

ಸನ್ಯಾಸಿನಿ ರೇಪ್ ಪ್ರಕರಣ: ಬಾಂಗ್ಲಾ ಮೂಲದ ಇಬ್ಬರ ಬಂಧನ

ಸನ್ಯಾಸಿನಿ ರೇಪ್ ಪ್ರಕರಣ: ಬಾಂಗ್ಲಾ ಮೂಲದ ಇಬ್ಬರ ಬಂಧನ
ಮುಂಬೈ , ಶುಕ್ರವಾರ, 27 ಮಾರ್ಚ್ 2015 (09:25 IST)
ಪಶ್ಚಿಮ ಬಂಗಾಳದ ಕಾನ್ವೆಂಟ್ ಒಂದರಲ್ಲಿ 72 ವರ್ಷದ ಕ್ರೈಸ್ತ ಸನ್ಯಾಸಿನಿಯ ಮೇಲೆ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಗುರುವಾರ ಇಬ್ಬರನ್ನು ಬಂಧಿಸಿದ್ದಾರೆ. 

ಮುಂಬೈ ಪೊಲೀಸರ ಜತೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿದ ಸಿಐಡಿ ತಂಡದವರು ಬುಧವಾರ ರಾತ್ರಿ ದಕ್ಷಿಣ ನಾಗ್ಪಾರಾದಲ್ಲಿ ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಆತನನನ್ನು ಮೊಹಮ್ಮದ್  ಸಲೀಂ ಶೈಖ್ ಎಂದು ಗುರುತಿಸಲಾಗಿದೆ. 
 
ಗೋಪಾಲ್ ಸರ್ಕಾರ್ ಎಂಬ ಇನ್ನೊಬ್ಬ ಆರೋಪಿ ಸಹ ಪೊಲೀಸರ ವಶಕ್ಕೆ ಸಿಕ್ಕಿದ್ದು ಆತನನ್ನು ಪಶ್ಚಿಮ ಬಂಗಾಲದ ಗಡಿ ಪ್ರದೇಶವಾದ ಹಬ್ರಾದಲ್ಲಿ ಬಂಧಿಸಲಾಗಿದೆ. ಇವರಿಬ್ಬರು ಸಹ ಬಂಗ್ಲಾ ಮೂಲದವರೆಂದು ಗುರುತಿಸಲಾಗಿದೆ.
 
ಮಾರ್ಚ್ 14 ರಂದು ರಾಣಾಘಾಟ್‌ನ ಕಾನ್ವೆಂಟ್‌ ಒಂದಕ್ಕೆ ನುಗ್ಗಿದ್ದ ದರೋಡೆಕೋರರ ಗುಂಪೊಂದು 72 ವರ್ಷದ ಕ್ರೈಸ್ತ ಸನ್ಯಾಸಿನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ 12 ಲಕ್ಷ ರೂಪಾಯಿ ದೋಚಿಕೊಂಡು  ಪರಾರಿಯಾಗಿತ್ತು. ಈ ವೇಳೆ ಶಾಲೆಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಅವರ ದುಷ್ಕೃತ್ಯ ಸೆರೆಯಾಗಿತ್ತು. 

Share this Story:

Follow Webdunia kannada