Webdunia - Bharat's app for daily news and videos

Install App

ವಾರ್ಧಾ ಚಂಡಮಾರುತ: ಚೆನ್ನೈನಲ್ಲಿ ನೆಲಕ್ಕುರುಳಿದ 137ಕ್ಕೂ ಹೆಚ್ಚು ಮರಗಳು

Webdunia
ಸೋಮವಾರ, 12 ಡಿಸೆಂಬರ್ 2016 (13:17 IST)
ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದ್ದು 137ಕ್ಕೂ ಹೆಚ್ಚು ಮರಗಳು ಧರೆಗುರುಳಿ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ.

ದಿವಂಗತ ಜಯಲಿತಾ ಅವರ ನಿವಾಸವಿರುವ ಫೋಯಸ್ ಗಾರ್ಡನ್‌ನಲ್ಲಿ ಒಟ್ಟು 7 ಮರಗಳು ನೆಲಕ್ಕುರುಳಿವೆ. ರಾಯಪೇಟದಲ್ಲಿ 59- ನುಂಗಮಬಾಕಮ್‌ನಲ್ಲಿ-20,  ಮಂಡವೇಲಿಯಲ್ಲಿ-23, ಗೋಪಾಲಪುರಂನಲ್ಲಿ 16 ಮರಗಳು ವಾರ್ಧಾ ಚಂಡಮಾರುತದಿಂದಾಗಿ ಧರೆಗುರುಳಿವೆ. 
 
ಹವಾಮಾನ ಇಲಾಖೆ ಪೂರ್ವ ಸೂಚನೆಯನ್ನು ಕೊಟ್ಟಿರುವುದರಿಂದ ಎದುರಾಗುವ ವಿಪತ್ತುಗಳನ್ನು ಎದುರಿಸಲು ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. 
 
ತಮಿಳುನಾಡಿನ ಇತರ ಭಾಗಗಳು ಮತ್ತು ಆಂಧ್ರ ಕರಾವಳಿಯಲ್ಲಿ ವಾರ್ಧಾ ಎಫೆಕ್ಟ್ ಆಗಲಿದೆ. ಆದರೆ ಚೆನ್ನೈ ಮಹಾನಗರವಾಗಿದ್ದು ಇಲ್ಲಿನ ಜನಜೀವನದ ಮೇಲೆ ಹೆಚ್ಚಿನ ಸಮಸ್ಯೆಗಳುಂಟಾಗಬಹುದು.
 
ಚೆನ್ನೈ ಸಂಪೂರ್ಣ ಬಂದ್ ಆಗಿದ್ದು ಜನರು ಮನೆಗಳಿಂದ ಹೊರಬರುತ್ತಿಲ್ಲ. ಆದರೆ ಗಾಳಿಯ ಅಬ್ಬರಕ್ಕೆ ಮನೆಯ ಛಾವಣಿಗಳು ಹೊರಬರುವ ಭೀತಿಯನ್ನು ಜನರು ಎದುರಿಸುತ್ತಿದ್ದಾರೆ. 
 
27 ವಿಮಾನಮಾರ್ಗಗಳನ್ನು ಬದಲಾಯಿಸಲಾಗಿದ್ದು, ಬಹುತೇಕ ಕಡೆ ರೈಲು ಮತ್ತು ಬಸ್ ಸಂಚಾರ ಸ್ಥಗಿತಗೊಂಡಿದೆ. ಚೆನ್ನೈಗೆ ಬಂದಿಳಿದಿರುವ ಮತ್ತು ಚೆನ್ನೈ ಮೂಲಕ ಬೇರೆ ಕಡೆ ಹೊರಟಿದ್ದ ರೈಲು ಪ್ರಯಾಣಿಕರು ಹೊರ ಹೋಗಲಾರದೆ ಸಿಕ್ಕಿ ಹಾಕಿಕೊಂಡಿದ್ದಾರೆ. 
 
ಕಳೆದ ವರ್ಷ ಇದೇ ಸಮಯದಲ್ಲಿ  ಭಾರಿ ಮಳೆಯಾಗಿ ಚೆನ್ನೈ ಅಕ್ಷರಶಃ ದ್ವೀಪದಂತಾಗಿತ್ತು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments