ಬೈಕ್ ಸವಾರನೊಬ್ಬನ ಫೋನ್ ಚೆಕ್ ಮಾಡಿ ಶಾಕ್ ಆದ ಟ್ರಾಫಿಕ್ ಪೊಲೀಸರು!

Webdunia
ಮಂಗಳವಾರ, 18 ಡಿಸೆಂಬರ್ 2018 (09:22 IST)
ಚೆನ್ನೈ : ಪೊಲೀಸರು ವಾಹನ ಪರಿಶೀಲನೆ ಮಾಡುವಾಗ ವ್ಯಕ್ತಿಯೊಬ್ಬ ಎಸಗಿದ ಅತ್ಯಾಚಾರ ಕೃತ್ಯ ಬೆಳಕಿಗೆ ಬಂದಿದೆ.


ಹೌದು. ಚೆನ್ನೈ ಟ್ರಾಫಿಕ್ ಪೊಲೀಸರು ಎಂದಿನಂತೆ ವಾಹನ ಪರಿಶೀಲನೆ ಮಾಡುತ್ತಿದ್ದಾಗ ಬೈಕ್ ಸವಾರನೊಬ್ಬನ ದಾಖಲಾತಿಯನ್ನು ಪರಿಶೀಲನೆ ಮಾಡಿದ್ದಾರೆ. ಆದರೆ ಆತನಲ್ಲಿದ್ದ ದಾಖಲೆಗಳಿಗೂ ಗುರುತಿನ ಪುರಾವೆಗಳಿಗೂ ತಾಳೆ ಆಗುತ್ತಿರಲಿಲ್ಲ. ಆದಕಾರಣ ಪೊಲೀಸರು ಆತನ ಮೊಬೈಲ್ ಫೋನ್ ನನ್ನು ಚೆಕ್ ಮಾಡಿದ್ದಾರೆ. ಆಗ ಆತನ ಪೋನಿನಲ್ಲಿದ್ದ ವಿಡಿಯೋಗಳನ್ನು ಕಂಡು ಒಂದು ಕ್ಷಣ ಪೊಲೀಸರೇ ದಂಗಾಗಿದ್ದಾರೆ.


ಆತ ಒಂದಲ್ಲ, ಎರಡಲ್ಲ ಬರೋಬ್ಬರಿ 50 ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದು, ಅವೆಲ್ಲವನ್ನು ತನ್ನ ಫೋನಿನಲ್ಲಿ ವಿಡಿಯೋ ಮಾಡಿದ್ದಾನೆ. ಇದನ್ನು ನೋಡಿದ ತಕ್ಷಣ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.


ವಿಚಾರಣೆ ವೇಳೆ ಆತ ಮನೆಯಲ್ಲಿ ಒಂಟಿಯಾಗಿರುವ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ ಅದನ್ನು ವಿಡಿಯೋ ಮಾಡಿ ಬ್ಲಾಕ್ ಮೇಲ್ ಮಾಡುತ್ತಿದ್ದ ಎಂಬುದಾಗಿ ತಿಳಿದುಬಂದಿದೆ. ಆದಕಾರಣ ಈ 50 ಜನ ಸಂತ್ರಸ್ತೆಯರು ಈ ಬಗ್ಗೆ ದೂರು ನೀಡಿರಲಿಲ್ಲ. ಸದ್ಯಕ್ಕೆ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಂತ್ರಸ್ತೆಯರ ಹೇಳಿಕೆಯನ್ನು ಪಡೆಯಲು ಪ್ರಯತ್ನ ಮಾಡುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Video: ಲಾರಿಯಡಿ ಸಿಲುಕಿ ಸ್ಥಳದಲ್ಲೇ ನರಳಾಡಿ ಪ್ರಾಣ ಬಿಟ್ಟ ದ್ವಿಚಕ್ರ ವಾಹನ ಸವಾರನನ್ನು ಕೇಳೋರೇ ಇಲ್ಲ

ಕಾರ್ಕಳ: ಮುಖ್ಯ ಶಿಕ್ಷಕರು ಹೇಳಿದ್ರೂ ಕೇಳದೇ ಜನಿವಾರ, ದಾರ ತೆಗೆಸುತ್ತಿದ್ದ ಶಿಕ್ಷಕ ಅಮಾನತು

ಖರ್ಗೆ ಭೇಟಿ ಫೋಟೋ ಹಾಕಿದ್ರಿ, ಮೋದಿ ಜೊತೆಗಿರುವ ಫೋಟೋ ಯಾಕಿಲ್ಲ: ಸಿದ್ದರಾಮಯ್ಯಗೆ ಪ್ರಶ್ನೆ

ಪತ್ನಿಗೆ ಅನಾರೋಗ್ಯ, ಕೆಲಸ ಕಾರ್ಯ ಬಿಟ್ಟು ಓಡಿ ಬಂದ ಸಿಎಂ ಸಿದ್ದರಾಮಯ್ಯ

Karnataka Weather: ಮುಗಿದಿಲ್ಲ ಮಳೆಗಾಲ, ಇಂದು ಈ ಜಿಲ್ಲೆಗಳಿಗೆ ಮಳೆ ಸಾಧ್ಯತೆ

ಮುಂದಿನ ಸುದ್ದಿ
Show comments