Select Your Language

Notifications

webdunia
webdunia
webdunia
webdunia

ಗಗನಕ್ಕೇರಿದ ಟೋಮೆಟೋ ಬೆಲೆ: ದೆಹಲಿಯಲ್ಲಿ ಕೆಜಿಗೆ 80 ರೂಪಾಯಿ

ಗಗನಕ್ಕೇರಿದ ಟೋಮೆಟೋ ಬೆಲೆ: ದೆಹಲಿಯಲ್ಲಿ ಕೆಜಿಗೆ 80 ರೂಪಾಯಿ
ನವದೆಹಲಿ , ಬುಧವಾರ, 23 ಜುಲೈ 2014 (17:05 IST)
ಟೋಮೆಟೋ ಬೆಲೆ ಆಕಾಶಕ್ಕೇರಿದ್ದು, ಬಹುಶಃ ದೇಶದ ಬಹುತೇಕ ಮನೆಗಳಲ್ಲಿನ ಅಡುಗೆ ಮನೆ ಪಟ್ಟಿಯಿಂದ ಟೋಮೆಟೋ ಖಾದ್ಯ ಮಿಸ್ ಆಗಿದೆ ಎನ್ನಿಸುತ್ತಿದೆ. ಏರಿಕೆಯಾಗುತ್ತಿರುವ ಟೊಮೆಟೊ ಬೆಲೆ ದೇಶದಾದ್ಯಂತ ಸಾಮಾನ್ಯ ಜನರ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. 

ರಾಷ್ಟ್ರ ರಾಜಧಾನಿಯಲ್ಲಿ ಕಳೆದ ವಾರ 60 ರೂಪಾಯಿಯಿದ್ದ ಟೊಮೆಟೋ ದರ ಈ ವಾರ 80 ರೂಪಾಯಿಗಳಿಗೆ ತಲುಪಿದೆ. ಬೆಂಗಳೂರಿನ ವಿಷಯಕ್ಕೆ ಬರುವುದಾದರೆ ಕಳೆದ ವಾರ 50 ರೂಪಾಯಿಗಳಿದ್ದ ಟೊಮೆಟೋ 68 ರೂಪಾಯಿಗಳಿಗೆ ಏರಿಕೆಯಾಗಿದೆ. 
 
ಹೈದರಾಬಾದಿನಲ್ಲಿ ಕಳೆದ ವಾರ ಚಿಲ್ಲರೆ ಟೋಮೆಟೋ ಬೆಲೆ 50 ರೂಪಾಯಿಗಳಿದ್ದರೆ,  ಈ ವಾರ 60 ರೂಪಾಯಿಗಳಾಗಿವೆ, ಚೆನ್ನೈ ಮಹಾನಗರದಲ್ಲಿ 60 ರೂಪಾಯಿಗಳಿಂದ 68 ರೂಪಾಯಿಗಳಿಗೆ ಏರಿಕೆಯಾದರೆ, ಮುಂಬೈನಲ್ಲಿ 60 ರಿಂದ 65 ರೂಪಾಯಿಗಳಿದ್ದ ಟೊಮೆಟೋ ಹಣ್ಣಿನ ರೇಟ್ 65-75 ರೂಪಾಯಿಗಳಿಗೆ (ಪ್ರತಿ ಕೆಜಿ) ಏರಿಕೆಯಾಗಿದೆ. 
 
ಈ ತಿಂಗಳ ಕೊನೆಯಲ್ಲಿ ಹೆಚ್ಚಿನ ಮಳೆಯಾದ ನಂತರ ಬೆಲೆಗಳು ತಗ್ಗಲಿವೆ ಎಂದು ಕೇಂದ್ರ  ಕೃಷಿ ಸಚಿವರಾದ ರಾಧಾ ಮೋಹನ್ ಹೇಳಿಕೆ ನೀಡಿದ್ದರು. ಹಿಂದಿನ ಸರಾಕಾರಕ್ಕಿಂತ ನಮ್ಮ ಸರಕಾರ  ತರಕಾರಿ ಬೆಲೆಗಳ ವಿಷಯದಲ್ಲಿ ಹೆಚ್ಚಿನ ಆಸಕ್ತಿ ವಹಿಸುತ್ತಿದೆ.  ಜುಲೈ ತಿಂಗಳಲ್ಲಿ ಉತ್ತಮ ಮಳೆಯಾಗಲಿದೆ ಎಂದು ಸಂಬಂಧಿಸಿದ ಇಲಾಖೆ  ಭರವಸೆ ನೀಡಿದೆ. ಆದ್ದರಿಂದ ಈ ತಿಂಗಳಲ್ಲಿ ಬೆಲೆಗಳು ತಗ್ಗಲಿವೆ ಎಂದು ರಾಧಾ ಮೋಹನ್  ಆಶ್ವಾಸನೆ ನೀಡಿದ್ದರು. 

Share this Story:

Follow Webdunia kannada