Select Your Language

Notifications

webdunia
webdunia
webdunia
webdunia

ಹಿಮಾಚಲ ಪ್ರದೇಶದಲ್ಲಿ ಸೇಬಿಗಿಂತ ಟೋಮೆಟೋ ದುಬಾರಿ

ಹಿಮಾಚಲ ಪ್ರದೇಶದಲ್ಲಿ ಸೇಬಿಗಿಂತ ಟೋಮೆಟೋ ದುಬಾರಿ
ಮನಾಲಿ , ಶುಕ್ರವಾರ, 1 ಆಗಸ್ಟ್ 2014 (15:43 IST)
ಒಂದೇ ಸಮನೆ ಏರುತ್ತಿರುವ ಟೋಮೆಟೋ ದರ ದೇಶಾದ್ಯಂತ ಅಡುಗೆ ಮಾಡುವ ಹೆಂಗಳೆಯರ ಕಣ್ಣಲ್ಲಿ ಕಣ್ಣೀರು ತರಿಸಿದರೆ, ಕುಲುವಿನ ಕೃಷಿಕರ ಪಾಲಿಗೆ ಅದು ಭಾಗ್ಯದ ಬಾಗಿಲನ್ನೇ ತೆರೆದಿದೆ. ಸ್ಥಳೀಯ ಮಾರುಕಟ್ಟೆಯಲ್ಲಿ  ಟೋಮೆಟೋ ಬೆಲೆ (ಹೋಲ್‌ಸೇಲ್‌), ಕೀಲೋಗೆ 40- 45 ರೂಪಾಯಿಗಳಾಗಿದ್ದು, ಬೆಳೆಗಾರರಿಗೆ ಹಣ್ಣುಗಳ ರಾಜ ಸೇಬಿಗಿಂತ ಹೆಚ್ಚಿನ ಲಾಭವನ್ನು ತಂದುಕೊಡುತ್ತಿದೆ. 

ಗಾಲಾ ರಾಯಲ್ ಸೇಬು ಸೇರಿದಂತೆ ಸೇಬಿನ ಆರಂಭಿಕ ವಿಧಗಳನ್ನು ಮಧ್ಯವರ್ತಿಗಳು ಕೆಜಿಗೆ ಕೇವಲ 30 ರಿಂದ 50 ರೂಪಾಯಿಗಳಿಗೆ ಖರೀದಿಸುತ್ತಿದ್ದರೆ, ಈ ಋತುಮಾನದ ದುಬಾರಿ ತರಕಾರಿ ಕಾಲಿಫ್ಲವರ್  ಕೆಜಿಗೆ 25 ರಂತೆ ಸೇಲ್ ಆಗುತ್ತಿದೆ. ಹಾಗಾಗಿ ಸೇಬು ಬೆಳೆಗಾರರು  ಟೋಮೆಟೋ ಬೆಳೆಯ ಕಡೆ ಹೆಚ್ಚು ಗಮನ ವಹಿಸುತ್ತಿದ್ದಾರೆ. 
 
ಈ ಕುರಿತು ಪ್ರತಿಕ್ರಿಯಿಸಿರುವ ಹಣ್ಣಿನ ಬೆಳೆಗಾರ ಕೌಶಲ್ ಭಾರದ್ವಾಜ್ ಸಾಮಾನ್ಯವಾಗಿ ಟೋಮೆಟೋ 25 ಕೆಜಿಗೆ 150-250 ರೂಪಾಯಿಗಳಿಗೆ  ಮಾರಾಟವಾಗುತ್ತಿತ್ತು. ಈ ಬಾರಿ  ಅದು 1,000- 1,100 ರೂಪಾಯಿಗಳಿಗೇರಿದೆ. ದುರದೃಷ್ಟಾವತ್ ಹೆಚ್ಚಿನ ರೈತರು ಟೋಮೆಟೋವನ್ನು ತುಂಡುನೆಲದಲ್ಲಿ ಬೆಳೆದಿದ್ದಾರೆ. ಆದರೂ ಕಷ್ಟಪಟ್ಟು ಬೆಳೆದ ತರಕಾರಿಗೆ ಒಳ್ಳೆ ಬೆಲೆ ಸಿಗುತ್ತಿರುವುದು  ಬಹಳ ಸಂತೋಷವಾಗಿದೆ. ಟೋಮೆಟೋ ಬೆಲೆಗಾರರಿಗೆ ಸಡಗರದ ಸುಗ್ಗಿ ಎನ್ನುತ್ತಾರೆ.  

Share this Story:

Follow Webdunia kannada