Webdunia - Bharat's app for daily news and videos

Install App

ಹಿಂದೂಗಳ ರಕ್ತದಲ್ಲೇ ಸಹನಶೀಲತೆ ಇದೆ: ನಿತಿನ್ ಗಡ್ಕರಿ

Webdunia
ಭಾನುವಾರ, 21 ಫೆಬ್ರವರಿ 2016 (12:17 IST)
ದೇಶದಲ್ಲಿ ಕಳೆದ ಕೆಲ ತಿಂಗಳಿಂದ ನಡೆಯುತ್ತಿರುವ ಬಿರುಸಿನ ಅಸಹಿಷ್ಣುತೆ ಚರ್ಚೆಯ ಮಧ್ಯೆ ಬಿಜೆಪಿ ನಾಯಕ, ಕೇಂದ್ರ ಸಚಿವ ನಿತಿನ್ ಗಡ್ಕರಿ ಹಿಂದೂ ಸಮುದಾಯದವರ ಸಹನೆಶೀಲತೆ ಬಗ್ಗೆ ಮಾತನಾಡಿದ್ದಾರೆ. 
 
ಬೃಂದಾವನದ ವಾತ್ಸಲ್ಯ ಗ್ರಾಮ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಸಚಿವರು, ಸಹಶೀಲತೆ ಹಿಂದೂಗಳ ರಕ್ತದಲ್ಲಿಯೇ ಇದೆ. ಹಿಂದೂಗಳು ಇತರ ಧರ್ಮಗಳನ್ನು ಹೊಸಕಿ ಹಾಕಲು ಎಂದಿಗೂ ಯತ್ನಿಸಿಲ್ಲ ಎಂದು ಹೇಳಿದ್ದಾರೆ.
 
ಕೆಲವರು ಹಿಂದೂ ಧರ್ಮದ ಬಗ್ಗೆ ತಪ್ಪು ಅಭಿಪ್ರಾಯಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಸಮಾಜದ ಇತರ ಸಮುದಾಯದೊಂದಿಗೆ ಸಹನೆ ಮತ್ತು ಸಹಕಾರದೊಂದಿಗೆ ಇರುವುದನ್ನು ಹಿಂದೂಗಳಿಗೆ ಹೇಳಿಕೊಡಬೇಕಿಲ್ಲ. ಅದು ಅವರ ರಕ್ತದಲ್ಲಿಯೇ ಬೆರೆತಿದೆ ಎಂದು ಕೇಂದ್ರ ಸಚಿವರು ಪ್ರತಿಪಾದಿಸಿದ್ದಾರೆ.  
 
ತೀವ್ರವಾದಿಗಳ ನಡೆಯನ್ನು ಖಂಡಿಸಿದ ಅವರು ಮೂಲಭೂತವಾದಿಗಳು ಮತ್ತು ಭಯೋತ್ಪಾದಕರು ಬದುಕಿ ಮತ್ತು ಬದುಕಲು ಬಿಡಿ ಎಂದು ಸಾರುವ ನಮ್ಮ ಮೂಲ ಸಂಸ್ಕೃತಿಯನ್ನು ತೊಡೆದು ಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. 

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments