Select Your Language

Notifications

webdunia
webdunia
webdunia
webdunia

ಇಂದು ಎಎಪಿ ಕಾರ್ಯಕಾರಿಣಿ ಸಭೆ

ಇಂದು ಎಎಪಿ ಕಾರ್ಯಕಾರಿಣಿ ಸಭೆ
ನವದೆಹಲಿ , ಬುಧವಾರ, 4 ಮಾರ್ಚ್ 2015 (12:27 IST)
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು ಎಎಪಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನು ಆಯೋಜಿಸಲಾಗಿದ್ದು, ಸಭೆಯಲ್ಲಿ ಪಕ್ಷದ ಸಂಸ್ಥಾಪಕ ಸದಸ್ಯರಾದ ಯೋಗೇಂದ್ರ ಯಾದವ್ ಹಾಗೂ ಪ್ರಶಾಂತ್ ಭೂಷಣ್ ಅವರ ಮುಂದಿನ ನಡವಳಿ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎನ್ನಲಾಗಿದೆ. 
 
ಸಭೆಯು ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ನೇತೃತ್ವದಲ್ಲಿ ನಡೆಯುತ್ತಿದ್ದು, ಪಕ್ಷದ ಪ್ರಮುಖ ಸದಸ್ಯರಾದ ಅಶುತೋಷ್, ಕುಮಾರ್ ವಿಶ್ವಾಸ್, ಸತ್ಯೇಂದ್ರ ಜೈನ್ ಸೇರಿದಂತೆ ಇತರೆ ನಾಯಕರು ಭಾಗಯಾಗಲಿದ್ದಾರೆ ಎನ್ನಲಾಗಿದೆ. 
 
ಸಭೆಯಲ್ಲಿ ಸಾರ್ವಜನಿಕವಾಗಿ ಹಲವು ಹೇಳಿಕೆಗಳನ್ನು ನೀಡುತ್ತಾ ಪಕ್ಷದ ವಿರುದ್ಧ ಸಮರ ಸಾರುತ್ತಿದ್ದಾರೆ ಎಂಬ ಆರೋಪ ಹಿನ್ನೆಲೆಯಲ್ಲಿ ಯೋಗೇಂದ್ರ ಯಾದವ್ ಹಾಗೂ ಪ್ರಶಾಂತ್ ಭೂಷಣ್ ಅವರ ರಾಜಕೀಯ ನಡವಳಿಕೆ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಗುತ್ತದೆ ಎನ್ನಲಾಗಿದೆ. 
 
ಮೂಲಗಳ ಪ್ರಕಾರ ಯೋಗೇಂದ್ರ ಯಾದವ್ ಅವರಿಗೆ ಕಿಸಾನ್ ಮೋರ್ಚಾದ ಅಧ್ಯಕ್ಷ ಸ್ಥಾನವನ್ನು ನೀಡಲು ಪಕ್ಷದ ನಾಯಕರು ತೀರ್ಮಾನಿಸಿದ್ದಾರೆ ಎನ್ನಲಾಗಿದ್ದು, ಪ್ರಶಾಂತ್ ಭೂಷಣ್ ಅವರಿಗೂ ಕೂಡ ಪಕ್ಷದ ಪ್ರಮುಖ ಹುದ್ದೆ ಸಿಗಲಿದೆ ಎನ್ನಲಾಗುತ್ತಿದೆ. ಆದರೆ ಸಾರ್ವಜನಿಕ ವಲಯದಲ್ಲಿ ಈ ಇಬ್ಬರೂ ನಾಯಕರನ್ನು ಪಕ್ಷದ ರಾಜಕೀಯ ವ್ಯವಹಾರಗಳಿಂದಲೇ ದೂರವಿಡಲು ಎಎಪಿ ಚಿಂತನೆ ನಡೆಸಿದೆ ಎನ್ನಲಾಗಿದೆ. 
 
ಇನ್ನು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಮದುಮೇಹ ಹಾಗೂ ಕೆಮ್ಮಿನ ಚಿಕಿತ್ಸೆಗಾಗಿ ಇಂದು ಸಂಜೆ ರಾಜ್ಯ ರಾಜಧಾನಿ ಬೆಂಗಳೂರು ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸಭೆಯಲ್ಲಿ ಭಾಗವಹಿಸುತ್ತಿಲ್ಲ ಎನ್ನಲಾಗಿದೆ. 
 
ಪಕ್ಷದ ಮುಖಂಡರ ಕೆಂಗಣ್ಣಿಗೆ ಗುರಿಯಾಗಿರುವ ಯೋಗೇಂದ್ರ ಯಾದವ್ ಅವರು ಕೇಜ್ರಿವಾಲ್ ಅವರನ್ನು ಈ ಹಿಂದೆ ಸುಪ್ರೀಂ ಕಮ್ಯಾಂಡೊ ಎಂದಿದ್ದರು. ಅಲ್ಲದೆ ಪಕ್ಷದಲ್ಲಿ ಏಕಮುಖ ವ್ಯಕ್ತಿಯ ದರ್ಬಾರು ಕಾಣಿಸುತ್ತಿದ್ದು, ಪಕ್ಷದ ಮೂಲ ಸಿದ್ಧಾಂತಗಳಿಗೆ ಮೌಲ್ಯ ಒದಗಿಸದೆ ಸರ್ವಾಧಿಕಾರಿ ಆಡಳಿತವನ್ನು ನಡೆಸಲಾಗುತ್ತಿದೆ ಎಂದು ಸಿಎಂ ಕೇಜ್ರಿವಾಲ್ ಅವರನ್ನು ಪರೋಕ್ಷವಾಗಿ ದೂರಿದ್ದರು. ಈ ಹೇಳಿಕೆಗೆ ಪಕ್ಷದ ಮತ್ತೋರ್ವ ಸದಸ್ಯ ಪ್ರಶಾಂತ್ ಭೂಷಣ್ ಕೂಡ ಧ್ವನಿಗೂಡಿಸಿದ್ದರು. ಈ ಹಿನ್ನೆಲೆಯಲ್ಲಿ ಪಕ್ಷದ ಎಲ್ಲಾ ಮುಖಂಡರು, ಕಾರ್ಯಕರ್ತರು ಒಂದು ಬಣದಲ್ಲಿದ್ದರೆ, ಯಾದವ್ ಹಾಗೂ ಭೂಷಣ್ ತಮ್ಮದೇ ಹೇಳಿಕೆಗಳನ್ನು ನೀಡುತ್ತಾ ಎಎಪಿ ವಿರುದ್ಧ ಸಮರ ಸಾರುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು. ಇದೇ ಬೆನ್ನಲ್ಲೇ ಕಾರ್ಯಕಾರಿಣಿ ಸಬೆ ಕರೆದಿರುವುದು ಕುತೂಹಲಕ್ಕೆ ಕಾರಣವಾಗಿದೆ. 

Share this Story:

Follow Webdunia kannada