Select Your Language

Notifications

webdunia
webdunia
webdunia
webdunia

ಜಯದತ್ತ ಮುನ್ನುಗ್ಗುತ್ತಿರುವ ಜಯಾ!

ಜಯದತ್ತ ಮುನ್ನುಗ್ಗುತ್ತಿರುವ ಜಯಾ!
ಚೆನ್ನೈ , ಮಂಗಳವಾರ, 30 ಜೂನ್ 2015 (08:41 IST)
ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಸ್ಪರ್ಧಿಸಿರುವ ಆರ್.ಕೆ. ನಗರ್ ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ ಇಂದು ಪ್ರಕಟಗೊಳ್ಳಲಿದೆ. ಶನಿವಾರ ಉಪಚುನಾವಣೆ ನಡೆದಿತ್ತು.

ಈಗಾಗಲೇ ಮತ ಎಣಿಕೆ ಪ್ರಾರಂಭವಾಗಿದ್ದು ಜಯಾ ಭರ್ಜರಿ ಮುನ್ನಡೆ ಸಾಧಿಸಿದ್ದಾರೆ. 2 ನೇ ಸುತ್ತಿನ ಮತ ಎಣಿಕೆಯಲ್ಲಿ ಅವರು 18,000 ಮತಗಳ ಮುನ್ನಡೆಯಲ್ಲಿದ್ದಾರೆ. ಮರೀನಾ ಬೀಚ್ ಸಮೀಪದ ರಾಣಿಮೇರಿ ಕಾಲೇಜಿನಲ್ಲಿ ಮತಎಣಿಕೆ ನಡೆಯುತ್ತಿದೆ. 
 
ಬಂದಿರುವ 16 ಅಂಚೆ ಮತಗಳು ಸಹ ಜಯಾ ಪರ ಇವೆ.

ಈಗಾಗಲೇ ಎರಡು ಸುತ್ತಿನ ಮತಎಣಿಕೆ ಸಂಪೂರ್ಣಗೊಂಡಿದ್ದು, ಜಯಾ 18,000 ಮತಗಳ ಮುನ್ನಡೆ ಸಾಧಿಸಿದ್ದಾರೆ. ರಾಮಸ್ವಾಮಿ ಕೇವಲ 400 ಮತಗಳನ್ನು ಪಡೆದಿದ್ದಾರೆ. ಒಟ್ಟು 17 ಸುತ್ತಿನ ಮತಎಣಿಕೆ ನಡೆಯಲಿದೆ.
 
ಮತ ಎಣಿಕೆ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್‌ನ್ನು ಕೈಗೊಳ್ಳಲಾಗಿದ್ದು 1,000 ಪೊಲೀಸರನ್ನು ರಾಣಿಮೇರಿ ಕಾಲೇಜಿನ ಸುತ್ತಮುತ್ತ ನಿಯೋಜನೆಗೊಳಿಸಲಾಗಿದೆ. 
 
ಕ್ಷೇತ್ರದಲ್ಲಿ ಒಟ್ಟು 230 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು.
 
28 ಅಭ್ಯರ್ಥಿಗಳು ಕಣಕ್ಕಿಳಿದಿದ್ದು  ಬಿಜೆಪಿ, ಕಾಂಗ್ರೆಸ್, ಎಂಡಿಎಂಕೆ. ಡಿಎಂಡಿಕೆ ಸೇರಿದಂತೆ ಪ್ರಮುಖ ಪಕ್ಷಗಳು ಮತದಾನವನ್ನು ಬಹಿಷ್ಕರಿಸಿವೆ. ಸಿಪಿಐ ಅಭ್ಯರ್ಥಿಯಾಗಿ ಸಿ. ಮಹೇಂದ್ರನ್ ಕಣಕ್ಕಿಳಿದಿದ್ದರೆ, ಸಾಮಾಜಿಕ ಹೋರಾಟಗಾರ ಟ್ರಾಫಿಕ್ ರಾಮಸ್ವಾಮಿ ಸಹ ಜಯಾಗೆ ಸವಾಲೆಸೆದಿದ್ದಾರೆ.
 
ಕರ್ನಾಟಕ ಹೈಕೋರ್ಟ್‌ನಿಂದ ನಿರಪರಾಧಿಯಾಗಿ ಸಾಬೀತಾದ ಬಳಿಕ ತಮಿಳುನಾಡು ಮುಖ್ಯಮಂತ್ರಿಯಾಗಿ ಪಟ್ಟವೇರಿದ್ದ ಜಯಾ ಶಾಸಕಿ ಸ್ಥಾನ ಪಡೆಯಲು ಈ ಚುನಾವಣೆಗೆ ಸ್ಪರ್ಧಿಸಿದ್ದರು.  

Share this Story:

Follow Webdunia kannada