Webdunia - Bharat's app for daily news and videos

Install App

64 ನೇ ಜನ್ಮದಿನದ ಸಂಭ್ರಮ: ಅಮ್ಮನ ಆರ್ಶೀವಾದ ಪಡೆದ ಪ್ರಧಾನಿ ಮೋದಿ

Webdunia
ಬುಧವಾರ, 17 ಸೆಪ್ಟಂಬರ್ 2014 (09:56 IST)
ಇಂದು ಪ್ರಧಾನಿ ಮೋದಿಯವರಿಗೆ 64ನೇ ಹುಟ್ಟುಹಬ್ಬದ ಸಂಭ್ರಮ. ಈ ನಿಮಿತ್ತ ಮುಂಜಾನೆಯೇ ಗಾಂಧಿನಗರದ ತಮ್ಮ ನಿವಾಸಕ್ಕೆ ತೆರಳಿ ತಾಯಿಯನ್ನು ಕಂಡು ಅವರಿಂದ ಆರ್ಶೀವಾದ ಪಡೆದ ಮೋದಿಯವರಿಗೆ, ತಾಯಿ ಹೀರಾ ಬೆನ್ ಸಿಹಿ ತಿನ್ನಿಸಿದರು.

ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಇದೇ ಮೊದಲ ಬಾರಿ ಅವರು ತಮ್ಮ ನಿವಾಸಕ್ಕೆ ಭೇಟಿ ನೀಡಿದ್ದಾರೆ. 
 
ಕಣಿವೆ ರಾಜ್ಯ ಕಾಶ್ಮೀರ ಭೀಕರ ಪ್ರವಾಹಕ್ಕೆ ಒಳಗಾಗಿರುವ ಹಿನ್ನೆಲೆಯಲ್ಲಿ ಅವರು ತಮ್ಮ ಜನ್ಮದಿನವನ್ನು  ಸರಳವಾಗಿ ಆಚರಿಸಿಕೊಳ್ಳುತ್ತಿದ್ದಾರೆ. 
 
ತಮ್ಮ ಜನ್ಮ ದಿನವನ್ನು ಆಚರಿಸಿ ಹಣವನ್ನು ದುಂದುವೆಚ್ಚ ಮಾಡದಿರಿ ಎಂದು ಸ್ನೇಹಿತರು, ಹಿತೈಷಿಗಳು ಮತ್ತು ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿರುವ ಅವರು, ಅದಕ್ಕೆ ಬದಲಾಗಿ ಜಮ್ಮು-ಕಾಶ್ಮೀರ ಪ್ರವಾಹ ಸಂತ್ರಸ್ತರಿಗೆ ನೆರವಾಗಿ ಎಂದು ಈ ಮೊದಲೇ ವಿನಂತಿಸಿಕೊಂಡಿದ್ದರು.
 
''ದೇಶದೆಲ್ಲೆಡೆ ಇರುವ ನನ್ನ ಸ್ನೇಹಿತರು, ಸಂಬಂಧಿಕರು, ಅಭಿಮಾನಿಗಳು ನನ್ನ ಜನ್ಮದಿನದ ನಿಮಿತ್ತ  ವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ಯೋಜನೆ ರೂಪಿಸಿದ್ದಾರೆ ಎಂದು ನನಗೆ ಮಾಹಿತಿ ಲಭಿಸಿದೆ. ಆದರೆ ನನ್ನ ಜನ್ಮದಿನವನ್ನು ಆಚರಿಸದಿರಿ ಎಂಬುದು ನನ್ನ ವಿನಮ್ರ ವಿನಂತಿ ''. 
 
''ಬದಲಾಗಿ ನನ್ನ ಜನ್ಮದಿನಾಚರಣೆಗೆ ವ್ಯಯಿಸುವ ಸಮಯ ಮತ್ತು ಸಂಪನ್ಮೂಲವನ್ನು ಜಮ್ಮು-ಕಾಶ್ಮೀರ ಸಂತ್ರಸ್ತರ ಪರಿಹಾರ ಕಾರ್ಯಾಚರಣೆ ಮತ್ತು ನೆರವಿಗೆ ವ್ಯಯಿಸಿ. ಇದು ಜಮ್ಮು ಕಾಶ್ಮೀರದ ನಮ್ಮ  ಕಾಶ್ಮೀರದ ಸಹೋದರರ ಸಹೋದರಿಯರಿಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುವ ಸಮಯ '' ಎಂದು ಮೋದಿ ಕಳೆದೆರಡು ದಿನಗಳ ಹಿಂದೆ ಮನವಿ ಮಾಡಿಕೊಂಡಿದ್ದರು. 
 
ಪ್ರಧಾನಿಯವರ ಜನ್ಮದಿನದಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಸೇರಿದಂತೆ ಅನೇಕ ಗಣ್ಯರು ಶುಭಾಶಯ ಕೋರಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments