ಪದೇ ಪದೇ ಹಣ ವಿನಿಮಯಕ್ಕೆ ಬ್ರೇಕ್ ಹಾಕಲು ನಾಳೆಯಿಂದ ಬೆರಳಿಗೆ ಇಂಕ್

Webdunia
ಮಂಗಳವಾರ, 15 ನವೆಂಬರ್ 2016 (16:41 IST)
ಹಳೆಯ 500 ಮತ್ತು 1,000ರೂಪಾಯಿ ನೋಟುಗಳ ವಿನಿಮಯ ಮಾಡಿಕೊಳ್ಳಲು ಬರುವವರಿಗೆ ಬುಧವಾರದಿಂದ ಇಂಕ್ ಹಾಕುವಂತೆ ಕೇಂದ್ರ ಸರ್ಕಾರ ಬ್ಯಾಂಕ್‌ಗಳಿಗೆ ಇಂದು ನಿರ್ದೇಶನ ನೀಡಿದೆ. 

 
ಒಬ್ಬ ವ್ಯಕ್ತಿ ಒಂದು ಬಾರಿಗೆ 4,500 ರೂಪಾಯಿ ಹಣ ವಿನಿಮಯ ಮಾಡಿಕೊಳ್ಳಬಹುದು. ಹೀಗಾಗಿ ಪದೇ ಪದೇ ಹಣ ವಿನಿಮಯ ಮಾಡಿಕೊಳ್ಳಲು ಬರುತ್ತಿರುವುದರಿಂದ ಬ್ಯಾಂಕ್‌ಗಳಲ್ಲಿ ಮತ್ತು ಎಟಿಎಂಗಳಲ್ಲಿ ಸರತಿ ಸಾಲು ಹೆಚ್ಚಾಗಿ ಜನರು ಪರದಾಡುತ್ತಿದ್ದಾರೆ. ಈ ಸಮಸ್ಯೆಗೆ ತಡೆ ಒಡ್ಡಲು ನಿರ್ಧರಿಸುವ ಕೇಂದ್ರ ಈ ಹೊಸ ನಿಯಮವನ್ನು ಜಾರಿಯಲ್ಲಿ ತರುತ್ತಿದೆ. 
 
 
ಈ ರೀತಿ ಮಾಡುವುದರಿಂದ ಅದೇ ವ್ಯಕ್ತಿ ಮತ್ತೆ ಹಣವಿನಿಮಯ ಮಾಡಿಕೊಳ್ಳಲು, ಹಣ ಪಡೆಯಲು ಬರುವುದನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ್ ದಾಸ್ ಹೇಳಿದ್ದಾರೆ. 
 
ಅಷ್ಟೇ ಅಲ್ಲದೆ ಕೆಲವರು ತಮ್ಮ ಕಪ್ಪುಹಣವನ್ನು ಬಿಳಿ ಹಣವನ್ನಾಗಿಸಿಕೊಳ್ಳಲು ಬಡವರ, ಬಂಧುವರ್ಗದವರ ಖಾತೆಗಳನ್ನು ಬಳಸುತ್ತಿದ್ದಾರೆ. ಈ ಅಕ್ರಮವನ್ನು ತಡೆಯಲು ಜನ್‌ಧನ್ ಖಾತೆಗಳನ್ನು ಪರಿಶೀಲಿಸಲಾಗುತ್ತದೆ ಎಂದಿದ್ದಾರೆ ದಾಸ್.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಿಸ್ಟರ್ ಕ್ಲೀನ್, ಸ್ಮಶಾನ ಭೂಮಿ, ಕೆರೆ ಅಂಗಳವನ್ನು ತಮ್ಮ ಹೆಸರಿಗೆ ಮಾಡಿಕೊಂಡದ್ದು ಹೇಗೆ

ಆರೋಗ್ಯದಲ್ಲಿ ಏರುಪೇರು, ವಿಶ್ರಾಂತಿಯಲ್ಲಿರುವ ಸಿದ್ದರಾಮಯ್ಯರನ್ನು ಭೇಟಿಯಾದ ಪುತ್ರ ಯತೀಂದ್ರ

ಎಐ ದುರ್ಬಳಕೆ ಬಗ್ಗೆ ಶ್ರೀಲೀಲಾ ಗರಂ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡ ನಟಿ

ಗೋವಾ ನೈಟ್‌ಕ್ಲಬ್ ದುರಂತ, ಪರಾರಿಯಾಗಿದ್ದ ಮಾಲಕ ಸಹೋದರರ ವಿಚಾರಣೆ

ಖಾಕಿ ಮೇಲೆ ಕೈ ಹಾಕಿದ ಮೂವರು ಮೂವರಿಗೆ 7 ವರ್ಷ ಜೈಲೇ ಗತಿ

ಮುಂದಿನ ಸುದ್ದಿ
Show comments