Select Your Language

Notifications

webdunia
webdunia
webdunia
webdunia

ದಂಡ ಕಟ್ಟೋಲ್ಲ, ಮೊದಲು ವಿಜಯ್ ಮಲ್ಯರನ್ನು ಹಿಡಿಯಿರಿ: ಟಿಕೆಟ್ ರಹಿತ ಮಹಿಳೆ ದುಂಬಾಲು

ದಂಡ ಕಟ್ಟೋಲ್ಲ, ಮೊದಲು ವಿಜಯ್ ಮಲ್ಯರನ್ನು ಹಿಡಿಯಿರಿ: ಟಿಕೆಟ್ ರಹಿತ ಮಹಿಳೆ ದುಂಬಾಲು
ಮುಂಬೈ: , ಬುಧವಾರ, 23 ಮಾರ್ಚ್ 2016 (07:39 IST)
ಟಿಕೆಟ್ ರಹಿತ ಪ್ರಯಾಣ ಮಾಡುತ್ತಿದ್ದ ಶ್ರೀಮಂತ ಕುಟುಂಬಕ್ಕೆ ಸೇರಿದ 44 ವರ್ಷದ ಮಹಿಳೆಯನ್ನು 260 ರೂ.ದಂಡ ಪಾವತಿಸುವಂತೆ ಕೇಳಿದಾಗ ತಾನು 260 ರೂ. ದಂಡ ಕಟ್ಟುವುದಕ್ಕೆ ಬದಲಾಗಿ ಏಳು ದಿನಗಳ ಕಾಲ ಜೈಲಿಗೆ ಹೋಗಲು ಸಿದ್ಧನಾಗಿದ್ದೇನೆ ಎಂದು ಮಹಿಳೆ ಹೇಳುತ್ತಾ,  ಮದ್ಯದ ದೊರೆ ವಿಜಯ್ ಮಲ್ಯರನ್ನು ಬಂಧಿಸಿ ಅವರಿಂದ ಮೊದಲು ಕೋಟ್ಯಂತರ ರೂ. ಸಾಲದ ಬಾಕಿ ಹಣವನ್ನು ವಸೂಲಿ ಮಾಡಲಿ ಎಂದು ಸವಾಲು ಹಾಕಿದರು.

ಭುಲೇಶ್ವರ ಪ್ರದೇಶದ ಗಗನಚುಂಬಿ ಕಟ್ಟಡದಲ್ಲಿ ವಾಸಿಸುವ ಪ್ರೇಮಲತಾ ಭನ್ಸಾಲಿ ಉಪನಗರ ಜಾಲದ ಮಹಾಲಕ್ಷ್ಮಿ ನಿಲ್ದಾಣದಲ್ಲಿ ಭಾನುವಾರ ಟಿಕೆಟ್ ಇಲ್ಲದೇ ಮಹಿಳಾ ಟಿಕೆಟ್ ತಪಾಸಕಿ ಕೈಗೆ ಸಿಕ್ಕಿಬಿದ್ದರು. ಆಗ ತಪಾಸಕಿ 260 ರೂ. ದಂಡ ಕಟ್ಟುವಂತೆ ಕೇಳಿದಾಗ ಬ್ಯಾಂಕ್‌ಗಳಿಗೆ 9000 ಕೋಟಿ ರೂ. ಸಾಲ ಬಾಕಿವುಳಿಸಿಕೊಂಡಿರುವ ಮಲ್ಯರನ್ನು ಮೊದಲು ಬಂಧಿಸಿ ಎಂದು ದಬಾಯಿಸಿದಳು
 
 ಮ್ಯಾಜಿಸ್ಟ್ರೇಟ್ ಕೋರ್ಟ್ ಎದುರು ಹಾಜರುಪಡಿಸಿ ದಂಡ ಕಟ್ಟುವಂತೆ ಸೂಚಿಸಿದರೂ ಅವರು ದಂಡ ಕಟ್ಟದೇ ತಾನು ಏಳು ದಿನ ಜೈಲಿಗೆ ಹೋಗುವುದಾಗಿ ತಿಳಿಸಿದರು.ರೈಲ್ವೆ ಮಹಿಳಾ ಪೇದೆ ಮಹಿಳೆಯನ್ನು ದಂಡ ಕಟ್ಟುವಂತೆ ಮನವೊಲಿಕೆಗೆ ಯತ್ನಿಸಿದ ಪ್ರಯತ್ನ ವ್ಯರ್ಥವಾಯಿತು. ರೈಲ್ವೆ ಅಧಿಕಾರಿಗಳ ಜತೆ 12 ಗಂಟೆ ವಾದ ಮಾಡಿದ ಮಹಿಳೆ, ಅಧಿಕಾರಿಗಳು ಮಲ್ಯರ ಬಗ್ಗೆ ಮೃದು ಧೋರಣೆ ತಾಳಿ ಜನಸಾಮಾನ್ಯರಿಗೆ ಕಿರುಕುಳ ನೀಡುವುದೇಕೆ ಎಂದು ಪ್ರಶ್ನಿಸಿದರು. 
 

Share this Story:

Follow Webdunia kannada