Select Your Language

Notifications

webdunia
webdunia
webdunia
webdunia

3 ಲೋಕಸಭೆ ಕ್ಷೇತ್ರಗಳಲ್ಲಿ ಮೋದಿ ಅಲೆ ಕೆಲಸ ಮಾಡುತ್ತದೆಯೇ?

3 ಲೋಕಸಭೆ ಕ್ಷೇತ್ರಗಳಲ್ಲಿ  ಮೋದಿ ಅಲೆ ಕೆಲಸ ಮಾಡುತ್ತದೆಯೇ?
ನವದೆಹಲಿ , ಶನಿವಾರ, 13 ಸೆಪ್ಟಂಬರ್ 2014 (13:05 IST)
ಮೂರು ಲೋಕಸಭೆ ಮತ್ತು 33 ವಿಧಾನಸಭೆ ಸ್ಥಾನಗಳಿಗೆ ಶನಿವಾರ ಉಪಚುನಾವಣೆ ನಡೆಯುತ್ತಿದ್ದು, ಬಿಜೆಪಿಗೆ  ಮತ್ತು ಲೋಕಸಭೆ ಚುನಾವಣೆಯಲ್ಲಿ ಧೂಳಿಪಟಗೊಂಡಿರುವ ವಿರೋಧ ಪಕ್ಷಗಳಿಗೆ ಫಲಿತಾಂಶ ನಿರ್ಣಾಯಕವಾಗಿದೆ.
 
ವಡೋದರಾದಿಂದ ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆ, ಮೈನ್‌ಪುರಿ ಕ್ಷೇತ್ರದಲ್ಲಿ ಮುಲಾಯಂ ಸಿಂಗ್ ರಾಜೀನಾಮೆ ಮತ್ತು ಮೇಡಕ್ ಕ್ಷೇತ್ರದಲ್ಲಿ ಕೆ.ಚಂದ್ರಶೇಖರ್ ರಾವ್ ರಾಜೀನಾಮೆಯಿಂದ ಮೂರು ಲೋಕಸಭೆ ಸ್ಥಾನಗಳಿಗೆ ಮರುಚುನಾವಣೆ ಅಗತ್ಯಬಿದ್ದಿದೆ.  ಮೂರು ಲೋಕಸಭೆ ಕ್ಷೇತ್ರಗಳಲ್ಲಿ ಈಗ ನರೇಂದ್ರ ಮೋದಿ ಅಲೆ ಕೆಲಸ ಮಾಡಿ, ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುತ್ತದೆಯೇ ಎಂಬ ಕುತೂಹಲ ಕೆರಳಿಸಿದೆ. 
 
ಮೂರು ಪ್ರಮುಖ ಲೋಕಸಭೆ ಸ್ಥಾನಗಳಲ್ಲದೇ, 33 ಅಸೆಂಬ್ಲಿ ಸ್ಥಾನಗಳಾದ ಉತ್ತರಪ್ರದೇಶ, ರಾಜಸ್ಥಾನ, ಅಸ್ಸಾಂ, ಗುಜರಾತ್, ತ್ರಿಪುರಾ, ಪಶ್ಚಿಮಬಂಗಾಳ, ಆಂಧ್ರಪ್ರದೇಶ, ಚತ್ತೀಸ್‌ಗಢ ಮತ್ತು ಸಿಕ್ಕಿಂನಲ್ಲಿ ಉಪಚುನಾವಣೆಗಳು ನಡೆಯಲಿವೆ.  ಅತ್ಯಂತ ಧ್ರುವೀಕೃತ ಉತ್ತರಪ್ರದೇಶದಲ್ಲಿ 11 ವಿಧಾನಸಭೆ ಸ್ಥಾನಗಳಿಗೆ ಚುನಾವಣೆ ನಡೆದಿವೆ. 11 ಸೀಟುಗಳ ಪೈಕಿ 10 ಸೀಟುಗಳು ಬಿಜೆಪಿ ವಶದಲ್ಲಿದ್ದು ಅಪ್ನಾ ದಳ್ ಒಂದು ಸ್ಥಾನ ಹೊಂದಿದೆ. ರಾಜಸ್ಥಾನದಲ್ಲಿ ನಾಲ್ಕು ವಿಧಾನಸಭೆ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.ಸೆ. 16ರಂದು ಮತಎಣಿಕೆ ನಡೆಯಲಿದೆ. 

Share this Story:

Follow Webdunia kannada