Select Your Language

Notifications

webdunia
webdunia
webdunia
webdunia

ಹದಿಹರೆಯದ ಯುವತಿಯ ಮೇಲೆ ಮೂವರು ಆರೋಪಿಗಳಿಂದ ಸಾಮೂಹಿಕ ಅತ್ಯಾಚಾರ

ಹದಿಹರೆಯದ ಯುವತಿಯ ಮೇಲೆ ಮೂವರು ಆರೋಪಿಗಳಿಂದ ಸಾಮೂಹಿಕ ಅತ್ಯಾಚಾರ
ಸುಭಾನ್‌ಸಿರಿ(ಅರುಣಾಚಲ್ ಪ್ರದೇಶ) , ಶುಕ್ರವಾರ, 31 ಜುಲೈ 2015 (15:04 IST)
ಹದಿಹರೆಯದ ಯುವತಿಯ ಮೇಲೆ ಗ್ಯಾಂಗ್‌ರೇಪ್ ಎಸಗಿದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
 
ಗ್ಯಾಂಗ್‌ರೇಪ್‌‍ಗೆ ಸಂಬಂಧಿಸಿದಂತೆ ದಾಪೋರ್ಜಿಯೋ ಪಟ್ಟಣದಲ್ಲಿ ಒಬ್ಬ ಆರೋಪಿಯನ್ನು ಬಂಧಿಸಲಾಗಿದ್ದು ಇಥರ ಇಬ್ಬರು ಆರೋಪಿಗಳನ್ನು ತಲಿಹಾ ಪಟ್ಟಣದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಬಾಲಕಿಯನ್ನು ಕಾರಿನಲ್ಲಿ ಅಪಹರಿಸಿದ್ದ ಕಾಮುಕರಿಂದ ಕಾರನ್ನು ಕೂಡಾ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಪ್ರಸಕ್ತ ತಿಂಗಳಲ್ಲಿ ಎರಡನೇ ರೇಪ್ ಪ್ರಕರಣ ವರದಿಯಾಗಿದೆ.
 
ಕಳೆದ ಜುಲೈ 8 ರಂದು ಮೂವರು ಆರೋಪಿಗಳು ಅಂಗವಿಕಲೆ ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿ ಪರಾರಿಯಾಗಿದ್ದರು. 
 
ಏತನ್ಮಧ್ಯೆ, ಹದಿಹರೆಯದ ಯುವತಿಯ ಮೇಲೆ ಗ್ಯಾಂಗ್‌ರೇಪ್ ಎಸಗಿರುವ ಘಟನೆ ತುಂಬಾ ಹೇಯ ಕೃತ್ಯವಾಗಿದ್ದು, ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗಳನ್ನು ಸ್ಥಾಪಿಸುವಂತೆ ಅರುಣಾಚಲ ಪ್ರದೇಶದ ಮಹಿಳಾ ಆಯೋಗ ಸರಕಾರವನ್ನು ಒತ್ತಾಯಿಸಿದೆ.
 
ಕೇವಲ ಮೂರು ವಾರಗಳ ಅಂತರದಲ್ಲಿ ಎರಡು ರೇಪ್ ಪ್ರಕರಣಗಳು ನಡೆದಿರುವುದು ನಾಚಿಕೆಗೇಡಿತನದ ಸಂಗತಿ, ಮಹಿಳೆಯರಿಗೆ ಸುರಕ್ಷತೆ ದೊರೆಯದಿರುವುದರಿಂದ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಾಗಲು ಕಾರಣವಾಗಿದೆ ಎಂದು ಮಹಿಳಾ ಆಯೋಗ ಅರುಣಾಚಲ ಪ್ರದೇಶ ಸರಕಾರಕ್ಕೆ ಛೀಮಾರಿ ಹಾಕಿದೆ. 
 

Share this Story:

Follow Webdunia kannada