Webdunia - Bharat's app for daily news and videos

Install App

ನಾನು ಜೈಲು ಸೇರಲು ಕಾರಣರಾದವರ ಸರ್ವನಾಶ ಖಚಿತ: ಶಶಿಕಲಾ

Webdunia
ಬುಧವಾರ, 15 ಫೆಬ್ರವರಿ 2017 (13:02 IST)
ಮತ್ತೆ ಬಂದೇ ಬರ್ತಿನಿ, ಮುಖ್ಯಮಂತ್ರಿಯಾಗೇ ಆಗ್ತೀನಿ,ನಾನು ಜೈಲು ಸೇರಲು ಕಾರಣರಾದವರ ಸರ್ವನಾಶ ಖಚಿತ ಎಂದು ಶಶಿಕಲಾ ಜಯಲಲಿತಾ ಸಮಾಧಿಯನ್ನು ಮೂರು ಬಾರಿ ರೋಷದಿಂದ ತಟ್ಟಿ ಪ್ರತಿಜ್ಞೆಗೈದಿದ್ದಾರೆ ಎಂದು ಎಐಎಡಿಎಂಕೆ ಮೂಲಗಳು ತಿಳಿಸಿವೆ. 
ಅಕ್ರಮ ಆಸ್ತಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ನಿಂದ ನಾಲ್ಕು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ನಟರಾಜನ್ ಬೆಂಗಳೂರಿಗೆ ತೆರಳುವ ಮುನ್ನ ದಿವಂಗತ ಮಾಜಿ ಸಿಎಂ ಜೆ.ಜಯಲಲಿತಾ ಸಮಾಧಿಗೆ ಭೇಟಿ ನೀಡಿ ಸಮಾಧಿಯನ್ನು ಮೂರು ಬಾರಿ ರೋಷದಿಂದ ತಟ್ಟಿ ಪ್ರತಿಜ್ಞೆಗೈದಿದ್ದಾರೆ.
 
ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿಗೆ ಹೋಗುವ ಮುನ್ನ ಶಶಿಕಲಾ, ಚೆನ್ನೈನ ಮರೀನಾ ಬೀಚ್‌ನಲ್ಲಿ ಜಯಲಲಿತಾ ಸಮಾಧಿಗೆ ತಲೆಬಾಗಿ ನಮಿಸಿದ್ದಾರೆ. ಆದರೆ, ಮನಸ್ಸಲ್ಲೆ ಮಾತಾಡಿಕೊಂಡು ಸಮಾದಿ ಮೇಲೆ ಮೂರು ಬಾರಿ ಪ್ರತಿಜ್ಞೆ ಮಾಡುವ ರೀತಿಯಲ್ಲಿ ತುಂಬಾನೇ ರೋಷದಿಂದ ಕೈ ತಟ್ಟಿರುವುದು ಜನತೆಗೆ ಅಚ್ಚರಿ ಉಂಟು ಮಾಡಿದೆ.
 
ಶಶಿಕಲಾ ಜೊತೆಯಲ್ಲಿರುವ ಸುಧಾಕರ್ ಮತ್ತು ಇಳರಿಸಿ ಕೂಡಾ ಜಯಲಲಿತಾ ಸಮಾಧಿಗೆ ನಮಿಸಿ, ನಂತರ ಬೆಂಗಳೂರಿಗೆ ತೆರಳಿದ್ದಾರೆ.
 
ನಿನ್ನೆ ಬೆಳಿಗ್ಗೆ ಸುಪ್ರೀಂಕೋರ್ಟ್ ಅಕ್ರಮ ಆಸ್ತಿ ಪ್ರಕರಣದಲ್ಲಿ ಶಶಿಕಲಾ, ಶಶಿಕಲಾ ಪುತ್ರ ನಟರಾಜನ್ ಮತ್ತು ಶಶಿಕಲಾ ಅತ್ತಿಗೆ ಇಳವರಿಸಿಯವನ್ನು ಅಪರಾಧಿಗಳು ಎಂದು ಘೋಷಿಸಿ, ತಕ್ಷಣದಿಂದಲೇ ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಶರಣಾಗುವಂತೆ ಆದೇಶ ನೀಡಿತ್ತು.
 
ಒಂದು ತಿಂಗಳುಗಳ ಕಾಲಾವಕಾಶ ನೀಡುವಂತೆ ಕೋರಿ ಶಶಿಕಲಾ, ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದ್ದರಿಂದ ಶಶಿಕಲಾ ಮತ್ತು ಆಕೆಯ ಸಹಚರರು ಇಂದು ಪರಪ್ಪನ ಅಗ್ರಹಾರ ಜೈಲು ಸೇರಬೇಕಾದ ಅನಿವಾರ್ಯತೆ ಎದುರಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Rahul Gandhi: ಬಿಹಾರ ಪೊಲೀಸರು ನನ್ನನ್ನು ತಡೆಯಲು ಸಾಧ್ಯವಾಗಲಿಲ್ಲ: ರಾಹುಲ್ ಗಾಂಧಿ

Rajnath Singh: ಭಾರತ ಯುದ್ಧವನ್ನು ಬೆಂಬಲಿಸುವುದಿಲ್ಲ, ನಮ್ಮ ತಂಟೆಗೆ ಬಂದರೆ ಬಿಡಲ್ಲ: ರಾಜನಾಥ ಸಿಂಗ್‌

ಸೇನೆ, ಮೋದಿ ವಿರುದ್ಧ ಅವಹೇಳನಕಾರಿ ಪೋಸ್ಟ್‌: ರಾಯಚೂರಿನಲ್ಲಿ ಮುಸ್ಲಿಂ ವ್ಯಕ್ತಿ ಅರೆಸ್ಟ್‌

India Pakistan: ನಮ್ಮ ದೇಶದಲ್ಲಿನ್ನು ಪಾಕಿಸ್ತಾನ ಧ್ವಜ, ಸರಕು ಮಾರಾಟ ಮಾಡುವಂತಿಲ್ಲ

ಸೋಫಿಯಾ ಖುರೇಷಿ ವಿರುದ್ಧ ನಾಲಗೆ ಹರಿಬಿಟ್ಟ ಸಚಿವ ವಿಜಯ್ ಶಾಗೆ ಕ್ಲಾಸ್‌ ತೆಗೆದುಕೊಂಡ ಸುಪ್ರೀಂಕೋರ್ಟ್‌

ಮುಂದಿನ ಸುದ್ದಿ
Show comments