Select Your Language

Notifications

webdunia
webdunia
webdunia
webdunia

ಮಾನವೀಯತೆಯಲ್ಲಿ ನಂಬಿಕೆಯಿದ್ದವರು ಒಂದಾಗಿ ಭಯೋತ್ಪಾದನೆಯನ್ನು ಸೋಲಿಸಬೇಕು: ಪ್ರಧಾನಿ ಮೋದಿ

ಮಾನವೀಯತೆಯಲ್ಲಿ ನಂಬಿಕೆಯಿದ್ದವರು ಒಂದಾಗಿ ಭಯೋತ್ಪಾದನೆಯನ್ನು ಸೋಲಿಸಬೇಕು: ಪ್ರಧಾನಿ ಮೋದಿ
ನೈರೋಬಿ , ಸೋಮವಾರ, 11 ಜುಲೈ 2016 (19:33 IST)
ಜಾಗತಿಕ ಆರ್ಥಿಕ ಕುಸಿತದ ಮಧ್ಯೆಯೂ ಭಾರತ ಆರ್ಥಿಕತೆ ಚೇತರಿಕೆಯತ್ತ ಸಾಗುತ್ತಿದ್ದು ಪ್ರಸ್ತುತವಿರುವ ಶೇ7.6 ರಷ್ಟು ಆರ್ಥಿಕ ದರವನ್ನು ವರ್ಷಾಂತ್ಯಕ್ಕೆ ಶೇ.8ಕ್ಕೆ ತಲುಪಿಸುವ ಗುರಿಯನ್ನು ಹೊಂದಿದ್ದೇವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
 
ಭಯೋತ್ಪಾದನೆ ವಿಶ್ವಕ್ಕೆ ಸವಾಲಾಗಿ ಪರಿಣಮಿಸಿದ್ದು, ಮಾನವೀಯತೆಯಲ್ಲಿ ನಂಬಿಕೆಯಿದ್ದವರು ಒಂದಾಗಿ ಮಾನವೀಯತೆಯ ವಿರೋಧಿಯಾದ ಭಯೋತ್ಪಾದನೆಯನ್ನು ಸೋಲಿಸುವುದು ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ.
 
ಪ್ರೇಕ್ಷಕರು ಮೋದಿ ಮೋದಿ ಎನ್ನುವ ಘೋಷಣೆಗಳನ್ನು ಕೂಗುತ್ತಾ ಪ್ರಧಾನಿ ಮೋದಿಯನ್ನು ಬೆಂಬಲಿಸುತ್ತಿದ್ದರು. ಸುಮಾರು ಒಂದು ಗಂಟೆಕಾಲ ಭಾಷಣ ಮಾಡಿದ ಮೋದಿ ಹಲವಾರು ವಿಷಯಗಳ ಬಗ್ಗೆ ಮಾಹಿತಿ ನೀಡಿದರು. ಕಳೆದ ಎರಡು ವರ್ಷಗಳಿಂದ ದೇಶದ ಸಾಮಾನ್ಯ ನಾಗರಿಕನ ಕನಸುಗಳನ್ನು ನನಸಾಗಿಸಲು ಸರಕಾರ ಪ್ರಯತ್ನಿಸುತ್ತಿದೆ ಎಂದರು.
 
ಸುಮಾರು 20 ಸಾವಿರ ಭಾರತೀಯರಿದ್ದ ಕಸರಾನಿ ಕ್ರೀಡಾಂಗಣದಲ್ಲಿ ಪ್ರಧಾನಿ ಮೋದಿಯೊಂದಿಗೆ ಕೀನ್ಯಾದ ಅಧ್ಯಕ್ಷ ಉಹುರು ಕೆನೈಟ್ಟಾ ಕೂಡಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕೇರಳದ ಗರ್ಭವತಿ ಯುವತಿ ಐಸಿಎಸ್‌ಗೆ ಸೇರ್ಪಡೆ