ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳ 2025ರ ಸಮಯದಲ್ಲಿ ಇಂಟರ್‌ನೆಟ್‌ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ 'ಮೊನಾಲಿಸಾ' ಇದೀಗ ತನ್ನ ಮನೆ ಸೇರಿದ್ದಾಳೆ.
ಮಾಲೆ ಮಾರಾಟ ಮಾಡಿ ಜೀವನ ಸಾಗಿಸಲು ಮಹಾ ಕುಂಭಮೇಳಕ್ಕೆ ಬಂದ ಮೊನಾಲಿಸಾ ತನ್ನ ಕಣ್ಣೋಟದ ಮೂಲಕ ಹೊಸ ಹವಾ ಸೃಷ್ಟಿ ಮಾಡಿದ್ದಳು. ಎಕ್ಸ್‌ನಲ್ಲಿ ಈಕೆಯ ಸೌಂದರ್ಯದ ವಿಡಿಯೋ 15ಮಿಲಿಯನ್ ಗಳಿಸಿದ ನಂತರ ಮೊನಾಲಿಸಗೆ ಇದೀಗ ಸಮಸ್ಯೆ ಎದುರಾಗಿದೆ.
ಮಹಾಕುಂಭಮೇಳದಲ್ಲಿ ಮಾಲೆ ಮಾರಾಟ ಮಾಡಲು ಬಂದ ಮೊನಾಲಿಸಾ ಇದೀಗ ಮನೆ ದಾರಿ ನೋಡಿದ್ದಾಳೆ. ಆಕೆಯ ತಂದೆ ಇದೀಗ ಅವಳನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ.
ಕಾರಣ ಏನೆಂದರೆ ವಿಡಿಯೋ ವೈರಲ್ ಆದ ಬಳಿಕ ಆಕೆಯಿಂದ ಸರ ತೆಗೆದುಕೊಳ್ಳುವುದರಿಗಿಂತ ಸೆಲ್ಫಿ ಹಾಗೂ ವಿಡಿಯೋಗಾಗಿ ಮುಗಿ ಬಿದ್ದಿದ್ದಾರೆ. ಇದರಿಂದ ಆಕೆಯ ತಂದೆ ಕಠಿಣ ನಿರ್ಧಾರವನ್ನು ತೆಗೆದುಕೊಂಡು ಆಕೆಯನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ.
ನೆಟಿಜನ್‌ಗಳಿಂದ ಪ್ರೀತಿಯಿಂದ 'ಬ್ರೌನ್ ಬ್ಯೂಟಿ' ಎಂದು ಕರೆಯುತ್ತಾರೆ, ಮೊನಾಲಿಸಾ ಅವರ ಸರಳತೆ ಮತ್ತು ಮೋಡಿ ಪ್ರಪಂಚದಾದ್ಯಂತದ ಜನರ ಮೇಲೆ ಶಾಶ್ವತವಾದ ಪ್ರಭಾವ ಬೀರಿತು.
ಒಂದು ಕ್ಷಣದಲ್ಲಿ ಸಿಕ್ಕಾ ಫೇಮ್ ಆಕೆಯ ಜೀವನೋಪಾಯಕ್ಕೆ ದೊಡ್ಡ ಸಮಸ್ಯೆಯಾಗಿದೆ.