Webdunia - Bharat's app for daily news and videos

Install App

ಮಾಲೀಕ ಯುವತಿಯ ಮೇಲೆ ರೇಪ್ ಮಾಡಿದ, ಆತನ ಪತ್ನಿ ಅಶ್ಲೀಲ ವಿಡಿಯೋ ತೆಗೆದಳು

Webdunia
ಶನಿವಾರ, 4 ಜುಲೈ 2015 (17:02 IST)
ಹೊಟ್ಟೆಪಾಡಿಗಾಗಿ ಉದ್ಯೋಗ ಅರಸಿ ಬಂದಿದ್ದ ರೇಖಾ(ಹೆಸರು ಬದಲಿಸಲಾಗಿದೆ)ಎನ್ನುವ 19 ವರ್ಷ ವಯಸ್ಸಿನ ಯುವತಿಗೆ ಸಿಜರ್ ಬ್ಯೂಟಿ ಪಾರ್ಲರ್‌ನಲ್ಲಿ ಉದ್ಯೋಗವೇನೋ ದೊರೆಯಿತು. ಆದರೆ, ಉದ್ಯೋಗದ ಏಳು ತಿಂಗಳ ಅವಧಿ ಆಕೆಯ ಜೀವನವನ್ನು ನರಕಕ್ಕೆ ಸಾಗಿಸಿತ್ತು. 
ಬ್ಯೂಟಿ ಪಾರ್ಲರ್ ಮಾಲೀಕ ಬಂಟಿ ವರ್ಮಾಗೆ ಎರಡು ಪಾರ್ಲರ್‌ಗಳಿದ್ದು, ಪುರುಷರ ಪಾರ್ಲರ್‌ನ್ನು ಆತ ನೋಡಿಕೊಳ್ಳುತ್ತಿದ್ದರೆ ಮಹಿಳೆಯರ ಪಾರ್ಲರ್‌ನ್ನು ಆತನ ಪತ್ನಿ ರಿಂಕು ವರ್ಮಾ ನೋಡಿಕೊಳ್ಳುತ್ತಿದ್ದರು ಎನ್ನಲಾಗಿದೆ.
 
ಬ್ಯೂಟಿ ಪಾರ್ಲರ್‌ನಲ್ಲಿ ಉದ್ಯೋಗದಲ್ಲಿದ್ದ ರೇಖಾಳಿಗೆ ತಂಪು ಪಾನೀಯದಲ್ಲಿ ಮತ್ತು ಬರಿಸುವ ಔಷಧಿ ನೀಡಿದ ಮಾಲೀಕ ಬಂಟಿ, ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಮಾಲೀಕನ ವರ್ತನೆಯ ಬಗ್ಗೆ ಆತನ ಪತ್ನಿ ರಿಂಕುಗೆ ಮಾಹಿತಿ ನೀಡಲು ರೇಖಾ ನಿರ್ಧರಿಸಿದಾಗ ಬಂಟಿ ಆಕೆಗೆ ಬೆದರಿಕೆಯೊಡ್ಡಿ ಹಲವಾರು ಬಾರಿ ಅತ್ಯಾಚಾರವೆಸಗಿದ್ದಾನೆ.  
 
ಮಾಲೀಕನ ಪತ್ನಿ ರಿಂಕು ತನಗೆ ಸಹಾಯ ಮಾಡಿ ಇಂತಹ ಕೆಟ್ಟಪರಿಸ್ಥಿತಿಯಿಂದ ಹೊರಗೆ ತರಬಹುದು ಎನ್ನುವ ಆಶಾಭಾವನೆ ರೇಖಾ ಹೊಂದಿದ್ದಳು. ಉದ್ಯೋಗವನ್ನು ಬಿಟ್ಟಲ್ಲಿ ಕುಟುಂಬ ಬೀದಿಪಾಲಾಗುವ ಸಾಧ್ಯತೆಗಳಿದ್ದವು. ಆದ್ದರಿಂದ, ಸೂಕ್ಷ್ಮ ರೀತಿಯಲ್ಲಿ ಇದರಿಂದ ಪಾರಾಗಬೇಕು ಎಂದು ಬಯಸಿದ್ದಳು.   
 
ಆದರೆ, ಬಂಟಿ ಪತ್ನಿ ರಿಂಕು ರೇಖಾಳಿಗೆ ಸಹಾಯ ಮಾಡುವ ಬದಲು ಮತ್ತೊಂದು ಬಾರಿ ತನ್ನ ಪತಿ ಬಂಟಿ, ರೇಖಾಳನ್ನು ರೇಪ್ ಮಾಡುವಾಗ ಬ್ಲ್ಯೂಫಿಲ್ಮ್ ತೆಗೆದಿದ್ದಳು ಎನ್ನಲಾಗಿದೆ. 
 
ಮಾಲೀಕ ಬಂಟಿ ಮತ್ತು ಆತನ ಪತ್ನಿ ರಿಂಕು, ರೇಖಾಳಿಗೆ ರೇಪ್ ಮಾಡಿದ ಅಶ್ಲೀಲ ವಿಡಿಯೋವನ್ನು ಇಂಟರ್‌ನೆಟ್‌ನಲ್ಲಿ ಹಾಕುವ ಬೆದರಿಕೆಯೊಡ್ಡಿ ಪುರುಷರ ಪಾರ್ಲರ್‌ನಲ್ಲಿ ಕೆಲಸ ಮಾಡುವಂತೆ ಬ್ಲ್ಯಾಕ್‌ಮೇಲ್ ಮಾಡಿದ್ದಾರೆ.
 
ಮಾಲೀಕರ ಒತ್ತಡದಿಂದ ರೋಸಿ ಹೋದ ರೇಖಾ, ವಿಷ ಕುಡಿದು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾಳೆ. ಆಕೆಯ ವರ್ತನೆಯಿಂದ ಗಾಬರಿಗೊಂಡ ಕುಟುಂಬದ ಸದಸ್ಯರು ನಡೆದ ಘಟನೆಯನ್ನು ಬಹಿರಂಗಪಡಿಸುವಂತೆ ಆಕೆಯನ್ನು ಕೋರಿದ್ದಾರೆ.  
 
ರೇಖಾಳಿಂದ ಸಂಪೂರ್ಣ ಮಾಹಿತಿ ಪಡೆದ ಪೋಷಕರು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಾಲೀಕ ಬಂಟಿ ವರ್ಮಾ ಮತ್ತು ಆತನ ಪತ್ನಿ ರಿಂಕು ವರ್ಮಾ ಸೇರಿದಂತೆ ಆರು ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. 
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments